Author: admin

ಉಡುಪಿ: ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಜ.15, ಶನಿವಾರ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್‍ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಅನಿವಾರ್ಯ ಸಂದರ್ಭಗಳಲ್ಲಿ, ನೀವು ನನಗೆ ಕರೆ ಮಾಡಬಹುದಾಗಿದೆ.  ಕಳೆದ ಎರಡು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಕೊಳ್ಳಲು ಮನವಿ ಮಾಡುತ್ತೇನೆ’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

Read More

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ.17,ಸೋಮವಾರ ಶಾಲಾ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು ದ.ಕ.ಜಿಲ್ಲೆಯಲ್ಲಿ 5 ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಬಂದ ಶಾಲೆಗಳನ್ನು ಒಂದು ವಾರದ ಮಟ್ಟಿಗೆ ತಾತ್ಕಾಲಿಕ ಸ್ಥಗಿತಗೊಳಿಸಿ ಆನ್‌ಲೈನ್ ತರಗತಿಗಳನ್ನು ಆರಂಭಿಸಲು ದ. ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ    ಈಗಿರುವ ಸ್ಥಿತಿಯಲ್ಲಿ ದ.ಕ.ಜಿಲ್ಲೆಯಲ್ಲಿ ಪೂರ್ತಿಯಾಗಿ ಶಾಲೆಗಳನ್ನು ಸ್ಥಗಿತಗೊಳಿಸುವುದರಿಂದ ತೊಂದರೆಯಾಗಲಿದೆ. ಈ ಕಾರಣದಿಂದ ಯಾವ ಶಾಲೆಗಳಲ್ಲಿ ಹೆಚ್ಚುಕೋವಿಡ್ ಪಾಸಿಟಿವ್ ಸಂಖ್ಯೆ ಕಂಡು ಬಂದಿದೆಯೋ ಆ ಶಾಲೆಗಳನ್ನು ಮಾತ್ರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಎಂದು ಅಧಿಕಾರಿಗಳು, ಆಡಳಿತ ಮಂಡಳಿಯಿಂದ ಅಭಿಪ್ರಾಯ ವ್ಯಕ್ತವಾಯಿತು.      ದ.ಕ.ಜಿಲ್ಲೆಯ ಶಾಲೆಗಳಿಂದ ದಿನನಿತ್ಯ ಕೊರೊನಾ ಪ್ರಕರಣ ಬಗ್ಗೆ ಮಾಹಿತಿ ಪಡೆದು, ಅದಕ್ಕನುಗುಣವಾಗಿ ಶಿಕ್ಷಣ ಇಲಾಖೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಒಂದು ವಾರದ ನಂತರ ಮತ್ತೊಂದು ಸುತ್ತಿನಲ್ಲಿ ಶಾಲಾ ಆಡಳಿತ ಮಂಡಳಿ, ಅಧಿಕಾರಿಗಳ ಸಭೆ…

Read More

ಬೆಂಗಳೂರು :ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಹಾಗೂ ಓಮಿಕ್ರಾನ್ ಸೋಂಕಿಗೆ ಕಡಿವಾಣ ಹಾಕಲು‌ರಾಜ್ಯ ಸರಕಾರ ಮತ್ತೊಂದಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸಿದೆ. ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ ಸಚಿವರಾದ ಡಾ. ಸುಧಾಕರ್, ಆರ್. ಅಶೋಕ್, ಅಶ್ವತ್ಥ ನಾರಾಯಣ್ ಹಾಗೂ ತಜ್ಞರ ಸಮಿತಿ ಜತೆ ಸುಮಾರುಮೂರುವರೆ ಗಂಟೆಗಳ ಕಾಲ‌ನಡೆದ ಸಭೆ ಬಳಿಕ ಸಚಿವರು ಈ ನಿರ್ಧಾರವನ್ನು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ 10-12ನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳನ್ನು ಮುಚ್ಚಿ ಕೇವಲ ಆನ್‌ಲೈನ್ ತರಗತಿ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ ಮುಂದುವರೆಯಲಿದ್ದು ಈ ವಾರದಿಂದ 2 ವಾರ ವಾರಾಂತ್ಯದ ಕರ್ಫ್ಯೂ ಇರಲಿದೆ. ಪಬ್, ಬಾರ್, ಮಾಲ್, ಚಿತ್ರಮಂದಿರ, ಹೋಟೆಲ್ ಗಳಲ್ಲಿ ಶೇ. 5050ರಷ್ಟುಜನರ ಮಿತಿ ಇರಬೇಕು. ಯಾವುದೇ ಸಭೆ, ಸಮಾರಂಭ ಮಾಡುವಂಯಿಲ್ಲ ಇದು ಎಲ್ಲಾ ರಾಜಕೀಯ ಪಕ್ಷಕ್ಕೂ ಅನ್ವಯ. ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ‌ ಪೂಜೆ ಯಥಾಸ್ಥಿತಿ ಆದರೆ ನಿಗದಿಗಿಂತ ಅಧಿಕ ಜನರು ಸೇರುವ ಹಾಗಿಲ್ಲ. ಮದುವೆ ಹೊರಾಂಗಣದಲ್ಲಿದ್ದರೆ 200, ಒಳಾಂಗಣದಲ್ಲಿದ್ದರೆ 100 ಜನರಿಗೆ…

Read More

ಮುಂಬೈ: ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಕತ್ರಿನಾ ಕೈಫ್ , ವಿಕ್ಕಿ ಕೌಶಲ್ ಗೆ ಸೆಲಿಬ್ರಿಟಿ ಫ್ರೆಂಡ್ಸ್ ಗಳಿಂದ ದುಬಾರಿ ಗಿಫ್ಟ್ ಸಿಗುತ್ತಿದೆ. ಕತ್ರಿನಾ ಮತ್ತು ವಿಕ್ಕಿ ಕೌಶಲ್ ಡಿ.9 ರಂದು ರಾಜಸ್ಥಾನದಲ್ಲಿ ವಿವಾಹವಾಗಿದ್ದರು. ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ವಿವಾಹದಲ್ಲಿ ಭಾಗಿಯಾಗಿದ್ದರು.   ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಈ ನವ ಜೋಡಿಗೆ ಬರೋಬ್ಬರಿ 3 ಕೋಟಿ ಬೆಲೆಬಾಳುವ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ರಣಬೀರ್ ಕಫೂರ್ ಸುಮಾರು 2.7 ಕೋಟಿ ಬೆಲೆಬಾಳುವ ಡೈಮಂಡ್ ನೆಕ್ಲೆಸ್ ಗಿಫ್ಟ್ ನೀಡಿದ್ದಾರೆ ಎಂದು ಬಾಲಿವುಡ್ ಲೈಫ್ ಹೇಳಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 6.4 ಲಕ್ಷ ರೂ. ಮೌಲ್ಯದ ಡೈಮಂಡ್ ಕಿವಿಯೊಲೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಹೃತಿಕ್ ರೋಷನ್ 3 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಜಿ 310 ಆರ್ ಬೈಕ್ ನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂದು ವರದಿಯಾಗಿದೆ.

Read More

ಲಂಡನ್: ದುಬೈಯ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಹೆಂಡತಿ ಹಯಾ ಬಿಂಟ್‌ ಅಲ್ ಹುಸೇನ್(47) ಅವರಿಗೆ ವಿಚ್ಛೇದನ ನೀಡಿದ್ದು, ಬ್ರಿಟನ್ ಹೈಕೋರ್ಟ್ ಅವರ ಅರ್ಜಿಯನ್ನು ಇತ್ಯರ್ಥಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ. ದುಬೈ ದೊರೆ ತಮ್ಮ ವಿಚ್ಛೇದಿತ ಪತ್ನಿಗೆ 5,527 ಕೋಟಿ ರೂ.ಗಳಷ್ಟು ಜೀವನಾಂಶ ಕೊಡಬೇಕು ಎಂದು ಬ್ರಿಟನ್‌ ಹೈಕೋರ್ಟ್ ತೀರ್ಪು ನೀಡಿದೆ. ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾ ಬಿಂಟ್‌ ಅಲ್ ಹುಸೇನ್ ಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ ಮತ್ತು ಹಯಾ ಬಿಂಟ್‌ ಅಲ್ ಹುಸೇನ್ ಅವರಿಗೆ ದಂಪತಿಗೆ ಅಲ್ ಜಲಿಲಿಯಾ(14) ಜಯದ್ (9) ಎಂಬ ಇಬ್ಬರು ಮಕ್ಕಳಿದ್ದಾರೆ.ಇನ್ನು ಈ ಎರಡು ಮಕ್ಕಳ ಶಿಕ್ಷಣಕ್ಕಾಗಿ 96 ಕೋಟಿ ರೂ., ಹಾಗೂ ಜವಾಬ್ದಾರಿ ನಿಭಾಯಿಸಲು 112 ಕೋಟಿ ರೂ. ವಾರ್ಷಿಕವಾಗಿ ನೀಡಬೇಕಿದ್ದು, ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಇತರೆ ಅಗತ್ಯತೆಗಳಿಗೆ 2,907 ಕೋಟಿ…

Read More

ಮೈಸೂರು: ಕೊರೊನಾ ರೂಪಾಂತರಿ ಓಮಿಕ್ರಾನ್​ ವೈರಸ್​ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಾಣಿಸಿಕೊಂಡಿದೆ. ವಿದೇಶದಿಂದ ಬಂದಿದ್ದ 9 ವರ್ಷದ ಬಾಲಕಿಗೆ ಸೋಂಕು ತಗುಲಿದ್ದು ಸದ್ಯ ಸೋಂಕಿತ ಮಗುವಿಗೆ ಯಾವುದೇ ಲಕ್ಷಣಗಳಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಮೈಸೂರು ಮೂಲದ ಕುಟುಂಬದವರು ಸ್ವಿಡ್ಜರ್​​ಲ್ಯಾಂಡ್​​ನಲ್ಲಿ ನೆಲೆಸಿದ್ದರು. ಕ್ರಿಸ್​​ಮಸ್​ ಸಲುವಾಗಿ ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಬರುವ ಮುಂಚೆ ಅಬುಧಾಬಿಗೆ ಬಂದು ಎರಡು ದಿನ ತಂಗಿದ್ದರು. ನಂತರ, ಅವರು ಡಿ.19 ರಂದು ಮೈಸೂರಿಗೆ ಬಂದಿದ್ದರು ಎನ್ನಲಾಗಿದೆ. ಪ್ರಾಥಮಿಕ, ದ್ವಿತೀಯ ಸೋಂಕಿತರ ಪತ್ತೆ ಮಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.. ಈಗಾಗಲೇ ರಾಜ್ಯದ ದಕ್ಷಿಣಕನ್ನಡ, ಉಡುಪಿ, ಬೆಂಗಳೂರು, ಭದ್ರಾವತಿ ಮೊದಲಾದೆಡೆ ಸೋಂಕು ಕಾಣಿಸಿಕೊಂಡಿದ್ದು, ಇದೀಗಾ ಸೋಂಕು ಮೈಸೂರಿನಲ್ಲಿ ಕೂಡ ಪತ್ತೆಯಾಗಿದೆ.

Read More

ಮಂಗಳೂ ರು : ವೇಗಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ,ನಿರ್ದೇಶಕ ರಾಮ್ ಶೆಟ್ಟಿ ನಿರ್ದೇಶನದ ರೋಷನ್ ವೇಗಸ್ ನಿರ್ಮಾಣದ ‘ಏರೆಗಾವುಯೆ ಕಿರಿಕಿರಿ’ ತುಳು ಚಿತ್ರ ಡಿಸೆಂಬರ್ 24 ರಂದು ಮಂಗಳೂರಿನ ಪಿವಿಆರ್ ಸಿನಿಮಾಸ್, ಸಿನಿಪೋಲಿಸ್, ಬಿಗ್ ಸಿನಿಮಾಸ್, ಉಡುಪಿಯ ಕಲ್ಪನಾ ಥಿಯೇಟರ್, ಮಣಿಪಾಲದ ಭಾರತ್ ಮಾಲ್, ಕಾರ್ಕಳದ ರಾಧಿಕಾ, ಮಡಿಕೇರಿಯ ಸುಂಟಿಕೊಪ್ಪದ ಗಣೇಶ್ ಟಾಕೀಸ್ ಮತ್ತು ಬೆಳ್ತಂಗಡಿಯ ಭಾರತ್ ಚಿತ್ರಮಂದಿರದಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಪತ್ರೀಕಾಗೋಷ್ಠಿಯಲ್ಲಿ ನಟ ನವೀನ್ ಡಿ ಪಡೀಲ್ ಹೇಳಿದರು. ತುಳು ಚಲನಚಿತ್ರ ನಟ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ರೋಶನ್ ವೇಗಸ್, ಶ್ರದ್ಧಾ ಸಾಲಿಯಾನ್, ಪ್ರದೀಪ್ ಚಂದ್ರ, ಹರೀಶ್ ವಾಸು ಶೆಟ್ಟಿ, ಮೊಹಮ್ಮದ್ ನಹೀಂ, ಸಾಯಿ ಕೃಷ್ಣ ಕುಡ್ಲ, ಐಶ್ವರ್ಯಾ ಹೆಗ್ಡೆ, ಶೇಖರ್ ಭಂಡಾರಿ, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಮಣಿಬೆಟ್ಟು ಕೊಡೆಪದವು, ಸಂದೀಪ್ ಶೆಟ್ಟಿ ಸುನೀಲ್ ನೆಲ್ಲಿಗುಡ್ಡೆ, ಸರೋಜಿನಿ ಶೆಟ್ಟಿ, ರಘು ಪಾಂಡೇಶ್ವರ, ಪವಿತ್ರಾ ಶೆಟ್ಟಿ ಸೇರಿದಂತೆ…

Read More

ಮಂಗಳೂರು: ಎ.ಟಿ.ಎಮ್. ಕಿರುಚಿತ್ರ ತಾರೀಖು 22-12-2021ರಂದು ಕರಾವಳಿಯ ದೈಜಿ ವರ್ಲ್ಡ್  ಚಾನೆಲ್ ಇವರLOCALWOOD APPನಲ್ಲಿ  ಬಿಡುಗಡೆಗೊಳ್ಳಲಿದೆ. ಸಿನಿಮಾಭಿಮನಿಗಳು ಈ appನ್ನು ಡೌನ್ಲೋಡ್ ಮಾಡಿ ಕಿರು ಚಿತ್ರವನ್ನು ವೀಕ್ಷಿ ಸಬಹುದು.  ತುಕಾರಾಂ ಬಾಯಾರು ಇವರ ನಿರ್ಮಾಣದಲ್ಲಿ, ವರುಣ್ ಕುಮಾರ್ ಹೆಚ್ ಇವರ ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣ ವಾಗಿದೆ. ಈ ಚಿತ್ರದ ಛಾಯಾಗ್ರಹಣ ಗೋಕುಲಕೃಷ್ಣನ್, ಸಂಗೀತ ನಿರ್ದೇಶನ ಜಯಕಾರ್ತಿ, ಸಹನಿರ್ದೇಶಕ ಶರತ್ ಕಿರಣ್ ಟಿ, ಸಹ ಛಾಯಾಗ್ರಹಣ ಸೂರಜ್ ಶೆಟ್ಟಿ, ವಿನಯ್ ಶೆಟ್ಟಿಗಾರ್, ನಿರ್ಮಾಣ ವಿಭಾಗ ಅನುಸುಲ್ ಶೆಟ್ಟಿ ತಿಂಬರ, ಆದಿತ್ಯ ಶೆಟ್ಟಿ ತಿಂಬರ, ಪೋಸ್ಟರ್ ಡಿಸೈನ್ ತಾರಾನಾಥ ಆಚಾರ್ಯ ಮಾಡಿದ್ದಾರೆ. ಈ ಕಿರುಚಿತ್ರದಲ್ಲಿ ರಾಧಾಕೃಷ್ಣ ಕುಂಬ್ಳೆ, ಮೋಕ್ಷಿತ್ ಶೆಟ್ಟಿ, ವರ್ಷಾ ಸಿ ಮನೋಜ್, ಕಿರಣ್ ಆಚಾರ್ಯ, ಜ್ಯೋತಿಪ್ರಕಾಶ್ ಶೆಟ್ಟಿ, ಜಯರಾಮ ಆಚಾರ್ಯ ಹೊಸಂಗಡಿ, ವಿಜೇಶ್ ಬಿ.ಕೆ.ರೈ, ದಿವಾಕರ ಉಪ್ಪಳ, ಅರುಣ್ ಪ್ರಕಾಶ್ ರಾಜ್, ಸಂದೇಶ ಆಚಾರ್ಯ, ರಜನಿ ಚಂದ್ರಹಾಸ. ಇವರೆಲ್ಲರೂ ಅಭಿನಯಿಸಿದ್ದಾರೆ.

Read More

ಮಂಗಳೂರು: ನಮ್ಮೂರ ಆಟ ಕೂಟ ಟ್ರಸ್ಟ್ ನ ಉದ್ಘಾಟನಾ ಸಮಾರಂಭ ಹಾಗೂ ಸಾಧಕರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ರವಿವಾರ ಡಿ.05,ರಂದು ನಗರದ ಪುರಭವನದಲ್ಲಿ ಜರಗಿತು. ಶಾಸಕರಾದ ವೇದವ್ಯಾಸ ಕಾಮತ್ ಅವರು ಟ್ರಸ್ಟ್ನ ಉದ್ಘಾಟನೆ ನೆರವೇರಿಸಿದರು.ನಂತರ ಮಾತಾಡಿ ಮೂಲ್ಕಿ ಸುಂದರರಾಮ ಶೆಟ್ಟಿಯವರು ಬ್ಯಾಂಕಿಂಗ್ ಹಾಗೂ ಇತರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ ಇಂದು ಈ ವೇದಿಕೆಯಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡುವುದು ಉತ್ತಮ ಕಾರ್ಯ ಎಂದರು. ಮೂಲ್ಕಿ ಸುಂದರರಾಮ ಶೆಟ್ಟಿ ಅವರು ಒಬ್ಬ ಆದರ್ಶ ವ್ಯಕ್ತಿಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಲ್ಲಿಸಿದ ಅವರ ಸೇವೆಯು ಸದಾ ಸ್ಮರಣೀಯ ಎಂದು ಶ್ರೀ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ್ ಹೆಗ್ದೆ ಅವರು ಮಾತಾಡಿ ಬ್ಯಾಂಕಿಂಗ್ ಕ್ಷೇತ್ರದ ಅವರ ಸೇವೆ ಬಹಳ ಶ್ರೇಷ್ಠವಾದದ್ದು,ವಿಜಯ ಬ್ಯಾಂಕನ್ನು ಅವರು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ…

Read More