ಬೆಂಗಳೂರು, ಡಿ. 28: ನಿಗದಿತ ಕಿ.ಮೀ. ಗಳಷ್ಟು ಸಂಚರಿಸಿದ ಬಳಿಕ ಸಾಮರ್ಥ್ಯ ಕಳೆದುಕೊಂಡ ಕೆಎಸ್ ಆರ್ ಸಿ ಬಸ್ ಗಳನ್ನು ಗುಜರಿಗೆ ಹಾಕಬೇಕು. ಗುಜರಿಗೆ ಹಾಕಿದ ಬಸ್ಗಳನ್ನು ಮತ್ತೆ ಸಂಚಾರಕ್ಕೆ ಬಳಸಲು ಅನುಮತಿ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಸಾಮರ್ಥ್ಯ ಕಳೆದುಕೊಂಡು ಗುಜರಿಗೆ ಸೇರಬೇಕಾಗಿದ್ದ ಕೆಎಸ್ ಆರ್ ಟಿಸಿ ಬಸ್ ನಿಂದ ಅಪಘಾತ ಉಂಟಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣವೊಂದರಲ್ಲಿ ನ್ಯಾ. ರಾಮಚಂದ್ರ ಡಿ.ಹುದ್ದಾರ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಹತ್ವದ ಆದೇಶ ಹೊರಡಿಸಲಾಗಿದೆ.
ಬಸ್ಗಳು ಸಂಚಾರಕ್ಕೆ ಅರ್ಹವಾಗಿರುವ ಬಗ್ಗೆ ಪ್ರತಿ ವರ್ಷವೂ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಸುಸ್ಥಿತಿ ದೃಢೀಕರಣ ಪತ್ರ ಪಡೆಯಬೇಕು. ಆರ್ಟಿಓ ವತಿಯಿಂದ ದೃಢೀಕರಣ ಪತ್ರ ಪಡೆದ ಬಸ್ಗಳಿಗೆ ಮಾತ್ರವೇ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.