ಕಾಸರಗೋಡು, 03 : ನಿರ್ಮಾಣ ಹಂತದ ಮನೆಯ ಮಹಡಿಯಿಂದ ಬಿದ್ದು ಆಟೋ ಚಾಲಕ ರೋರ್ವ ರು ಸಾವನ್ನಪ್ಪಿದ ಘಟನೆ ಬಂದ್ಯೋಡ್ ಸಮೀಪದ ಕುಬಣೂರಿನ ನಲ್ಲಿ ನಡೆದಿದೆ.
ಮೃತರನ್ನು ಕುಬಣೂರಿನ ಪದ್ಮ ನಾಭ (45) ಎಂದು ಗುರುತಿಸಲಾಗಿದೆ.
ಪದ್ಮನಾಭರವರು ಗುರುವಾರ ಸಂಜೆ ಮನೆ ಸಮೀಪದ ಸ್ನೇಹಿತ ರೋರ್ವರ ಮಹಡಿ ಗೆ ಹತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಾವನ್ನಪ್ಪಿದ್ದಾರೆ.
ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.