admin – Navaloka Media News Mangalore| Kannada Online News Portal

ಆಗಸ್ಟ್ 7, 8 : ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ
ಮಂಗಳೂರು, ಜೂ. 24 : ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 2007ರಲ್ಲಿ ಆರಂಭಗೊಂಡ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳದ 16ನೇ ಆವೃತ್ತಿಯು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ 4 ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವ ವಿಶ್ವಾಸಾರ್ಹ ವೇದಿಕೆಯಾಗಿ ಆಳ್ವಾಸ್ ಪ್ರಗತಿ ಬೆಳೆದಿದೆ ಎಂದರು.

ಸಿಎಸ್‌ಆರ್ ಅಂಗವಾಗಿ ಆಯೋಜಿಸಲಾಗುವ ಪ್ರಗತಿ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳು ಹಾಗೂ ಕಂಪನಿಗಳಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಇದುವರೆಗೆ ಪ್ರತಿಷ್ಠಾನವು 22 ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. 66,432 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದು, 40,848 ಮಂದಿಗೆ ಸ್ಥಳದಲ್ಲಿಯೇ ಉದ್ಯೋಗ ಆಫರ್ ದೊರೆತಿದೆ ಎಂದು ತಿಳಿಸಿದರು.

ಈ ಬಾರಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಉದ್ಯೋಗ ಮೇಳದಲ್ಲಿ 300ಕ್ಕೂ ಅಧಿಕ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಐಟಿ, ಬ್ಯಾಂಕಿಂಗ್, ಉತ್ಪಾದನೆ, ಔಷಧೋದ್ಯಮ, ಮಾಧ್ಯಮ, ಆರೋಗ್ಯ, ಆತಿಥ್ಯ, ನಿರ್ಮಾಣ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೇಮಕಾತಿ ನಡೆಯಲಿದೆ ಎಂದರು.

ವೈದ್ಯಕೀಯ, ಎಂಜಿನಿಯರಿಂಗ್, ಕಲಾ, ವಾಣಿಜ್ಯ, ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಿರಲಿವೆ ಎಂದು ತಿಳಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ವಿಶೇಷ ಓರಿಯಂಟೇಷನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆಗಸ್ಟ್ 6ರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಅಭ್ಯರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಮತ್ತು ಐಟಿಐ ಅಭ್ಯರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಉದ್ಯೋಗಾಕಾಂಕ್ಷಿಗಳಿಗೆ ಆನ್‌ಲೈನ್ ಕಡ್ಡಾಯವಾಗಿದ್ದು, ನೋಂದಣಿಯನ್ನು www.alvaspragati.com/candidate-registration ನಲ್ಲಿ ಉಚಿತವಾಗಿಗ ಮಾಡಬಹುದಾಗಿದೆ. ಆಗಸ್ಟ್ 7ರಂದು ಬೆಳಿಗ್ಗೆ 8 ಗಂಟೆಗೆ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಹಾಜರಿರಬೇಕು. 5-10 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು, ನವೀಕರಿಸಿದ ರೆಸ್ಯೂಮ್, ಅಂಕಪಟ್ಟಿಗಳ ದೃಢೀಕೃತ ಜೆರಾಕ್ಸ್ ಪ್ರತಿಗಳು ಹಾಗೂ ನೋಂದಣಿ ಸಂಖ್ಯೆಯನ್ನು ತರಬೇಕು ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ 9741440490, 9611750531 ಹಾಗೂ 7975223865 ಸಂಖ್ಯೆಗಳ ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ನೇಮಕಾತಿ ವಿಭಾಗದ ಮುಖ್ಯಸ್ಥೆ ರಂಜಿತಾ ಆಚಾರ್ಯ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಎಂಸಿಸಿ ಬ್ಯಾಂಕಿನಿಂದ 1,535 ಕೋಟಿ ರೂಪಾಯಿ ವ್ಯವಹಾರ : ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ
ಮಂಗಳೂರು, ಜೂ. 24 :114 ವರ್ಷಗಳ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಹಣಕಾಸು ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು ವ್ಯವಹಾರ ವಹಿವಾಟು 22.89 ಶೇಕಡಾ ಏರಿಕೆಯೊಂದಿಗೆ 1,535 ಕೋಟಿ ರೂ. ಮೈಲಿಗಲ್ಲು ತಲುಪಿದೆ . ಬ್ಯಾಂಕಿನ ನಿವ್ವಳ ಮೌಲ್ಯ 83.76 ಕೋಟಿ ರೂ.ಗಳಿಂದ 91.80 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಎನ್‌ಆರ್ಐ ಗ್ರಾಹಕರ ಬೆಂಬಲ ಬ್ಯಾಂಕಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಎಂಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಅನಿಲ್ ಲೋಬೊ ಅವರು ಬ್ಯಾಂಕಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಆಡಳಿತ ಮಂಡಳಿಯ ನೇತೃತ್ವದಲ್ಲಿ ಎಂಸಿಸಿ ಬ್ಯಾಂಕಿನ ಕಾರ್ಯವ್ಯಾಪ್ತಿ ಸಂಪೂರ್ಣ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದು, ಬ್ಯಾಂಕ್ ಸಂಪೂರ್ಣ ಕೋರ್ ಬ್ಯಾಂಕಿಂಗ್ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಮಾನವಾಗಿ ವಿವಿಧ ಹಣಕಾಸು ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುತ್ತಿರುವ ಬ್ಯಾಂಕ್, ರಾಜ್ಯಾದ್ಯಂತ ಶಾಖಾ ಜಾಲ ವಿಸ್ತರಣೆಗೆ ಆದ್ಯತೆ ನೀಡುತ್ತಿದೆ ಎಂದರು.

2018ರಲ್ಲಿ ಸಹಕಾರ ರತ್ನ ಅನಿಲ್ ಲೋಬೊ ಮತ್ತು ಅವರ ತಂಡ ಆಡಳಿತ ವಹಿಸಿಕೊಂಡ ನಂತರ ಬ್ಯಾಂಕ್ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಠೇವಣಿಗಳು ರು. 304 ಕೋಟಿಯಿಂದ ರು. 876 ಕೋಟಿಗೆ ಏರಿಕೆಯಾಗಿದ್ದು, 188% ಬೆಳವಣಿಗೆ ದಾಖಲಿಸಿದೆ. ಸಾಲ ಮತ್ತು ಮುಂಗಡಗಳು ರು. 191 ಕೋಟಿಯಿಂದ ರು. 657 ಕೋಟಿಗೆ ಏರಿಕೆಯಾಗಿದ್ದು, 243% ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.

ಷೇರು ಬಂಡವಾಳ ರು. 13 ಕೋಟಿಯಿಂದ ರು. 34 ಕೋಟಿಗೆ ಏರಿಕೆಯಾಗಿದ್ದು, 161% ಬೆಳವಣಿಗೆ ಕಂಡಿದೆ. ಮೀಸಲು ನಿಧಿ ರು. 29 ಕೋಟಿಯಿಂದ ರು. 85 ಕೋಟಿಗೆ ಏರಿಕೆಯಾಗಿದೆ. ವ್ಯವಹಾರ ವಹಿವಾಟು ರು. 496 ಕೋಟಿಯಿಂದ ರು. 1,535 ಕೋಟಿಗೆ ತಲುಪಿ 209% ಬೆಳವಣಿಗೆ ದಾಖಲಿಸಿದೆ. ಸಿ ಆರ್ ಎಆರ್ ಅನುಪಾತವು 11.70% ರಿಂದ 16.55% ಕ್ಕೆ ಸುಧಾರಿಸಿದ್ದು, ಆಸ್ತಿಗಳ ಮೇಲಿನ ಆದಾಯ 0.56% ರಿಂದ 1.40% ಕ್ಕೆ ಏರಿಕೆಯಾಗಿದೆ ಎಂದರು.

ದಕ್ಷ ಆಡಳಿತ ಮಂಡಳಿ, ಸಮರ್ಪಿತ ಸಿಬ್ಬಂದಿ ಮತ್ತು ಸಮರ್ಥ ಕಾರ್ಯತಂತ್ರದ ಯೋಜನೆಯಿಂದ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ಎಲ್ಲಾ ನಿಯಮಗಳನ್ನು ಯಶಸ್ವಿಯಾಗಿ ಪೂರೈಸಿದೆ. 22 ವರ್ಷಗಳ ನಂತರ ಬ್ಯಾಂಕ್ ಬ್ರಹ್ಮಾವರ, ಬೆಳ್ತಂಗಡಿ, ಬೆಳ್ಮಣ್, ಬೈಂದೂರು ಮತ್ತು ಸಂತೆಕಟ್ಟೆಯಲ್ಲಿ ಹೊಸ ಶಾಖೆಗಳನ್ನು ಆರಂಭಿಸುವ ಮೂಲಕ ವಿಸ್ತರಣೆಗೆ ಚಾಲನೆ ನೀಡಿದೆ ಎಂದು ತಿಳಿಸಿದರು.

ಎಂಸಿಸಿ ಬ್ಯಾಂಕಿನ 22ನೇ ದೇರಳಕಟ್ಟೆ ಶಾಖೆಯನ್ನು ಜೂನ್ 28, 2026 ರಂದು ಹಾಗೂ 23ನೇ ಕಟಪಾಡಿ, ಉಡುಪಿ ಶಾಖೆಯನ್ನು ಆಗಸ್ಟ್ 2, 2026 ರಂದು ಉದ್ಘಾಟಿಸಲಾಗುವುದು ಎಂದರು.

ದೇರಳಕಟ್ಟೆ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿಲ್ ಲೋಬೊ ವಹಿಸಲಿದ್ದಾರೆ. ಪಾನೀರ್ ಅವರ್ ಲೇಡಿ ಆಫ್ ಮರ್ಸಿ ಚರ್ಚ್ನ ಧರ್ಮಗುರು ವಂ| ವಿಕ್ಟರ್ ಡಿಮೆಲ್ಲೊ ಅವರು ಆಶೀರ್ವದಿಸಲಿದ್ದಾರೆ. ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಆರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಭೆಯ ಸುಪೀರಿಯರ್ ಜನರಲ್ ಸಿಸ್ಟರ್ ಮಿಲ್ಲಿ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಂ| ನಿಲೇಶ್ ಕ್ರಾಸ್ತಾ, ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು; ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ, ಅಧ್ಯಕ್ಷರು, ಕೋಟೆಕಾರ್ ಪಟ್ಟಣ ಪಂಚಾಯತ್ ಹಾಗೂ ಸಿ.ಎಂ. ಸತ್ತಾರ್, ಮಾಜಿ ಅಧ್ಯಕ್ಷರು, ಬೆಳ್ಮ ಗ್ರಾಮ ಪಂಚಾಯತ್ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಅನಿಲ್ ಲೋಬೊ ಅವರು ತಿಳಿಸಿದರು.

ದೇರಳಕಟ್ಟೆಯಲ್ಲಿ ಬ್ಯಾಂಕಿನ 16ನೇ ಎಟಿಎಂ ಕೂಡ ಅಂದು ಉದ್ಘಾಟನೆಗೊಳ್ಳಲಿದೆ. ಮೊರ್ಗನ್ಸ್ಗೇಟ್ ಶಾಖೆಯನ್ನು ಜುಲೈ 25 ರಂದು, ಮೂಡಬಿದಿರೆ ಶಾಖೆಯನ್ನು ಆಗಸ್ಟ್ 22 ರಂದು ಸ್ಥಳಾಂತರಿಸಿ , ಕಾರ್ಕಳ ಶಾಖೆಯನ್ನು ಆಗಸ್ಟ್ 26, 2026 ರಂದು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು.

ಎಂಸಿಸಿ ಬ್ಯಾಂಕ್ ಕಡಿಮೆ ವೆಚ್ಚದ ಲಾಕರ್ ಸೌಲಭ್ಯ, ದೇಶೀ ಹಾಗೂ ವಿದೇಶಿ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ, ಎಮ್ಎಸ್ಎಮ್ಇ ಸಾಲ, ವಾಹನ ಸಾಲ, ಗೃಹ ಸಾಲ, ಮನೆ ದುರಸ್ತಿ, ವಿವಾಹ ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿ ಸಾಲ ಸೇರಿದಂತೆ ಹಲವು ಹಣಕಾಸು ಸೇವೆಗಳನ್ನು ನೀಡುತ್ತಿದೆ. ಯಾವುದೇ ಪ್ರೊಸೆಸಿಂಗ್ ಶುಲ್ಕವಿಲ್ಲದೆ ಚಿನ್ನದ ಸಾಲ ಸೌಲಭ್ಯ ಹಾಗೂ ಉಚಿತ ಎಟಿಎಂ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಬ್ಯಾಂಕಿನ ಠೇವಣಿಗಳು ಆರ್’ಬಿಐ ಮಾರ್ಗಸೂಚಿಯಂತೆ ಡಿಐಸಿಜಿಸಿ ಅಡಿಯಲ್ಲಿ ವಿಮೆಗೊಂಡಿವೆ ಎಂದು ಅನಿಲ್ ಲೋಬೊ ಅವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಆ್ಯಂಡ್ರೂ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, , ಜೆ.ಪಿ. ರೊಡ್ರಿಗಸ್, ಅನಿಲ್ ಪತ್ರಾವೊ ಡೇವಿಡ್ ಡಿಸೋಜಾ, ಎಲ್ರಾಯ್ ಕಿರಣ್ ಕ್ರಾಸ್ಟೊ , ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜಾ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್ ಮತ್ತಿತ್ತರರು ಉಪಸ್ಥಿತರಿದ್ದರು.

ಜೂ. 28: ನಾಗರೀಕ ಸೇವಾ ಪರೀಕ್ಷಾ ಅಕಾಂಕ್ಷಿಗಳಿಗಾಗಿ ಯುಪಿಎಸ್‌ಸಿ ಪರೀಕ್ಷೆಗೆ ‘ಮಾರ್ಗದರ್ಶಿ’ಕಾರ್ಯಕ್ರಮ
ಮಂಗಳೂರು, ಜೂ. 23: ಮಂಗಳೂರು ಐಎಎಸ್, ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ರಾಮಕೃಷ್ಣ ಮಿಷನ್, ಮಂಗಳೂರು ಇವರ ಸಹಯೋಗದಲ್ಲಿ ಮಾರ್ಗದರ್ಶಿ – ಕ್ರ್ಯಾಕಿಂಗ್ ದಿ ಯುಪಿಎಸ್‌ಸಿ ಎಕ್ಸಾಮಿನೇಶನ್ ಎಂಬ ವಿಶೇಷ ನಾಗರಿಕ ಸೇವಾ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮವನ್ನು 2026ರ ಜೂನ್ 28ರಂದು ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರೊಯ್ ಕ್ಯಾಸ್ಟೆಲಿನೊ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಪ್ರೇರಣೆ ಹಾಗೂ ಸ್ಪಷ್ಟ ದಿಕ್ಕುನಿರ್ದೇಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್, ಮಂಗಳೂರು ಇದರ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಅರುಣ್ ಜೇಜಿ ಚಕ್ರವರ್ತಿ, ಐಪಿಎಸ್, ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಹಾಗೂ ಮಂಗಳೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ ಶಶಿಕಾಂತ್ ಸೋಮನಾಥ್ ವಿಭೂತೆ, ಐ ಎಫ್ ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುಪಿಎಸ್‌ಸಿ ಮಾಸ್ಟರ್ ಟ್ರೈನರ್ಗಳಾದ ಮೋಹನ್ ಕೃಷ್ಣಮೂರ್ತಿ ಹಾಗೂ ಚಂದ್ರಮೋಹನ್ ಇನಗಂಟಿ, ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ, ಮಂಗಳೂರು ಇದರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಮನಾ ಬಿ., ಜಾಗತಿಕ ಮಟ್ಟದ ಗೂಗಲ್ ಪ್ರಮಾಣಿತ ಶಿಕ್ಷಣತಜ್ಞ ಹಾಗೂ ಮೈಕ್ರೋಸಾಫ್ಟ್ ಪ್ರಮಾಣಿತ ಶಿಕ್ಷಣ ತಜ್ಞರಾದ ಡಾನ್ ಪ್ರಕಾಶ್ ಮತ್ತು ಮಂಗಳೂರು ಐಎಎಸ್ ಸಂಸ್ಥಾಪಕರಾದ ಸಂತೋಷ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಯುಪಿಎಸ್‌ಸಿ ಪರೀಕ್ಷೆಯ ಮಾದರಿ, ಪರಿಣಾಮಕಾರಿ ಅಧ್ಯಯನ ತಂತ್ರಗಳು, ಸಮಯ ನಿರ್ವಹಣೆ, ಉತ್ಪಾದಕತೆ ವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳು, ತಜ್ಞರೊಂದಿಗೆ ನೇರ ಪ್ರಶ್ನೋತ್ತರ, ಪ್ರೇರಣಾತ್ಮಕ ಮಾರ್ಗದರ್ಶನ ಹಾಗೂ ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿವೆ. ಈ ಕಾರ್ಯಕ್ರಮವು ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ರೊಯ್ ಕ್ಯಾಸ್ಟೆಲಿನೊ ಹಾಗೂ ಮಂಗಳೂರು ಐಎಎಸ್ ಸಂಸ್ಥಾಪಕರಾದ ಸಂತೋಷ್ ರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಎಲ್ಲಾ ಅಧಿವೇಶನಗಳಿಗೆ ಪ್ರವೇಶ, ಊಟ, ಇ-ಪ್ರಮಾಣಪತ್ರ ಹಾಗೂ ಭವಿಷ್ಯದ ವಿದ್ಯಾರ್ಥಿವೇತನ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳ ಅವಕಾಶಗಳು ಲಭ್ಯವಾಗಲಿವೆ.

ನಾಗರಿಕ ಸೇವೆ ಹಾಗೂ ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಐಎಎಸ್ ಸಂಸ್ಥಾಪಕ ಸಂತೋಷ್ ರಾವ್, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಆ್ಯಂಡ್ ಎಜುಕೇಶನ್ ನಿರ್ದೇಶಕ ಫಾ. ರೋಶನ್ ರೊಸಾರಿಯೊ ಒ ಎಫ್ ಎಮ್ (ಸಿಎಪಿ), ಹಾಗೂ ಕಾರ್ಯದರ್ಶಿ ಆ್ಯಲ್ರನ್ ರೊಡ್ರಿಗಸ್ , ಸದಸ್ಯರಾದ ಜೆನಿಫರ್ ಜಾಸ್ಮಿನ್ ಲೋಬೋ ಉಪಸ್ಥಿತರಿದ್ದರು.

ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸನಗಳು ಸೀಮಿತವಾಗಿರುವುದರಿಂದ ಮೊದಲಿಗೆ ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುವುದು. ನೋಂದಣಿ ಶುಲ್ಕ ರೂ. 200 ಆಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಮತ್ತು ಸರಿಯಾದ ತಯಾರಿ ವಿಧಾನ, ಮಾರ್ಗದರ್ಶನ ಹಾಗೂ ಸ್ಪಷ್ಟತೆಯನ್ನು ಅಭ್ಯರ್ಥಿಗಳಿಗೆ ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕರಾವಳಿಯತ್ತ ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ : ಮಂಗಳೂರಿನಲ್ಲಿ ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮ
ಮಂಗಳೂರು, ಜೂ.23 : ಬಾಲಿವುಡ್ನ ಖ್ಯಾತ ನಟ  ಶಾರುಖ್ ಖಾನ್ ಅವರು ಜೂನ್ 25ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಂಗಳೂರಿನ ಅಡ್ಯಾ‌ರ್ ಗಾರ್ಡನ್‌ನಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಸಂಜೆ 4 ಗಂಟೆಯಿಂದ ಪ್ರವೇಶ ಆರಂಭವಾಗಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಪೂರ್ವ ನೋಂದಣಿ ಮಾಡಿಕೊಂಡಿರುವ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಮಾತನಾಡಿದ ರೋಹನ್ ಕಾರ್ಪೊರೇಶನ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೇರೊ, “ಭಾರತದ ಜನಪ್ರಿಯ ಕಲಾವಿದರಲ್ಲಿ ಒಬ್ಬರಾದ ಶಾರುಖ್ ಖಾನ್ ಅವರನ್ನು ಮಂಗಳೂರಿನ ನೆಲದಲ್ಲಿ ಸ್ವಾಗತಿಸುವ ಅವಕಾಶ ದೊರೆತಿರುವುದು ನಮಗೆ ಹೆಮ್ಮೆಯ ವಿಷಯ. ಈ ಕಾರ್ಯಕ್ರಮವು ರೋಹನ್ ಕಾರ್ಪೊರೇಶನ್ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಕ್ಷಣವಾಗಿದ್ದು, ಭಾಗವಹಿಸುವ ಪ್ರತಿಯೊಬ್ಬರಿಗೂ ವಿಶಿಷ್ಟ ಅನುಭವವನ್ನು ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಿದ್ದತೆಗಳ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕರಾದ  ಡಿಯಾನ್ ಮೊಂತೇರೊ, ಇದು ಮಂಗಳೂರಿನಲ್ಲಿ ನಡೆಯಲಿರುವ ಅತಿದೊಡ್ಡ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ. ನಮ್ಮ ಸಂಸ್ಥೆಗೆ ಮತ್ತು ನಗರಕ್ಕೆ ಮಹತ್ವದ ಕ್ಷಣವಾಗಿರುವ ಈ ಕಾರ್ಯಕ್ರಮವು ಸುರಕ್ಷಿತವಾಗಿ ಹಾಗೂ ಯಶಸ್ವಿಯಾಗಿ ನೆರವೇರಲು ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ಅಧಿಕೃತವಾಗಿ ನೋಂದಾಯಿತ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿ ದೆ.

ಗುಣಮಟ್ಟ ಮತ್ತು ಗ್ರಾಹಕರ ವಿಶ್ವಾಸವನ್ನು ಪಡೆದಿರುವ ರೋಹನ್ ಕಾರ್ಪೊರೇಶನ್ ಸಂಸ್ಥೆಯು ಕರಾವಳಿ ಕರ್ನಾಟಕದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿದ್ದು, ಹಲವು ವಸತಿ ಹಾಗೂ ವಾಣಿಜ್ಯ ಯೋಜನೆಗಳ ಮೂಲಕ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ.

ಮಂಗಳೂರು : ಕದ್ರಿ ಕಂಬಳದಲ್ಲಿ ಮಾವು-ಹಲಸು ಮೇಳ
ಮಂಗಳೂರು, ಜೂ.23 : ಕಲ್ಕೂರ ಪ್ರತಿಷ್ಠಾನ, ಮಂಗಳೂರು, ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ಮಾವು – ಹಲಸು ಮೇಳ ಜೂ. 20 ಶನಿವಾರ ಕದ್ರಿ ಕಂಬಳ, ಮಲ್ಲಿಕಾ ಬಡಾವಣೆಯಲ್ಲಿರುವ  ಮಂಜು ಪ್ರಸಾದ ಆವರಣದಲ್ಲಿ ನಡೆಯಿತು.

ಮೇಳವನ್ನು ಮಂಗಳಾದೇವಿ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ  ಅವರು  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಾವು – ಹಲಸು ಮೇಳವನ್ನುಇಲ್ಲಿನ  ಮಂಜು ಪ್ರಸಾದ ಆವರಣದಲ್ಲಿ ಆಯೋಜಿಸಲಾಗಿದೆ ಇದೊಂದು ಉತ್ತಮ ಕಾರ್ಯ.ಸಸ್ಯ ಶ್ಯಾಮಲೆಯಾದ ಪ್ರಕೃತಿ ಮಾತೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿ ಸುವುದು ಮುಖ್ಯವಾಗಿದೆ  ಎಂದರು.

ಕಾರ್ಯಕ್ರಮದಲ್ಲಿ ವೈದ್ಯ ಡಾ| ಜೀವರಾಜ್ ಸೊರಕೆ, ಶರವು ರಾಘವೇಂದ್ರ ಶಾಸ್ತ್ರಿ ಕದ್ರಿ, ಡಾ| ಪ್ರಭಾಕರ ಅಡಿಗ,  ಡಾ| ಹರಿಕೃಷ್ಣ ಪುನರೂರು, ಡಾ| ಎಂ. ಪ್ರಭಾಕರ ಜೋಶಿ ಮತ್ತಿತರರು ಉಪಸ್ಥಿತರಿದ್ದರು.

ಮೇಳದಲ್ಲಿ ರಾಮನಗರ ಕುಣಿಗಲ್  ಹಾಗೂ ಸ್ಥಳೀಯ  ಭಾಗದ ಕೃಷಿಕರ ಹಲಸು ಮತ್ತು  ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು  ರೈತರಿಂದಲೇ ನೇರ ಮಾರಾಟವಾಯಿತು.

ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ 12ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ
ಮಂಗಳೂರು, ಜೂ.22 : ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವತಿಯಿಂದ 12ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಅಧಿಕಾರಿಗಳು, ನೌಕರರು, ಸಿಐಎಸ್‌ಎಫ್ ಸಿಬ್ಬಂದಿ, ಕುಟುಂಬ ಸದಸ್ಯರು, ಬಂದರು ಬಳಕೆದಾರರು ಹಾಗೂ ವಿವಿಧ ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಎನ್‌ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಎನ್‌ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಅವರು ಮಾತಾಡಿ, ದೈಹಿಕಆರೋಗ್ಯ, ಮಾನಸಿಕ ಸ್ಟೈರ್ಯ ಕಾಯ್ದುಕೊಳ್ಳಲು ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.ಯೋಗ ದಿನಾಚರಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಎನ್‌ಎಂಪಿಎ ಕುಟುಂಬವನ್ನು ಅವರು ಅಭಿನಂದಿಸಿದರು.

ಯೋಗ ಶಿಕ್ಷಕ ಕಿಶೋರ್ ಸುವರ್ಣ ಅವರ ಪರಿಣಿತ ಮಾರ್ಗದರ್ಶನದಲ್ಲಿ ಭಾಗವಹಿಸಿದವರು ವಿವಿಧ ಯೋಗಾಸನಗಳು, ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮಗಳನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಎನ್‌ಎಂಪಿಎ ಕಾರ್ಯದರ್ಶಿ ಜಿಜೋ ಥಾಮಸ್, ಹಣಕಾಸು ಸಲಹೆಗಾರ ಮತ್ತು ಮುಖ್ಯ ಲೇಖಪಾಲಕ ವೀರರಾಘವನ್, ಟ್ರಾಫಿಕ್ ಮ್ಯಾನೇಜರ್ ಕೆ. ರಾಜೇಂದ್ರ ಕುಮಾರ್, ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ದೀಪಕ್ ರಾಥ್, ಮುಖ್ಯ ವೈದ್ಯಾಧಿಕಾರಿ ಸುಲೇಖಾ ಹೊಸಕೇರಿ, ಸಿಐಎಸ್‌ಎಫ್ ಉಪ ಕಮಾಂಡೆಂಟ್ ರಾಜೇಂದ್ರ ಪಿ. ಪಾಠಕ್, ಯೋಗ ಶಿಕ್ಷಕ ಕಿಶೋರ್ ಸುವರ್ಣ, ಎನ್‌ಎಂಪಿಎ ಮಂಡಳಿ ಸದಸ್ಯ ಜಗದೀಶ್ ಸಾನಿಲ್, ಅಧೀಕ್ಷಕ ಇಂಜಿನಿಯರ್ (ಸಿವಿಲ್) ಯೋಗೇಂದ್ರ ಮತ್ತು ಹಿರಿಯ ಉಪ ಕಾರ್ಯದರ್ಶಿ ವಿಶಾಲಾಕ್ಷಿ ಉಪಸ್ಥಿತರಿದ್ದರು.

ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭ
ಮಂಗಳೂರು, ಜೂ.21 : ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ 2026-27 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭವು ಜೂನ್ 16 ರಂದು ಕಾಲೇಜಿನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು, ಸಂಚಾಲಕರು, ಪ್ರಾಂಶುಪಾಲರು ಮತ್ತು ಇತರ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ವಿದ್ಯಾರ್ಥಿ ಪರಿಷತ್ತನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ಇವರು ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದರು.

ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಝೈನ್ ಶೇಖ್ ಜಾಕಿರ್, ಉಪಾಧ್ಯಕ್ಷೆ ಕು. ಸಿಂಚನ, ವಿವಿಧ ಕ್ಷೇತ್ರದ ಕಾರ್ಯದರ್ಶಿಗಳು ಮತ್ತು ಇತರ ಪದಾಧಿಕಾರಿಗಳಿಗೆ ಗಣ್ಯರು ಬ್ಯಾಡ್ಜ್ಗಳನ್ನು ವಿತರಿಸಿ ಗೌರವಿಸಿದರು. ನಂತರ ಕಾಲೇಜಿನ ಪ್ರಾಂಶುಪಾಲರಾದ ಮೆಲ್ವಿನ್ ವಾಸ್ ಇವರು ನೂತನ ಸದಸ್ಯರಿಗೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರೂ ಆಗಿರುವ ಅತೀ. ವಂದನೀಯ ಗುರುಗಳಾದ ಐವನ್ ಮೈಕಲ್ ರೊಡ್ರಿಗಸ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಜೀವನವು ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ, ಶಿಸ್ತು ,ನಾಯಕತ್ವ, ಸಮಯಪ್ರಜ್ಞೆ ಮತ್ತು ವ್ಯಕ್ತಿತ್ವ ವಿಕಸನವನ್ನು ರೂಢಿಸಿಕೊಳ್ಳುವ ಸುವರ್ಣಾವಕಾಶವಾಗಿದೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಯಾಂಪಸ್ ನಿರ್ದೇಶಕರು ಹಾಗೂ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಅತೀ. ವಂದನೀಯ ಗುರುಗಳಾದ ಡಾ| ಆಲ್ವಿನ್ ಸೆರಾವೊ , ಮಿಲಾಗ್ರಿಸ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರು ವಂದನೀಯ ಗುರುಗಳಾದ ಉದಯ ಫೆರ್ನಾಂಡಿಸ್ , ಮಿಲಾಗ್ರಿಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಡಿಕ್ಸನ್ ಡಿಸೋಜಾ , ಕಾರ್ಯದರ್ಶಿ ಶ್ರೀಮತಿ ಜಸಿಂತಾ ಫೆರ್ನಾಂಡಿಸ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಿಡ್ವಿನ್ ಫೆರ್ನಾಂಡಿಸ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕಿಯಾದ ಶೆರಿಲ್ ಪಿಂಟೊ ಅವರು ನೆರೆದ ಸರ್ವರನ್ನು ಸ್ವಾಗತಿಸಿದರು . ಕಾಲೇಜು ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಝೈನ್ ಶೇಖ್ ಜಾಕಿರ್ ನೆರೆದಿದ್ದ ಎಲ್ಲ ಗಣ್ಯರಿಗೆ, ಉಪನ್ಯಾಸಕರಿಗೆ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಕಾಲೇಜು ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಜೂನ್ 21 : ಮಂಗಳೂರು ಪುರಭವನದಲ್ಲಿ ಸ್ನೇಹಾಲಯ ಚ್ಯಾರಿಟೆಬಲ್ ಟ್ರಸ್ಟ್ ಇದರ ಸಹಾಯಹಸ್ತ ಪ್ರಯುಕ್ತ ಕೆವಿನ್ ಮಿಸ್ಕಿತ್ ಮ್ಯೂಸಿಕಲ್ ನೈಟ್
ಮಂಗಳೂರು, ಜೂ. 20 : ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆಯ 2009 ರಿಂದ ಮಾನಸಿಕ ಅಸ್ವಸ್ಥರ ರಕ್ಷಣೆ, ಶೂಶ್ರುಷೆ, ಔಷೋದೊಪಚಾರ ಆರೋಗ್ಯ, ಪುನರ್ವಸತಿ ಒದಗಿಸುವ ನಿರಂತರ ಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ.

ಈ ಸಂಸ್ಥೆಯು ಹತ್ತು ಹಲವು ಯೋಜನೆಗಳ ಅನುಷ್ಠಾನ, ಪ್ರಸ್ತುತ ದಾಖಲಿರುವ 375 ನಿವಾಸಿಗಳ ಅಗತ್ಯತೆಗಳು, ಮನೋರೋಗ ಚಿಕಿತ್ಸೆ ಡಿ ಎ ಡಿಕ್ಷನ್ ಹಾಗೂ ವಿಶೇಷ ಅಗತ್ಯವುಳ್ಳ ಕುಟುಂಬ ಸದಸ್ಯರ ಶಿಕ್ಷಣ ಹಾಗೂ ಇತರ ಯೋಜನೆಗಳ ಸಹಾಯಾರ್ಥ ಕಾರ್ಯಕ್ರಮದ ರೂವಾರಿ ಕೆವಿನ್ ಮಿಸ್ಕಿತ್ ಅವರ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಇದೇ ಭಾನುವಾರ 21-6-2026 ರಂದು ಮಂಗಳೂರಿನ ಟಾನ್ ಹಾಲ್ ನಲ್ಲಿ ಸಂಜೆ 6.00 ಘಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಜೂ.20 , 21 : ಮಂಗಳೂರು ಕದ್ರಿ ಕಂಬಳದಲ್ಲಿ ಮಾವು-ಹಲಸು ಮೇಳ
ಮಂಗಳೂರು,ಜೂ. 20  : ಕಲ್ಕೂರ ಪ್ರತಿಷ್ಠಾನ, ಮಂಗಳೂರು, ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ಮಾವು – ಹಲಸು ಮೇಳ ಜೂ. 20 ಶನಿವಾರ ಹಾಗೂ 21 ಆದಿತ್ಯವಾರದಂದು 2 ದಿನಗಳ ಕಾಲ ಮುಂಜಾನೆ 7ರಿಂದ ಸಂಜೆ 7ರ ವರೆಗೆ ಕದ್ರಿ ಕಂಬಳ, ಮಲ್ಲಿಕಾ ಬಡಾವಣೆಯಲ್ಲಿರುವ “ಮಂಜು ಪ್ರಸಾದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರಂಭದ ದಿನ ಸಭಾಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಶ್ರೀ ಶ್ರೀ ಜಿತಕಾಮಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆ ಮಾಡಲಿರುವರು. ಡಾ| ಎಂ.ಬಿ. ಪುರಾಣಿಕ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ. ಜೀವರಾಜ ಸೊರಕೆಯವರು ಉದ್ಘಾಟನೆ ಮಾಡಲಿದ್ದು, ಶಾಸಕರಾದ ಡಿ. ವೇದವ್ಯಾಸ ಕಾಮತ್ ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಿರುವರು ಎಂದರು.

ಎರಡನೇ ದಿನದ ಕಾರ್ಯಕ್ರಮದ ಅಂಗವಾಗಿ ಯೋಗ ಸಾವಯವ ಆಹಾರ ಆರೋಗ್ಯ ಭಾಗ್ಯ ಶೀರ್ಷಿಕೆಯೊಂದಿಗೆ ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಯೋಗ ಸಾವಯವ ಆಹಾರ ಜಾಗೃತ ಸಂದೇಶ ನೀಡಲಿರುವರು. ಹಲಸು,ಮಾವು ಆಹಾರ ಸೇವನೆ ವೈಜ್ಞಾನಿಕ ವಿಶ್ಲೇಷಣೆ ಉಪನ್ಯಾಸವನ್ನು ಪಡುಬಿದ್ರೆಯ ಆಯುರ್ವೇದ ವೈದ್ಯ, ಪಾರಂಪರಿಕ ನಾಟಿ ತಜ್ಞರಾದ ಡಾ.ಎನ್.ಟಿ. ಅಂಚನ್ ನೀಡಲಿರುವರು ಎಂದು ಹೇಳಿದರು.

ಆರೋಗ್ಯ ಸಚಿವರಾದ ಯು. ಟಿ. ಖಾದರ್, ಮಂಗಳೂರಿನ ಸಂಸದರಾದ ಕ್ಯಾ| ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಶಾಸಕರಾದ ಡಾ| ವೈ. ಭರತ್ ಶೆಟ್ಟಿ, ಸ್ವದೇಶಿ ಗೋವುಗಳ ಹಾಗೂ ಪ್ರಾದೇಶಿಕ ಸಸ್ಯಗಳ ತಳಿ ಸಂರಕ್ಷರು, ಪರಿಸರ ತಜ್ಞರಾದ ಡಾ। ಮನೋಹರ್ ಉಪಾಧ್ಯಾಯ, ಸಾವಯವ ಕೃಷಿಕ ಬಳಗದ ಅಧ್ಯಕ್ಷರಾದ ಜಿ. ಆರ್. ಪ್ರಸಾದ್, ಶಕೀಲಾ ಖಾವ, ಮನೋಹರ್ ಶೆಟ್ಟಿ ಇದ್ದು ಪ್ರಧಾನ ಅಭ್ಯಾಗತರಾಗಿ ಡಾ| ಎ.ಜೆ. ಶೆಟ್ಟಿ, ಡಾ| ಹರಿಕೃಷ್ಣ ಪುನರೂರು, ರಘುನಾಥ ಸೋಮಯಾಜಿ, ಪ್ರಕಾಶ್ ಕಲ್ಬಾವಿ, ಜಿತೇಂದ್ರ ಕೊಟ್ಟಾರಿ, ಡಾ.ಎಂ.ಪಿ. ಶ್ರೀನಾಥ್, ಎಂ.ಎಸ್.ಗುರುರಾಜ್, ನೀಲಾವರ ಸುರೇಂದ್ರ ಅಡಿಗ, ಶಶಿಧರ ಹೆಗಡೆ, ಡಾ.ಜಯಪ್ರಕಾಶ ತೊಟ್ಟೆತ್ತೋಡಿ, ಭಾಸ್ಕರ ಮೊಲಿ, ಕ್ಯಾ.ಗಣೇಶ್ ಕಾರ್ಣಿಕ್, ರತ್ನಾಕರ ಜೈನ್, ಎ.ಆರ್ು.ಸುಬ್ಬಯ್ಯಕಟ್ಟೆ, ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ್ ನಾಯಕ್, ಪಿ.ಬಿ.ಹರೀಶ್ ರೈ, ಮಿಥುನ್ ರೈ, ಜಯಾನಂದ ಅಂಚನ್, ಸುಧೀರ್ ಶೆಟ್ಟಿ ಕಣ್ಣೂರ್, ಮನೋಜ್ ಕುಮಾರ್, ಪ್ರೇಮಾನಂದ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ ಮತ್ತಿತರರು ಉಪಸ್ಥಿತರಿರುವರು ಎಂದರು.

ಈ ಮಾವು-ಹಲಸು ಮೇಳದಲ್ಲಿ ರಾಮನಗರ, ಮಂಡ್ಯ, ಮೈಸೂರು, ಬೆಳಗಾಂ ಹಾಗೂ ಸ್ಥಳೀಯ ಸ್ಥಳೀಯ ಕೃಷಿಕರು ಭಾಗವಹಿಸುತ್ತಿದ್ದು, ವಿವಿಧ ತಳಿಯ ಹಲಸು ರುದ್ರಾಕ್ಷ, ಚಂದ್ರಬರ್ಕೆ ಇತ್ಯಾದಿ ಅಲ್ಲದೆ ಮಾವಿನ ಹಣ್ಣುಗಳಾದ ಮಲ್ಲಿಕಾ, ಮಲ್ಲೋವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಇತ್ಯಾದಿ ಹಣ್ಣುಗಳು ಲಭ್ಯವಿರುತ್ತದೆ. ಮಾವು ಹಲಸಿನಿಂದ ತಯಾರಿಸಿದ ಮೌಲ್ಯವರ್ಧಿತ ಸ್ವಾವಲಂಬಿ ಖಾದ್ಯಗಳಾದ ಹಲಸಿನ ಕಬಾಬ್, ಉಪ್ಪಿನಕಾಯಿ, ಹಲಸಿನ ಗಾರಿಗೆ, ಚಿಪ್ಸ್, ಉಂಡ್ಯಕ್ಕ, ಹಲಸಿನ ಪಾವುಬಾಜಿ, ಕಡುಬು, ಹಲಸಿನ ಕೇಕ್, ಹೋಳಿಗೆ, ಹಪ್ಪಳ, ಐಸ್ ಕ್ರೀಂ ಇತ್ಯಾದಿಗಳಲ್ಲದೆ, ವಿವಿಧ ತಾವರೆ ಹೂ ಮತ್ತು ಜಲಸಸ್ಯಗಳು,ತರಕಾರಿ ಬೀಜಗಳು,ಮಾವು ಹಲಸಿನ ಗಿಡಗಳು, ಸಸಿಗಳು, ದೇಸಿ ತರಕಾರಿ ಬೀಜಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಲಭ್ಯವಿರಲಿವೆ ಎಂದು ಹೇಳಿದರು.

2 ದಿನಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 7ರತನಕ ವಾಧಿರಾಜ ಮಂಟಪದ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ಸಾಂಸ್ಕೃತಿಕ ಪ್ರತಿಭಾನ್ವಿತರಿಂದ ಸೇವಾರ್ಥವಾಗಿ ಗಮಕ, ಸಂಗೀತ, ಯಕ್ಷ ಸಂಗೀತ, ಹರಿಕಥೆ, ಭಜನೆ, ಗಾನ ಸಂಭ್ರಮ, ತಾಳಮದ್ದಳೆ, ಮಿಮಿಕ್ರಿ, ವಾದ್ಯ ಸಂಗೀತ, ಪರಿಸರ ಗೀತೆ ಅನಾವರಣಗೊಳ್ಳಲಿದೆ. ವಿದ್ಯಾರ್ಥಿ ಪ್ರತಿಭೆಗಳಿಗೆ ಪೂರ್ಣಿಮಾ ರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ, ದಯಾನಂದ ಕಟೀಲು, ಜನಾರ್ದನ ಹಂದೆ, ಶಿವಪ್ರಸಾದ್ ಪ್ರಭು ಇವರ ಮಾರ್ಗದರ್ಶನದಲ್ಲಿ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುಧಾಕರ ರಾವ್ ಪೇಜಾವರ, ಜನಾರ್ದನ, ಶಿವಪ್ರಸಾದ್, ದಯಾನಂದ ಕಟೀಲ್, ಪ್ರಭು, ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ
ಮಂಗಳೂರು,ಜೂ. 19  : ಕರ್ನಾಟಕ ನಾಯರ್ ಸೊಸೈಟಿ ಮಂಗಳೂರು ಘಟಕದ ಸಾಮಾನ್ಯ ಸಭೆಯು ಮಂಗಳೂರಿನ ಕೆ.ಪಿ.ಟಿ ಬಳಿಯಿರುವ ಎಸ್. ಕ್ಯೂಬ್ ಸೆಂಟರ್ ಸಭಾಂಗಣದಲ್ಲಿ ಜರುಗಿತು, ಸಾಮಾನ್ಯ ಸಭೆಯ ನಂತರ ಜರುಗಿದ ಮುಂದಿನ 2026-28 ನೇ ಅವಧಿಗೆ ಅಧ್ಯಕ್ಷರಾಗಿ ಮುರಳಿ ಹೊಸಮಜಲು, ಕಾರ್ಯದರ್ಶಿಯಾಗಿ ವಿ.ಎಮ್.ಸತೀಶನ್ ಪುನರಾಯ್ಕೆಗೊಂಡರು.

ಖಜಾಂಚಿಯಾಗಿ ಅಜಯಕುಮಾರ್ , ಉಪಾಧ್ಯಕ್ಷರಾಗಿ ವಾಸಂತಿ ನಾಯರ್, ಜತೆ ಕಾರ್ಯದರ್ಶಿಯಾಗಿ ಮಂಜು ಅಜಿತ್, ಜತೆ ಖಜಾಂಚಿಯಾಗಿ ರವೀಂದ್ರನಾಥ್, ಬೋರ್ಡ್ ಮೆಂಬರುಗಳಾಗಿ ವಿಜಯಕುಮಾರ್, ಎಮ್.ವಿ. ರಾಜನ್, ಎ.ಎಸ್.ಮೋಹನ್ ರವರು, ಸಮಿತಿಯ ಸದಸ್ಯರಾಗಿ ಜೋತಿಷ್ ಕುಮಾರ್, ಜಯಲಕ್ಷ್ಮೀ ಚಂದ್ರಮೋಹನ್ , ಮಣಿಕಂಠನ್, ವಿನೋದ್‌ವಿನೋದ್‌ರಾಜ್, ಹರೀಶ್ ಗೋವಿಂದ್, ದೇವರಾಜ್ , ವಿನಯನ್ ನಾಯರ್ ಆಯ್ಕೆಗೊಂಡರು.

ಮಹಿಳಾ ವಿಭಾಗದ ಅಧ್ಯಕ್ಷರಾಗಿ ಸುಜಾತಾ ನಾಯರ್, ಕಾರ್ಯದರ್ಶಿಯಾಗಿ ಶ್ರೀಜಾ ನಂಬಿಯಾರ್, ಹಾಗೂ ಖಜಾಂಚಿಯಾಗಿ ಗೋಪಿಕಾ ರಾಣಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರಭಾ ವಿಜಯಕುಮಾರ್, ಜತೆಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್ ಆಯ್ಕೆಯಾಗಿದ್ದಾರೆ.

ಚುನಾವಣಾ ಅಧಿಕಾರಿಯಾಗಿ ಉಡುಪಿ ಘಟಕ ಸಜಿ ಪಿಳ್ಳೈ ಹಾಗೂ ವೀಕ್ಷಕರಾಗಿ ಮೋಹನ್ ದಾಸ್, ಉಡುಪಿ ಅವರು ಭಾಗವಹಿಸಿದ್ದರು.