ಬೆಳ್ತಂಗಡಿ, ಮೇ. 06: ಸವಣಾಲು ಗ್ರಾಮದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕರೊಬ್ಬರು ದೇವಸ್ಥಾನದ ಹಿಂಭಾಗದಲ್ಲಿ ತಾನು ವಾಸವಿಗಿದ್ದ ಮನೆಯ ಹಿಂಬದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 4ರಂದು ನಡೆದಿದೆ.
ಶಿರಸಿ ಮೂಲದ ವಿಜಯ್ ಹೆಗಡೆ (33) ಅವರು ಆತ್ಮಹತ್ಯೆಗೆ ಶರಣಾದ ಅರ್ಚಕರು.
ವಿಜಯ್ ಹೆಗಡೆ ಅವರು ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ಮುಂಜಾನೆ ಭಕ್ತರು ಆಗಮಿಸುವ ವೇಳೆ ವಿಜಯ್ ಬರದಿರುವುದನ್ನು ಕಂಡ ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರು ಅವರು ತಂಗುತ್ತಿದ್ದ ವಸತಿಗೃಹಕ್ಕೆ ವಿಚಾರಿಸಲು ತೆರಳಿದಾಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.