State news – Navaloka Media News Mangalore| Kannada Online News Portal

ಬೆಂಗಳೂರು ರಾಜಕುಮಾರ್ ಸ್ಮಾರಕದ ಸಮೀಪದಲ್ಲಿರುವ ಬ್ಲೂ ಲೀಫ್ ಎಲ್‌ಇಡಿ ಗೋಡೌನ್‌ನಲ್ಲಿ ಅಗ್ನಿ ಅವಘಡ
ಬೆಂಗಳೂರು, ಏ. 27 : ನಗರದ ನಂದಿನಿ ಲೇಔಟ್‌ನಲ್ಲಿ ರಾಜಕುಮಾರ್ ಸ್ಮಾರಕದ ಸಮೀಪದಲ್ಲಿರುವ ಬ್ಲೂ ಲೀಫ್ ಎಲ್‌ಇಡಿ ಗೋಡೌನ್‌ನಲ್ಲಿ ಮಧ್ಯರಾತ್ರಿ ಅಗ್ನಿ ಅವಘಡ ಸಂಭವಿಸಿದೆ.

ಬ್ಯಾನರ್‌ಗಳು ಮತ್ತು ಎಲ್‌ಇಡಿ ಸ್ಕ್ರೀನ್‌ಗಳನ್ನು ಸಂಗ್ರಹಿಸಿ ವಿತರಿಸುತ್ತಿದ್ದ ಈ ಗೋಡೌನ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಬೆಂಕಿಯ ತೀವ್ರತೆ ಪಕ್ಕದಲ್ಲಿದ್ದ ನಾಲ್ಕು ಅಂತಸ್ತಿನ ಲೇಡಿಸ್ ಪಿಜಿ ಕಟ್ಟಡ ಹಾಗೂ ಸುತ್ತಮುತ್ತಲಿನ ಮನೆಗಳಿಗೂ ವ್ಯಾಪಿಸಿದೆ. ಈ ಘಟನೆಯಿಂದ ಕಟ್ಟಡಗಳಿಗೆ ಹಾನಿ ಸಂಭವಿಸಿದೆ. ಪಿಜಿಯಲ್ಲಿ ವಾಸವಿದ್ದ ಸುಮಾರು 50 ಮಹಿಳೆಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ರೆ| ಜಾನ್ ಫ್ರಾನ್ಸಿಸ್ ಸಿಕ್ವೇರಾ, ಒಸಿಡಿ ಅವರು ಕರ್ನಾಟಕ-ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ಆಯ್ಕೆ
ಮೈಸೂರು, ಏ. 21 : ಮೈಸೂರಿನ ಬೋಗಾದಿಯ ಧ್ಯಾನ ಸಾಧನದಲ್ಲಿ ಎಪ್ರಿಲ್ 17, ಶುಕ್ರವಾರ ನಡೆದ 16ನೇ ಪ್ರೊವಿನ್ಶಿಯಲ್ ಚಾಪ್ಟರ್ (ಮಹಾಧಿವೇಶನ) ನಲ್ಲಿ ಡಿಸ್ಕಾಲ್ಸ್ಡ್ ಕಾರ್ಮೆಲೈಟ್ಸ್ ಸಭೆಯ ಕರ್ನಾಟಕ-ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ವಂದನೀಯ ರೆ| ಡಾ. ಜಾನ್ ಫ್ರಾನ್ಸಿಸ್ ಸಿಕ್ವೇರಾ, ಒಸಿಡಿ ಅವರು ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಂದನೀಯ ರೆ| ಸಿಲ್ವೆಸ್ಟರ್ ಡಿ’ಸೋಜಾ, ಒಸಿಡಿ ಅವರ ಉತ್ತರಾಧಿಕಾರಿಯಾಗಿ ಇವರು ಅಧಿಕಾರ ವಹಿಸಿಕೊಂಡಿದ್ದಾರೆ.

ರೆ| ಜಾನ್ ಫ್ರಾನ್ಸಿಸ್ ಸಿಕ್ವೇರಾ ಅವರು ಮಂಗಳೂರು ಧರ್ಮಪ್ರಾಂತ್ಯದ ಅಗ್ರಾರ್ ಧರ್ಮ ಪ್ರಾಂತ್ಯದವರು. ಪ್ರಖ್ಯಾತ ಶಿಕ್ಷಣತಜ್ಞ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಾಗಿರುವ ಇವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ) ಪಡೆದಿದ್ದಾರೆ. ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎರಡನೇ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಅಲ್ಲಿಯೇ ಜರ್ಮನ್ ಭಾಷಾಶಾಸ್ತ್ರದಲ್ಲೂ (German Linguistics) ಅಧ್ಯಯನ ನಡೆಸಿದ್ದಾರೆ. ರೋಮ್ನ ಪಾಂಟಿಫಿಕಲ್ ಯೂನಿವರ್ಸಿಟಿ ಆಫ್ ಸೇಂಟ್ ಥಾಮಸ್ ಅಕ್ವಿನಾಸ್ (ಆಂಜೆಲಿಕಮ್) ನಿಂದ ಹರ್ಮೆನ್ಯೂಟಿಕ್ಸ್ (ಪ್ರಾಚೀನ ಪಠ್ಯಗಳ ವ್ಯಾಖ್ಯಾನ) ವಿಷಯದಲ್ಲಿ ಪರಿಣತಿಯೊಂದಿಗೆ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಗೌರವಾನ್ವಿತ ವಿದ್ವಾಂಸರಾಗಿರುವ ವಂ| ಜಾನ್ ಅವರು ಹಲವಾರು ಪದವಿ ಮತ್ತು ಸ್ನಾತಕೋತ್ತರ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ವಲಯದ ಆಚೆಗೆ, ಮಾನವ ಸಂಪನ್ಮೂಲ ಅಭಿವೃದ್ಧಿಗೆ (HRD) ಅವರು ನೀಡಿದ ಕೊಡುಗೆಗಳು, ಕಾರ್ಮೆಲೈಟ್ ಆಧ್ಯಾತ್ಮಿಕತೆ ಮತ್ತು ಅತೀಂದ್ರಿಯತೆಯ (mysticism) ಬಗೆಗಿನ ಅವರ ಆಳವಾದ ಒಲವು ಮತ್ತು ತೊಡಗಿಸಿಕೊಳ್ಳುವಿಕೆಗೆ ಅವರು ಹೆಸರುವಾಸಿಯಾಗಿದ್ದಾರೆ. “ಆಂತರಿಕ ಮೌನ ಮತ್ತು ದೈವಿಕ ಅನ್ಯೋನ್ಯತೆ” ಕುರಿತಾದ ಅವರ ಚಿಂತನೆಗಳು ಅನೇಕರಿಗೆ ಸ್ಫೂರ್ತಿ ನೀಡಿವೆ.

ಇವರು ಮಂಗಳೂರಿನ ಆಂತರಿಕ ಮೌನ ಮತ್ತು ಧ್ಯಾನ ಕೇಂದ್ರವಾದ “ಋಷಿವನ” ಹಾಗೂ ಗೋವಾದ ಕಾಣಕೋಣದ ಕ್ಸೆಲ್ಲಿಮ್‌ನಲ್ಲಿ ಯುವಜನರು ಮತ್ತು ಕುಟುಂಬಗಳಿಗಾಗಿರುವ ಪ್ರಾರ್ಥನಾ ಕೇಂದ್ರ “ಡಿವೈನ್ ಸ್ಪ್ರಿಂಗ್ಸ್ಎಂಬೆರಡು ಧ್ಯಾನ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಂ| ಜಾನ್ ಅವರು ಪ್ರಸಿದ್ಧ ಬರಹಗಾರರು ಹಾಗೂ ಸಂಪಾದಕರೂ ಹೌದು. ಅವರು ಧರ್ಮ ಮತ್ತು ಆಧ್ಯಾತ್ಮಿಕತೆಯ ಪತ್ರಿಕೆಯಾದ “ಧ್ಯಾನ” (Dhyana) ದ ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕರಾಗಿದ್ದರು, ಜೊತೆಗೆ ಕನ್ನಡದ ಆಧ್ಯಾತ್ಮಿಕ ಪತ್ರಿಕೆಯಾದ “ಜೀವ ಜಲ” ದ ಸಂಸ್ಥಾಪಕ-ಸಂಪಾದಕರಾಗಿದ್ದರು. ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಪ್ರತಿಷ್ಠಿತ ನಿಯತಕಾಲಿಕಗಳಿಗೆ ಅವರು ವ್ಯಾಪಕವಾಗಿ ಲೇಖನಗಳನ್ನು ನೀಡಿದ್ದಾರೆ.

ಯಾದಗಿರಿ : ಮುಖಾಮುಖಿ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು , ಬಸ್ – 6 ಮಂದಿ ಸಜೀವ ದಹನ
ಯಾದಗಿರಿ, ಏ. 17 : ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಸಮೀಪ ಕಾರು ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿದೆ.ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಜೀವ ದಹನಗೊಂಡಿದ್ದಾರೆ .

ವರದಿಯ ಪ್ರಕಾರ, ಕಾರು ಯಾದಗಿರಿಯಿಂದ ರಾಯಚೂರು ಕಡೆಗೆ ತೆರಳುತ್ತಿದ್ದು, ಬಸ್ ಬೆಂಗಳೂರು ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿದ್ದಸಂದರ್ಭ ದೇವಾಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಕಾರು ಹಾಗೂ ಬಸ್ಸಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಎಂದು ವರದಿಯಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಘಟನೆಯ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸುರಪುರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ: ಶಿರಾಡಿ ಘಾಟ್ ನಲ್ಲಿ ಕೆಎಸ್ಆರ್ಟಿಸಿ ರಾಜಹಂಸ ಬಸ್-ಕಾರು ಮುಖಾಮುಖಿ ಡಿಕ್ಕಿ: ಮೂವರು ಸಾವು
ಬೆಳ್ತಂಗಡಿ, ಮಾ. 13 : ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಬೆಳ್ತಂಗಡಿಯ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾಡಿ ಘಾಟಿನ ಗುಂಡ್ಯ ಸಮೀಪ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ, ಶ್ರೀಧರ್ ಮರಕಡ, ಜನಾರ್ದನ ಕೆರಿಮಾರ್ ಸಾವನ್ನಪ್ಪಿದ್ದು ಸುರೇಶ್ ಎಂಬವರು ಗಂಭೀರವಾಗಿ ಗಾಯಗೊಂಡ ದ್ದು ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2026-27ನೇ ಸಾಲಿನ ಬಜೆಟ್ : ಅನ್ನಭಾಗ್ಯ 5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಕಿಟ್ ವಿತರಣೆ
ಬೆಂಗಳೂರು, ,ಮಾ. 06 : ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ತೊಗರಿಬೇಳೆ, ಉಪ್ಪು, ಸಕ್ಕರೆ, ಅಡುಗೆ ಎಣ್ಣೆ ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

2026-27ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಸಿಎಂ, ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಬಡವರ ಹಸಿವು ನೀಗಿಸುವ ಉದ್ದೇಶದಿಂದ 4.54 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಗಾಗಿ ಒಟ್ಟು 17,167 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.

ಪ್ರಸ್ತುತ ನೀಡುತ್ತಿರುವ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಪ್ರತಿ ತಿಂಗಳು ಪೌಷ್ಟಿಕಾಂಶವುಳ್ಳ ತೊಗರಿಬೇಳೆ, ಉಪ್ಪು ,ಸಕ್ಕರೆ ಮತ್ತು ಅಡುಗೆ ಎಣ್ಣೆ ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈ ಸಾಲಿನಲ್ಲಿ 6,200 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.

ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಪ್ರಥಮ ವಿದ್ಯಾರ್ಥಿವೇತನ ದಿನಾಚರಣೆ “ರೂಟ್ಸ್ ಟು ವಿಂಗ್ಸ್”
ಬೆಂಗಳೂರು, ಫೆ. 18 : ಸೆಂಟ್ ಜೋಸೆಫ್ ವಿಶ್ವವಿದ್ಯಾಲಯವು ತನ್ನ ಮೊಟ್ಟಮೊದಲ ವಿದ್ಯಾರ್ಥಿವೇತನ ದಿನಾಚರಣೆಯಾದ “ರೂಟ್ಸ್ ಟು ವಿಂಗ್ಸ್” ಅನ್ನು ಶುಕ್ರವಾರದಂದು ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮರ್ಕ್ ಕೆಜಿಎಎ ಸಂಸ್ಥೆಯ ಆರ್ ಅಂಡ್ ಡಿ ವಿಭಾಗದ ಮುಖ್ಯಸ್ಥರಾದ ಡಾ. ಮಾರ್ಕಸ್ ಓಬ್ಕಿರ್ಚರ್ ಅವರು ಮಾತನಾಡುತ್ತಾ, ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ಮೇಲಿಟ್ಟಿರುವ ನಂಬಿಕೆಯಾಗಿದ್ದು, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯಿಂದ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರೆ. ಫಾದರ್ ಡಯೋನಿಶಿಯಸ್ ವಾಜ್ ಅವರು ಅಧ್ಯಕ್ಷೀಯ ಭಾಷಣ ದಲ್ಲಿ, ವಿದ್ಯಾರ್ಥಿಗಳನ್ನು ಮೌಲ್ಯಾಧಾರಿತ ಶಿಕ್ಷಣದ ಮೂಲಕ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದು ಸಂಸ್ಥೆಯ ಧ್ಯೇಯ ವಾಗಿದೆ ಎಂದು ಹೇಳಿದರು.

ಕುಲಪತಿಗಳಾದ ಡಾ. ಫಾದರ್ ವಿಕ್ಟರ್ ಲೋಬೋ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಸಂಚಾಲಕರು ಹಾಗೂ ಹಣಕಾಸು ಅಧಿಕಾರಿಗಳಾದ ಫಾದರ್ ಅರುಣ್ ಪ್ರಶಾಂತ್ ಡಿಸೋಜಾ ಅವರು ವಂದನಾರ್ಪಣೆ ಸಲ್ಲಿಸಿದರು.

ಈ ವಿಶೇಷ ದಿನದಂದು ವಿವಿಧ ವರ್ಗಗಳ ಅಡಿಯಲ್ಲಿ ಒಟ್ಟು 4,50,00,000 ರೂಪಾಯಿಗಳ ಬೃಹತ್ ಮೊತ್ತದ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಯಿತು. ಇದರಲ್ಲಿ ಆರ್ಥಿಕ ನೆರವಿನ ಅಡಿಯಲ್ಲಿ 1,290 ವಿದ್ಯಾರ್ಥಿಗಳಿಗೆ 2,54,20,550 ರೂಪಾಯಿಗಳನ್ನು ಹಾಗೂ ಶೈಕ್ಷಣಿಕ ಶ್ರೇಷ್ಠತೆಯ ಅಡಿಯಲ್ಲಿ 760 ವಿದ್ಯಾರ್ಥಿಗಳಿಗೆ 1,80,79,450 ರೂಪಾಯಿಗಳನ್ನು ನೀಡಲಾಯಿತು. ಅಲ್ಲದೆ, 50 ವಿದ್ಯಾರ್ಥಿಗಳಿಗೆ 15,00,000 ರೂಪಾಯಿಗಳ ಮ್ಯಾಜಿಸ್ ಮತ್ತು ವಿಶೇಷ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಬೆಂಗಳೂರು : ಬಸ್ – ಕಾರಿನ ನಡುವೆ ಭೀಕರ ಅಪಘಾತ : ಐದು ಮಂದಿ ಸಾವು
ಬೆಂಗಳೂರು,ಫೆ. 15 : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತವಾದಲ್ಲಿ ಐದು ಮಂದಿ ಸಾವನ್ನಪ್ಪಿದ ಘಟನೆ ನಗರ ಹೊರವಲಯದ ನೆಲಮಂಗಲ ಜಿಂದಾಲ್ ಸಮೀಪ ನಡೆದಿದೆ.

ಅತೀ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರು ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ಸಿನ ಗಾಜುಗಳು ಒಡೆದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 43 ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಅಪಘಾತವಾದಲ್ಲಿ ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲದ ಜಿಂದಾಲ್ ಬಳಿ ಈ ಅಪಘಾತ ಸಂಭವಿಸಿದೆ.

ಅಪಘಾತವಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಲಲಿತ್ (22) ಮೃತಪಟ್ಟಿದ್ದಾರೆ. ಘಟನೆಯ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವರನ್ನು ತಕ್ಷಣ ನೆಲಮಂಗಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತನೂ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಬಸ್ ಅಪಘಾತಕ್ಕೀಡಾದ ಪರಿಣಾಮ ಪ್ರಯಾಣಿಕರಿಗೆ ಬೇರೆ ಬಸ್ ಗಳಲ್ಲಿ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುದ್ದನಯಕನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆಯಂಗಡಿ : ಮಾ.4ರಿಂದ ಮಾ.8ರ ವರೆಗೆ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ
ಹಳೆಯಂಗಡಿ, ಫೆ. 10 : ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ.4ರಿಂದ ಮಾ.8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಭಾನುವಾರ ನಡೆಯಿತು.

ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಬೆಲ್ಮಡ, , ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಸುನೀಲ್ ಆಳ್ವ,ದಿವಾಕರ ಸಾಮಾನಿ,ಕಸ್ತೂರಿ ಪಂಜ,ಚಂದ್ರ ಶೇಖರ ನಾನಿಲ್,ಗೀತಾ ಪಿ ಕುಮಾರ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದಯ ಸುವರ್ಣ ಅಗ್ನಿದ ಕಳಿಯ, ವಿನೋದ್ ಸಾಲ್ಯಾನ್ ಬೆಳ್ಳಾಯರು,ವಿನೋದ್ ಬೋಳೂರು ದಿನಕರ ಎಸ್. ಹಳೆಯಂಗಡಿ, ಗೀತಾಂಜಲಿ ಸುವರ್ಣ,ಕಿರಣ್ ಗುರಿಕಾರ ಮೊದಲಾದವರು ಉಪಸ್ಥಿತರಿದ್ದರು.

ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ಫೆ.8 : ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟನೆ
ಬೆಳ್ತಂಗಡಿ,ಫೆ.07 : ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಫೆ.8, ಭಾನುವಾರ ಸಂಜೆ 4 ಗಂಟೆಗೆ ಉದ್ಘಾಟನೆಯಾಗಲಿದೆ. ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ, ವಾಕ್ ಇನ್ ಟು ವಿದ್ವತ್, ಎ ಸ್ಟೆಪ್ ಇನ್ ಟು ಸಕ್ಸಸ್ ಎಂಬ ವಿಶೇಷ ಕಾರ್ಯಕ್ರಮವನ್ನು ಪರಿಚಯಿಸಲಾಗುತ್ತಿದೆ.ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರು ಉದ್ಘಾಟಿಸಲಿದ್ದಾರೆ.

ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬರೋಡದ ಖ್ಯಾತ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಮೆಸ್ಕಂ ಚೇರ್ ಮನ್ ಕೆ.ಹರೀಶ್ ಕುಮಾರ್, ಬೆಳ್ತಂಗಡಿ ಸಿರೋ ಮಲಬಾರ್ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಪ್ರಧಾನ ಗುರುಗಳಾದ ಫಾ.ಜೋಸೆಫ್ ವಲಿಯಪರಂಬಿಲ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಬೆಳ್ತಂಗಡಿ ಪೊಲೀಸ್ ವಿಭಾಗದ ಡಿವೈ.ಎಸ್.ಪಿ. ರೋಹಿಣಿ ಸಿ.ಕೆ., ಭಾಗವಹಿಸಲಿರುವರು.

ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ, ಶಿಕ್ಷಣ ಸಂತ ಹರೇಕಳ ಹಾಜಬ್ಬ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಅವರನ್ನು ಕಾಲೇಜು ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಗುವುದು.

ವಿದ್ವತ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪಠ್ಯಕ್ಕೆ ಪೂರಕ, ಪ್ರಯೋಗಶೀಲತೆಗೆ ಸಹಕಾರಿಯಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಸುಸಜ್ಜಿತ ಲ್ಯಾಬ್ ಸಜ್ಜುಗೊಳಿಸಲಾಗಿದ್ದು, ಅದರ ಉದ್ಘಾಟನೆಯು ಅಂದು ಮುಖ್ಯ ಅತಿಥಿಗಳಿಂದ ನೆರವೇರಲಿದೆ.

ಕಾರ್ಯಕ್ರಮ ಉದ್ಘಾಟನೆ ಬಳಿಕದ ದಿನದಲ್ಲಿ “ವಿದ್ವತ್ ಪ್ರತಿಭಾನ್ವೇಷಣೆ” ಎಂಬ ಕಾರ್ಯಕ್ರಮದಡಿ ಕರ್ನಾಟಕ ರಾಜ್ಯದ ಎಲ್ಲೆಡೆಯಿಂದ ಆಗಮಿಸುವ 10ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪರೀಕ್ಷೆ” ಬರೆಯುವ ಅವಕಾಶವನ್ನು ವಿದ್ವತ್ ಎಜುಕೇಶನ್ ಫೌಂಡೇಶನ್ ನೀಡಲಿದೆ. ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಗೌರವ ನೀಡುವ ಸಲುವಾಗಿ ವಿದ್ವತ್ ಕೆಲವೊಂದು ಯೋಜನೆಗಳನ್ನು ಹಮ್ಮಿಗೊಂಡಿದೆ. ಅಗ್ರ ಕ್ರಮಾಂಕದಲ್ಲಿ ಗುರುತಿಸಿರುವ ವಿದ್ಯಾರ್ಥಿಗೆ “ಲ್ಯಾಪ್ಟಾಪ್” ಮತ್ತು ಇತರ ಪ್ರತಿಭಾನ್ವಿತ 10 ವಿದ್ಯಾರ್ಥಿಗಳಿಗೆ “ಟ್ಯಾಬ್” ನ್ನು ವಿಶೇಷ ಬಹುಮಾನವಾಗಿ ನೀಡಲಿದೆ. ಹಾಗೂ ಟ್ಯಾಲೆಂಟ್ ಟೆಸ್ಟ್ ಅಥವಾ ಪ್ರತಿಭಾ ಪರೀಕ್ಷೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಅವರ ಅಂಕಗಳಿಕೆಗನುಗುಣವಾಗಿ ಕಾಲೇಜು ಶುಲ್ಕದಲ್ಲಿ ವಿಶೇಷ ರಿಯಾಯಿತಿಯನ್ನು ಒದಗಿಸಲಾಗುತ್ತದೆ ಎಂದು ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ, ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಈ. ಮಂಡಗಳಲೆ, ಪ್ರಾಂಶುಪಾಲರಾದ ಹರೀಶ್ ಕೆ.ಆರ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಚೇರಿಯಲ್ಲಿ ಐಟಿ ಶೋಧ ನಡೆಯುತ್ತಿದ್ದಾಗಲೇ ಶೂಟ್ ಮಾಡಿಕೊಂಡು ಕಾನ್ಸಿಡೆಂಟ್ ಗ್ರೂಪ್ ನ ಸಿ.ಜೆ. ರಾಯ್ ಆತ್ಮಹತ್ಯೆ
ಬೆಂಗಳೂರು, ಜ. 31: ಬೆಂಗಳೂರಿನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ‘ಕಾನ್ಸಿಡೆಂಟ್ ಗ್ರೂಪ್’ನ ಸಂಸ್ಥಾಪಕ ಮತ್ತು ಮಾಲೀಕರಾದ ಸಿ.ಜೆ. ರಾಯ್ ಅವರು ಶುಕ್ರವಾರ (ಜ.30) ತಮ್ಮ ಕಚೇರಿಯಲ್ಲಿ ಐಟಿ ಶೋಧ ನಡೆಯುತ್ತಿದ್ದಾಗಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸಿ.ಜೆ.ರಾಯ್ ತನ್ನ ಗನ್‌ನಿಂದ ಗುಂಡು ಹಾರಿಸಿಕೊಂಡು ಜೀವ ಕಳೆದುಕೊಂಡಿದ್ದಾರೆ. ಅವರನ್ನು ತಕ್ಷಣ ಎಚ್‌ಎಸ್‌ಆರ್ ಲೇಔಟ್ನ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿಜೆ ರಾಯ್ ಸಾವನ್ನಪ್ಪಿದರು ಎಂದು ವರದಿಯಾಗಿದೆ.

ರಿಯಲ್ ಎಸ್ಟೇಟ್ ಲೇಔಟ್, ಹೋಟೇಲ್, ರೆಸಾರ್ಟ್, ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಿ.ಜೆ.ರಾಯ್ ಬಂಡವಾಳ ಹೂಡಿದ್ದರು. ಯಶಸ್ವಿ ಉದ್ಯಮಿಯಾಗಿದ್ದ ಅವರು ಕಾನ್ಸಿಡೆಂಟ್ ಗ್ರೂಪ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.