ಕಾಸರಗೋಡು, ಮೇ 29: ಸಹಪಾಠಿಗಳ ಜೊತೆ ಸ್ನಾನಕ್ಕೆಂದು ನದಿಗೆ ಇಳಿದ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿದ ಘಟನೆ ಕಾಸರಗೋಡು ಕಾಞ೦ಗಾಡ್ನ ಆರಾಯಿ ಎಂಬಲ್ಲಿ ಮಂಗಳವಾರ ನಡೆದಿದೆ.
ರಾಯಿ ಬಾಕೋಟ್ನ ಬಿ.ಕೆ ಮುಹಮ್ಮದ್ ಸಿನಾನ್ (16) ಮೃತ ವಿದ್ಯಾರ್ಥಿ.
ಮುಹಮ್ಮದ್ ಸಿನಾನ್ ಆರಾಯಿ ಮಂಗಳವಾರ ಇಬ್ಬರು ಸ್ನೇಹಿತರೊಂದಿಗೆ ನದಿಗೆ ಸ್ನಾನಕ್ಕಿಳಿದಿದ್ದಾನೆ. ಈ ವೇಳೆ ಸುಳಿಗೆ ಸಿಲುಕಿದ ಆತ ನೀರುಪಾಲಾಗಿದ್ದಾನೆ. ಜೊತೆಗಿದ್ದ ಇಬ್ಬರು ವಿದ್ಯಾರ್ಥಿಗಳು ಈಜಿ ದಡ ಸೇರಿದ್ದಾರೆ.