ಮಂಗಳೂರು: ಅ.09 : ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ರವರ ಮಾರ್ಗದರ್ಶನದೊಂದಿಗೆ ವಿಕಸಿತ ಭಾರತ ಕಲ್ಪನೆಯಡಿ ಬೃಹದಾಕಾರವಾಗಿ ರಚಿಸಿದ “ರಾಷ್ಟ್ರದೊಂದಿಗೆ ರಂಗೋಲಿ” ಎಂಬ ಕಾರ್ಯಕ್ರಮವು ಕುದ್ರೋಳಿ ಶ್ರೀ ಭಗವತಿ ದೇವಸ್ಥಾನದ ಕೂಟಕ್ಕಳ ಸಭಾಭವನದಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ, ಇದು ಕೇವಲ ರಂಗೋಲಿಯಲ್ಲ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಕನಸಿನ ಭಾರತದ ಕಲ್ಪನೆಯನ್ನು ಹೊತ್ತು ಬಿಡಿಸಿದ ರಂಗೋಲಿಯಾಗಿದೆ ಎಂದರು.
ಸಂಸದರಾದ ಕ್ಯಾ.ಬೃಜೇಶ್ ಚೌಟ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ನಿರಂತರ ಜನಸೇವೆಯ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ವಿಕಸಿತ ಭಾರತ ಕಲ್ಪನೆಯಡಿ ರಂಗೋಲಿ ಕಾರ್ಯಕ್ರಮವನ್ನು ಈ ಸಭಾಭವನದಲ್ಲಿ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಇಂದು ಅಭಿವೃದ್ಧಿ ಸಾಧಿಸುತ್ತಿದೆ. ಅವರ ಅಭಿವೃದ್ಧಿ ಕಾರ್ಯಗಳು ಜನರಿಗೆ ತಲುಪಿಸುವ ಕೆಲಸ ಪಕ್ಷದಿಂದ ಆಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಸುಜೀತ್ ಪ್ರತಾಪ್, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ನಂದನ್ ಮಲ್ಯ, ಮಂಜುಳಾ ರಾವ್, ವಸಂತ ಪೂಜಾರಿ, ಸಂಧ್ಯಾ ವೆಂಕಟೇಶ್, ವಿಜಯ ಕುಮಾರ್ ಶೆಟ್ಟಿ, ದೀಪಕ್ ಪೈ, ಗೌತಮ್ ಕೋಡಿಕಲ್, ಜಯ ಕುಮಾರ್, ಅಮಿತ್ ರಾಜ್, ಶಬರೀಶ್, ಮೋಹನ್ ಪೂಜಾರಿ, ರವಿಚಂದ್ರ, ಪ್ರವೀಣ್ ನಿಡ್ಡೆಲ್, ಉದಯ್ ಡಿಸೋಜಾ, ಪ್ರಶಾಂತ್ ಮರೋಳಿ, ಪೂರ್ಣಿಮ ರಾವ್, ಲೀಲಾವತಿ ಪ್ರಕಾಶ್, ಚಂದ್ರಾವತಿ ವಿಶ್ವನಾಥ್, ಗಣೇಶ್ ಕುಲಾಲ್, ಶೋಭಾ ಪೂಜಾರಿ, ವೀಣಾ ಮಂಗಳ ಹಾಗೂ ರಂಗೋಲಿಯನ್ನು ರಚಿಸಿದ ಸತೀಶ್ಚಂದ್ರ ಮತ್ತು ವೀಣಾ ಐತಾಳ್ ಉಪಸ್ಥಿತರಿದ್ದರು.











