ಮಂಗಳೂರು, ಜೂ. 20 : ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆಯ 2009 ರಿಂದ ಮಾನಸಿಕ ಅಸ್ವಸ್ಥರ ರಕ್ಷಣೆ, ಶೂಶ್ರುಷೆ, ಔಷೋದೊಪಚಾರ ಆರೋಗ್ಯ, ಪುನರ್ವಸತಿ ಒದಗಿಸುವ ನಿರಂತರ ಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ.
ಈ ಸಂಸ್ಥೆಯು ಹತ್ತು ಹಲವು ಯೋಜನೆಗಳ ಅನುಷ್ಠಾನ, ಪ್ರಸ್ತುತ ದಾಖಲಿರುವ 375 ನಿವಾಸಿಗಳ ಅಗತ್ಯತೆಗಳು, ಮನೋರೋಗ ಚಿಕಿತ್ಸೆ ಡಿ ಎ ಡಿಕ್ಷನ್ ಹಾಗೂ ವಿಶೇಷ ಅಗತ್ಯವುಳ್ಳ ಕುಟುಂಬ ಸದಸ್ಯರ ಶಿಕ್ಷಣ ಹಾಗೂ ಇತರ ಯೋಜನೆಗಳ ಸಹಾಯಾರ್ಥ ಕಾರ್ಯಕ್ರಮದ ರೂವಾರಿ ಕೆವಿನ್ ಮಿಸ್ಕಿತ್ ಅವರ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಇದೇ ಭಾನುವಾರ 21-6-2026 ರಂದು ಮಂಗಳೂರಿನ ಟಾನ್ ಹಾಲ್ ನಲ್ಲಿ ಸಂಜೆ 6.00 ಘಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.











