ಉಳ್ಳಾಲ,ಮೇ. 07: ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಿ , ಉಳ್ಳಾಲ ವಿಧಾಸನಭಾ ಕ್ಷೇತ್ರಕ್ಕೆ ಅವಶ್ಯಕವಿರುವ ಉದ್ದೇಶದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.
ಅವರು ಪಂಡಿತ್ ಹೌಸ್ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು, ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, ಎಲ್ಲಾ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಸಮರ್ಪಕ ಕ್ರಮ ಕೈಗೊಂಡು ಸ್ವಚ್ಛ ಉಳ್ಳಾಲ ನಿರ್ಮಾಣಕ್ಕೆ ಸಂಕಲ್ಪ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉಳ್ಳಾಲ ತಾಲೂಕಿನ ಸಾರ್ವಜನಿಕರ ಬೇಡಿಕೆಯಂತೆ ಕಾಲೇಜು ನಿರ್ಮಾಣ, ನಿವೇಶನ ರಹಿತರಿಗೆ ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ಸರಕಾರಿ ಜಮೀನನ್ನು ಕಾಯ್ದಿರಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ರಚಿಸಿ ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.
ಸುದ್ಧಿಗೋಷ್ಠಿಯಲ್ಲಿ ಅಭ್ಯರ್ಥಿ ಸತೀಶ್ ಕುಂಪಲ, ಚುನಾವಣಾ ಉಸ್ತುವಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಚುನಾವಣಾ ಪ್ರವಾಸಿ ಉಸ್ತುವಾರಿ ಕುಂಟಾರು ರವೀಶ್ ತಂತ್ರಿ, ಕ್ಷೇತ್ರ ಉಸ್ತುವಾರಿ ಚೆನ್ನಪ್ಪ ಕೋಟ್ಯಾನ್, ಕಸ್ತೂರಿ ಪಂಜ, ಹೇಮಂತ್ ಶೆಟ್ಟಿ ದೇರಳಕಟ್ಟೆ ಮತ್ತಿತ್ತರರು ಉಪಸ್ಥಿತರಿದ್ದರು.
5 Comments
cafe ambience
Os telemóveis Samsung sempre foram uma das marcas mais populares do mercado com uma variedade de funcionalidades, sendo a gravação de voz uma delas.
Pingback: เกมไพ่
Pingback: สล็อตแตกง่ายสล็อตเว็บตรงสล็อตpg
Pingback: ozempic coupon