ಮಂಗಳೂರು,ಜು.28 : ನಗರದ ಕುಲಶೇಖರ ಕೋಟಿಮುರ ಸಿಲ್ವರ್ ಗೇಟ್ ನ ಗ್ರಂಥಾಲಯದ ಬಳಿ ಇರುವ ನಾಗೇಶ್ ಎಂಬುವವರ ಮನೆ ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್ ರವರು ಕುಟುಂಬಸ್ಥರಿಗೆ ಧೈರ್ಯ ತುಂಬಿ ಪರಿಹಾರ ಕಾರ್ಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದರು.
ಸ್ಥಳದಲ್ಲಿ ಅಜಯ್ ಕುಲಶೇಖರ, ನಿತಿನ್ ಕುಮಾರ್, ಅನಿಲ್, ಹರಿಣಿ ಪ್ರೇಮ್, ಪ್ರಶಾಂತ್, ಸುಶಾಂತ್ ಮೊದಲಾದವರು ಉಪಸ್ಥಿತರಿದ್ದರು.