ಮಹಾನಗರ, ಜು, 22 : ಶ್ರೀ ಮಾತಾ ಅಮೃತಾನಂದಮಯಿ ಮಠ ಮಂಗಳೂರು ಇದರ ವತಿಯಿಂದ ಗುರು ಪೂರ್ಣಿಮಾ ದಿನವಾದ 21ರಂದು ಬೆಳಗ್ಗೆ 9 ಗಂಟೆಯಿಂದ ಉರ್ವದ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಮಾತಾ ಅಮೃತಾನಂದಮಯಿ ಮಠ ಮಂಗಳೂರು ಇದರ ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಉಪಸ್ಥಿತಿಯಲ್ಲಿ ಶ್ರೀ ಗುರು ಪಾದುಕಾ ಪೂಜೆ, ದೇವೀ ಪೂಜೆ, ನಡೆಯಿತು.
ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಗುರು ಪೂರ್ಣಿಮಾ ದಿನದ ಮಹತ್ವದ ಕುರಿತು ಸಂದೇಶ ನೀಡಿದರು. ಕಾರ್ಯಕ್ರಮದ ಅಂಗವಾಗಿ ಸರ್ವೈ ಶ್ವರ್ಯ ಪೂಜೆ,ಅರ್ಚನೆ, ಭಜನೆ, ಆರತಿ, ಭಕ್ತರಿಂದ ಕ್ಷೀರಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷಣ ಅಮೀನ್, ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಡಾ| ವಸಂತ ಕುಮಾರ್ ಪೆರ್ಲ, ಸೇವಾ ಸಮಿತಿ ಉಪಾಧ್ಯಕ್ಷ ಸುರೇಶ್ ಅಮೀನ್, ಕಾವ್ಯದರ್ಶಿ ಡಾ| ಅಶೋಕ್ ಶೆಣೈ ಮೊದಲಾದವರು ಭಾಗವಹಿಸಿದ್ದರು.