Author: admin

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಕೆಲವು ಜನರು ಕಾಲಿಗೆ ಗಾಯ ಆಗಿರುತ್ತದೆ. ಅದರಿಂದ ಕಾಲಿನಲ್ಲಿ ಬಾವು ಮತ್ತು ಊತ ಕಂಡು ಬಂದು ಅನೇಕ ರೀತಿಯಲ್ಲಿ ನೋವನ್ನು ಅನುಭವಿಸುತ್ತಾರೆ. ಹಾಗೆಯೇ ಊತವನ್ನು ಕಡಿಮೆ ಮಾಡಲು ಉರಿಯೂತ ಮತ್ತು ನೋವನ್ನು ನಿವಾರಿಸಲು ವ್ಯಾಯಾಮ ಮಾಡಬೇಕು ಅತ್ಯುತ್ತಮ ವ್ಯಾಯಾಮ [Exercise] ಗಳಲ್ಲಿ ಈಜು ಕೂಡ ಒಂದಾಗಿದೆ. ಈ ಒಂದು ವಾರದಲ್ಲಿ ಕನಿಷ್ಠ ಐದು ದಿನಗಳು ವಾಕಿಂಗ್ ಜಾಗಿಂಗ್ [Walking jogging] ಮೂವತ್ತು ನಿಮಿಷಗಳ ಕಾಲ ಮಾಡಬೇಕು. ಇದರಿಂದಲೂ ಊತ ಮತ್ತು ಬಾವುಗಳ ಸಮಸ್ಯೆಯನ್ನು ಹೋಗಲಾಡಿಸಬಹುದು. ಕಾಲಿನ ಗಾಯವಾಗಿ ಬಾವು ಮತ್ತು ಊತ ಸಂಭವಿಸುತ್ತವೆ ಅದರ ನಿವಾರಣಾ ಕ್ರಮವನ್ನು ತಿಳಿದುಕೊಳ್ಳೋಣ. ಕೆಲವೊಂದು ಸಮಯದಲ್ಲಿ ಕಾಲಿಗೆ ಪೆಟ್ಟು ಬಂದು ಕಾಲಿಗೆ ಬಾವು ಬಂದಿರುತ್ತದೆ. ಆ ಸಂಧರ್ಭದಲ್ಲಿ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಬಾವು ಕಡಿಮೆ ಮಾಡಿಕೊಳ್ಳಬಹುದು. ಕೆಂಪು ಮೆಣಸು [Red pepper] ಮತ್ತು ಹರಲೇಳೆ ಜಜ್ಜಿ ಲೇಪನ ಮಾಡಿಕೊಂಡು ಬಾವು ಆದ ಜಾಗದಲ್ಲಿ ಹಚ್ಚಬೇಕು. ಕೆಲವೇ…

Read More

ಕೆಎನ್‌ಎನ್‌ಡಿಜಿಟಲ್‌ಡೆಸಕ್‌: ಕೆಜಿಎಫ್2.. ಯಾವಾಗ ಈ ಸಿನಿಮಾದ ದರ್ಶನವಾಗುತ್ತೋ… ಆ ದಿವ್ಯ ಘಳಿಗೆಗೆ ಸಮಯ ಬೇಗ ಒದಗಿ ಬರಬಾರದಾ ಎಂದು ಸಿನಿ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 14ರಂದು ಕೆಜಿಎಫ್ 2 ರಿಲೀಸ್ ಆಗುತ್ತೆ ಅಂತ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಆದ್ರೆ ಅಷ್ಟು ದಿನಗಳನ್ನ ಕಾಯೋದಕ್ಕೂ ಫ್ಯಾನ್ಸ್ ಗೆ ಆಗ್ತಾ ಇಲ್ಲ. ಜಪ ಮಾಡಿಕೊಂಡು ಕೆಜಿಎಫ್ ಕೆಜಿಎಫ್ ಎಂದು ಜಪ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಖುಷಿಯ ಸುದ್ದಿ ಏನಪ್ಪ ಅಂದ್ರೆ ಲಾಲ್ ಸಿಂಗ್ ಚಡ್ಡಾ ನಮ್ಮ ಕೆಜಿಎಫ್ ಗೆ ಸಪೋರ್ಟ್ ಮಾಡ್ತೀನಿ ಎಂದಿದ್ದಾರೆ. ಎಸ್.. ಕೆಜಿಎಫ್ 1 ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಅಷ್ಟೇ ಕಾತುರ ಕೆಜಿಎಫ್2 ನೋಡಲು ಎಲ್ಲರಲ್ಲೂ ಕಾಣ್ತಿದೆ. ಆದ್ರೆ ಈ ಮಧ್ಯೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಸಿನಿಮಾಗೆ ಸಪೋರ್ಟ್ ಮಾಡ್ತೀನಿ ಅಂತ ಹೇಳಿರೋ ಮಾತು ಎಲ್ಲರನ್ನ ಮತ್ತಷ್ಟು ಖುಷಿಗೊಳಿಸಿದೆ. ನನ್ನಿಂದ ಸಿನಿಮಾಗೆ ಏನು ಸಪೋರ್ಟ್ ಬೇಕಿದ್ದರು ಕೇಳಿ ಮಾಡ್ತೇನೆ ಅಂತ ಹೇಳಿದ್ದೀನಿ ಅಂತ…

Read More

ಬೆಂಗಳೂರು: ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನಟಿ ಶೃತಿ ಹರಿಹರನ್‌ಗೆ ಪೊಲೀಸರಿಂದ ನೋಟಿಸ್‌ ನೀಡಲಾಗಿದೆಯಂತೆ. 2018ರಲ್ಲಿ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಕೇಸು ದಾಖಲು ಮಾಡಿದ್ದ ಶ್ರುತಿ ಅವರ ದೂರಿನ್ವಯ ಅರ್ಜುನ್ ಸರ್ಜಾ ವಿರುದ್ಧ ಭಾರತೀಯ ದಂಡ ಸಂಹಿತೆ 354, 354 ಎ ಮತ್ತು 506 ಸೆಕ್ಷನ್​ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈಗ ಶೃತಿ ಅವರು ಸಲ್ಲಿಸಿದ್ದ ದೂರಿಗೆ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ‘ಬಿ’ರಿಪೋರ್ಟ್ ಸಲ್ಲಿಸಿಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಪ್ರಕರಣದ ದೂರುದಾರರಿಗೆ ಮಾಹಿತಿ ನೀಡಬೇಕಾರಿರುವ ಹಿನ್ನಲೆಯಲ್ಲಿ, ಶ್ರುತಿ ಹರಿಹರನ್​ಗೆ ಕಬ್ಬನ್​ ಪಾರ್ಕ್​ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ. ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಸರ್ಜಾ ವಿರುದ್ಧ ಶ್ರುತಿ ಆರೋಪಿಸಿ ದೂರು ನೀಡಿದ್ದರು, ನಾಲ್ಕು ವರ್ಷಗಳ ಬಳಿ ಇದೀಗ ಪೊಲೀಸರು ಠಾಣೆಗೆ ಬರುವಂತೆ ಸೂಚನೆ ನೀಡಿದ್ದು, ಈಗ ಮತ್ತೆ ಇಬ್ಬರ ಪ್ರಕರಣ ಚಾಲ್ತಿಗೆ ಬಂದಿದೆ

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಜನರ ಗುಂಪೊಂದು ರನ್‌ವೇಯಿಂದ ವಿಮಾನವನ್ನು ತಳ್ಳುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನೇಪಾಳದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಬುಧವಾರ ತಾರಾ ಏರ್ ವಿಮಾನವನ್ನು ತಳ್ಳುತ್ತಿರುವುದನ್ನು ಚಿತ್ರೀಕರಿಸಲಾಗಿದೆ ಅಂತ ತಿಳಿದು ಬಂದಿದೆ. ನೇಪಾಳದ ಸುದ್ದಿಗಳ ಪ್ರಕಾರ, ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನದ ಹಿಂಭಾಗದ ಟೈರ್ ಸ್ಫೋಟಗೊಂಡಿತು, ಇದರಿಂದಾಗಿ ರನ್‌ವೇಯಿಂದ ಚಲಿಸಲು ಸಾಧ್ಯವಾಗಲಿಲ್ಲ. ವಿಮಾನವನ್ನು ರನ್‌ವೇಯಿಂದ ಸರಿಸಲು ಸುಮಾರು 20 ಜನರ ಗುಂಪು ಒಟ್ಟಾಗಿ ಕೆಲಸ ಮಾಡುವುದನ್ನು ವೈರಲ್‌ ವಿಡಿಯೋದಲ್ಲಿ ಕಾಣಬಹುದಾಗಿದೆ.

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಒಮಿಕ್ರಾನ್ ವೈರಸ್  (Omicron Variant) ಕುರಿತಂತೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಒಮಿಕ್ರಾನ್ ನಿಂದ 3 ಬಾರಿ ಮರು ಸೋಂಕು ಹರಡುವ ಸಾಧ್ಯತೆ ಇದೆ ಎಂದು ದಕ್ಷಿಣ ಆಫ್ರಿಕಾ ವಿಜ್ಞಾನಿಗಳು (South African scientist) ತಿಳಿಸಿದ್ದಾರೆ. ಒಮಿಕ್ರಾನ್ ಸೋಂಕಿನಿಂದ 3 ಬಾರಿ ಮರು ಸೋಂಕು ಹರಡಲು ಕಾರಣವಾಗುತ್ತದೆ ಎಂದು ದಕ್ಷಿಣ ಆಫ್ರಿಕಾ ವಿಜ್ಞಾನಿಗಳ ಅಧ್ಯಯನ ಮಾಹಿತಿ ನೀಡಿದೆ. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ 35,670 ಮಂದಿಗೆ ಮರು ಸೋಂಕು ದೃಢಪಟ್ಟಿದೆ. ಕೊರೊನಾ ಬಂದು ಗುಣಮುಖರಾಗಿದ್ದರೂ ಮರು ಸೋಂಕು ದೃಢಪಟ್ಟಿದೆ ಎಂದು ವಿಜ್ಞಾನಿಗಳ ಅಧ್ಯಯನ ಮಾಹಿತಿ ನೀಡಿದೆ. ಕೊರೊನಾ ಬಂದು ಗುಣಮುಖರಾದವರಿಗೂ 90 ದಿನಗಳ ನಂತರ ಕೊರೊನಾ ಮರು ಸೋಂಕು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಮರು ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ ಎಂದು ಸೆಂಟರ್ ಎಕ್ಸ್ ಲೆನ್ಸ್ ನಿರ್ದೇಶಕ ಜುಲಿಯೆಟ್ ಪುಲಿಯಮ್ ತಿಳಿಸಿದ್ದಾರೆ.

Read More

ರಾಷ್ಟ್ರೀಯ ಮೌಲ್ಯಗಳನ್ನು ಕಲಿಸಿ, ಮಕ್ಕಳಲ್ಲಿ ರಾಷ್ಟ್ರೀಯ ಪರ ಚಿಂತನೆ ಮೂಡಿಸುವ ಕಾರ್ಯ ಶಾಲೆಗಳಿಂದ ಆಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ವಿದ್ಯಾರ್ಥಿಗಳಲ್ಲಿ ಅಂತಹ ಶಿಕ್ಷಣ ಸಿಗುವ ಕೆಲಸ ಮಾಡಬೇಕು. ಶಾಲೆಗಳು ರಾಷ್ಟ್ರಭಕ್ತರನ್ನು ಸಮಾಜಕ್ಕೆ ನೀಡುವ ಕಾರ್ಯದಲ್ಲಿ ಶಿಕ್ಷಕರು, ಪೋಷಕರು, ಜನಪ್ರತಿನಿಧಿಗಳು ಕೈ ಜೋಡಿಸಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಹೇಳಿದರು. ಅವರು ಮಂಗಳೂರು ತಾಲೂಕಿನ ಗುರುಕಂಬಳದಲ್ಲಿ ನಿರ್ಮಾಣವಾಗಲಿರುವ ಮೌಲಾನಾ ಆಝಾದ್ ಮಾದರಿ ಇಂಗ್ಲೀಷ್ ಮೀಡಿಯಂ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ಬುಧವಾರ ನೆರವೇರಿಸಿ ಮಾತನಾಡುತ್ತಿದ್ದರು. ಈ ಶಾಲೆ 2.35 ಕೋಟಿ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಅಮಿತಾ ಶೆಟ್ಟಿ ಪೆರಾರ ಹಾಗೂ ಪಂಚಾಯತ್ ಸದಸ್ಯರು, ಗ್ರಾಮದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.

Read More

ನಗರದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐಸೋಲೇಷನ್ ಸೆಂಟರ್ ಹಾಗೂ ಅದಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಎಸ್.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಡಾ. ರಾಜೇಂದ್ರ ಕುಮಾರ್ ಅವರನ್ನು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಭೇಟಿ ಮಾಡಿದರು.ನಗರದ ಹೃದಯಭಾಗದಲ್ಲಿ ಐಸೋಲೇಷನ್ ಸೆಂಟರ್ ತೆರೆದು ಅಗತ್ಯವಿರುವ ಕೋವಿಡ್ ಸೋಂಕಿತರ ಸೇವೆಗಾಗಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಉಪಕರಣ ಹಾಗೂ ನಿರ್ವಹಣೆಯ ಕುರಿತು ಚರ್ಚೆ ನಡೆಯಿತು. ಎಸ್.ಡಿ.ಸಿ.ಸಿ ಬ್ಯಾಂಕ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಂಟಿಯಾಗಿ ಈ ಆಸ್ಪತ್ರೆಯ ನಿರ್ವಹಣೆ ಮಾಡಲಿದೆ. ಶಾಸಕ ವೇದವ್ಯಾಸ್ ಕಾಮತ್ ಅವರ ಬೇಡಿಕೆಗೆ ಸ್ಪಂದಿಸಿದ ಡಾ. ರಾಜೇಂದ್ರ ಕುಮಾರ್ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕಾಗಿ‌ ಶಾಸಕ ಕಾಮತ್ ಜಿಲ್ಲೆಯ ಜನತೆಯ ಪರವಾಗಿ ಡಾ. ರಾಜೇಂದ್ರ ಕುಮಾರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ‌ ಶೆಟ್ಟಿ ಹಾಗೂ ಪಾಲಿಕೆ ಮುಖ್ಯ ಸಚೇತಕರೂ,ಸ್ಮಾರ್ಟ್…

Read More

ಬೆಂಗಳೂರು : ನಿನ್ನೆ ಸಂಜೆ ಬೆಂಗಳೂರಿನ ಇಬ್ಬರಲ್ಲಿ ಒಮಿಕ್ರಾನ್ ಸೋಂಕು (Omicron Variant) ದೃಡಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸೋಂಕಿತರ ಸಂಪರ್ಕಿತರ ಪತ್ತೆಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಹೇಳಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ಸಂಜೆ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸೋಂಕಿತರ ಸಂಪರ್ಕಿತರ ಪತ್ತೆಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಒಮಿಕ್ರಾನ್ ವೈರಸ್ ಹೇಗೆ ನಿಭಾಯಿಸಬೇಕೆಂದು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಸಭೆಯ ಬಳಿಕ ಮಾರ್ಗಸೂಚಿ ಸಿದ್ದಪಡಿಸುತ್ತೇವೆ. ಬೇರೆ ಬೇರೆ ದೇಶಗಳಲ್ಲಿ ಪ್ರೋಟೋಕಾಲ್ ಹೇಗೆ ಎಲ್ಲದರ ಬಗ್ಗೆ ಅಧ್ಯಯನ ನಡೆಸಿ ಒಮಿಕ್ರಾನ್ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Read More

ಬೆಂಗಳೂರು: ರಾಜ್ಯಾದ್ಯಂತ ಕೃಷಿ ಭೂಮಿಯನ್ನು ಐದು ಗುಂಟೆಗಿಂತಲೂ ತುಂಡು ಭೂಮಿಯಾಗಿ ಪರಿವರ್ತಿಸಿ, 11-ಇ ನಕ್ಷೆ ಮತ್ತು ಪೋಡಿ ಕಾರ್ಯ ಕೈಗೊಳ್ಳೋದಕ್ಕೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿಯನ್ನು ನೀಡಿದೆ. ಈ ಬಗ್ಗೆ ಕಂದಾಯ ಇಲಾಖೆಯ ( Revenue Department ) ಸರ್ಕಾರದ ಉಪ ಕಾರ್ಯದರ್ಶಿ ಭೂ ಮಾಪನ ಇಲಾಖೆಗೆ ಪತ್ರದಲ್ಲಿ ಸ್ಪಷ್ಟ ಪಡಿಸಿದ್ದು, ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 108ರಡಿ ಕೃಷಿ ಉದ್ದೇಶಕ್ಕಾಗಿ ಬಳಸಲಾಗುವ ಭೂಮಿಯನ್ನು ಒಳಗೊಂಡಿರುವ ಸರ್ವೆ ನಂಬರಿನ ( ಹಿಸ್ಸಾ ಸರ್ವೆ ನಂಬರ್ ಗಳನ್ನೂ ಒಳಗೊಂಡು ) ಕನಿಷ್ಠ ವಿಸ್ತೀರ್ಣವನ್ನು ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 03 ಗುಂಟೆ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ 5 ಗುಂಟೆಗಳಿಗೆ ನಿಗದಿಪಡಿಸಲು ಈ ಕೆಳಕಂಡ ಷರತ್ತಿಗೊಳಪಟ್ಟು ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. ಈ ರೀತಿಯ ಕನಿಷ್ಟ ವಿಸ್ತೀರ್ಣದ ನಿರ್ಬಂಧವನ್ನು ಭವಿಷ್ಯಾವರ್ತಿಯಾಗಿ ಜಾರಿಗೆ ತರತಕ್ಕದ್ದು.ಪ್ರಸ್ತುತ ನಿಗಧಿ ಪಡಿಸುತ್ತಿರುವ ಕನಿಷ್ಠ ವಿಸ್ತೀರ್ಣಕ್ಕಿಂತ ಈಗಾಗಲೇ ಕಡಿಮೆ ವಿಸ್ತೀರ್ಣ…

Read More

ಬೆಂಗಳೂರು : ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ, ಮಂದಿಯಲ್ಲಿ 10 ಮಂದಿ ಇಲ್ಲಿ ತನಕ ಪತ್ತೆಯಾಗಿಲ್ಲ ಎನ್ನಲಾಗಿದ್ದು, ಈ ಹತ್ತು ಮಂದಿ ಕೂಡ ಎಲ್ಲಿದ್ದಾರೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದುಕೊಂಡಿದೆ. ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದವರ ಪತ್ತೆಯನ್ನು ಬಿಬಿಎಂಪಿಯಿಂದ ಮಾಡಲಾಗುತ್ತಿದ್ದು, ಕಳೆದ 15 ದಿನದಲ್ಲಿ 57 ಮಂದಿ ನಗರದಲ್ಲಿ ಬಂದಿದ್ದು, ಇಲ್ಲಿ ತನಕ 47 ಮಂದಿ ಮಾತ್ರ ಸಿಕ್ಕಿದ್ದು, ಉಳಿದವರು ಎಲ್ಲಿದ್ದಾರೆ ಎನ್ನುವುದು ಈಗ ಬಿಬಿಎಂಪಿಗೆ, ಸರ್ಕಾರಕ್ಕೆ, ಗೃಹ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ದ.ಆಫ್ರಿಕಾದಿಂದ ಬೆಂಗಳೂರಿಗೆ/ರಾಜ್ಯಕ್ಕೆ ಬಂದಿದ್ದವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಲಾಗುತ್ತಿದ್ದು, ಹೊಸ ವೈರಸ್‌ ಸೋಂಕು ಇಲ್ಲದೇ ಹೋದರು ಕೂಡ ಕ್ವಾರಂಟೈನ್‌ ಮುಗಿದ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ.

Read More