ಕಾರವಾರ, ಡಿ. 06 : ಎಂಜಿನ್ ಸಮಸ್ಯೆಯಿಂದ ಅರಬ್ಬಿ ಸಮುದ್ರದಲ್ಲಿ ದಾರಿ ತಪ್ಪಿದ ಬೋಟನ್ನು ಸುರಕ್ಷಿತವಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಕಾರವಾರದ ವಾಣಿಜ್ಯ ಬಂದರಿಗೆ ಕರೆತಂದಿರುವ ಘಟನೆ ಮಂಗಳವಾರ ಕಾರವಾರದಲ್ಲಿ ನಡೆದಿದೆ.
ಗೋವಾ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟ್ ಇದಾಗಿದೆ, ಈ ಬೋಟ್ ನಲ್ಲಿದ್ದ 26 ಜನ ಮೀನುಗಾರರಿದ್ದು, ಅವರನ್ನೆಲ್ಲಾ ರಕ್ಷಣೆ ಮಾಡಲಾಗಿದೆ. ಈ ಮೀನುಗಾರಿಕಾ ಬೋಟ್ ಗೋವಾದ ಪಣಜಿ ಮೂಲಕ ಅಂಕೋಲ ತಾಲೂಕಿನ ಬೇಲಿಕೇರಿ ಬಂದರು ಬಳಿ ಮೀನುಗಾರಿಕೆ ನಡೆಸುತಿತ್ತು.ಈ ಸಂದರ್ಭ ಎಂಜಿನ್ ಸಮಸ್ಯೆಯಾಗಿ 30 ನಾಟಿಕಲ್ ಮೈಲು ದೂರದವರೆಗೆ ಬೋಟ್ ತೇಲಿ ಹೋಗಿದೆ. ತೇಲಿ ಹೋದ ಬಳಿಕ ಬಾಹ್ಯ ಸಂಪರ್ಕ ಕಡಿದುಕೊಂಡಿತ್ತು.
ಈ ಹಿನ್ನೆಲೆ 4 ದಿನಗಳ ಕಾಲ ಮೀನುಗಾರರು ಸಮುದ್ರದಲ್ಲೇ ಕಾಲ ಕಳೆದ ಮೀನುಗಾರರನ್ನು ಕೋಸ್ಟ್ಗಾರ್ಡ್ ಸಿಬ್ಬಂದಿ ಬೋಟಿನ ಲೋಕೇಶನ್ ಪತ್ತೆಹಚ್ಚಿ ಮೀನುಗಾರರನ್ನು ಸಂಪರ್ಕಿಸಿ, ಸ್ಥಳೀಯ ಮೀನುಗಾರರ ನೆರವಿನಿಂದ ಬೋಟ್ ನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.