ಮಂಗಳೂರು, ಆಗಸ್ಟ್ 28: ಕದ್ರಿಯ ಶ್ರೀಕ್ಷೇತ್ರ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀಕೃಷ್ಣ ವೇಷ ಸ್ಪರ್ಧೆಯು ಆಗಸ್ಟ್ 26, ಸೋಮವಾರದಂದು ನಡೆಯಿತು.
ಮಂಗಳೂರು ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜಿ ಮಹಾರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮಿನಾರಾಯಣ ಆಸ್ರಣ್ಣ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 20ಕ್ಕೂ ಹೆಚ್ಚು ಹಸುಗೂಸುಗಳನ್ನು ತೊಟ್ಟಿಲಲ್ಲಿ ತೂಗುವ ಮೂಲಕ ಈ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಶರವು ರಾಘವೇಂದ್ರ ಶಾಸ್ತ್ರಿ, ಎ.ಜೆ.ಶೆಟ್ಟಿ, ನಿತಿನ್ ಕುಮಾರ್, ರತ್ನಾಕರ ಜೈನ್, ಜಿ.ಕೆ.ಭಟ್ ಸೇರಾಜೆ, ಶಕೀಲಾ ಕಾವ, ಭುವನಾಭಿರಾಮ ಉಡುಪ, ವಿಜಯಲಕ್ಷ್ಮಿ ಶೆಟ್ಟಿ, ಮಂಜುಳಾ ಶೆಟ್ಟಿ, ಜ್ಯೂಲಿಯೆಟ್, ಜಯಮ್ಮ, ಮತ್ತಿತರರು ಉಪಸ್ಥಿತರಿದ್ದರು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ತೊಟ್ಟಿಲಕೃಷ್ಣ, ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ಶಂಖನಾದ, ಶಂಖ ಉದ್ಘೋಷ, ರಾಧಾಕೃಷ್ಣ, ರಾಧಾಮಾಧವ, ಯಶೋಧಾಕೃಷ್ಣ, ದೇವಕೀಕೃಷ್ಣ, ವಸುದೇವ ಕೃಷ್ಣ(ಮುಕ್ತ ವಿಭಾಗ), ಯಕ್ಷ ಕೃಷ್ಣ, ನಂದಗೋಕುಲ (ಸಮೂಹ ವಿಭಾಗ), ಛಾಯಾಕೃಷ್ಣ, ಶ್ರೀಕೃಷ್ಣ ವೈಭವ ಚಿತ್ರಕಲೆ, ಅಚ್ಯುತ ರಸಪ್ರಶ್ನೆ ಲಿಖಿತ, ಮಾಧವ ರಸಪ್ರಶ್ನೆಲಿಖಿತ, ಕೇಶವ ರಸಪ್ರಶ್ನೆ ಲಿಖಿತ, ಪಂಡರಾಪುರ ವಿಠಲ (ನೃತ್ಯ ಭಜನಾ ಸ್ಪರ್ಧೆ), ಬಹುಭಾಷಾ ಭಜನೆ ಭಕ್ತಿಗೀತೆ ರಚನೆ, ಬಹುಭಾಷಾ ಕವನ ರಚನೆ, ರಂಗೋಲಿಯಲ್ಲಿ ಶ್ರೀಕೃಷ್ಣ, ಕೃಷ್ಣ ಕಥಾ, ಆನ್ಲೈನ್ ವಿಭಾಗದಲ್ಲಿ ವೃಕ್ಷಕೃಷ್ಣ, ಗೋಪಾಲಕೃಷ್ಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.