ಸಿದ್ದಾಪುರ, ಮೇ. 8.: ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿ 2 ಅಂಗಡಿಗಳು ಸುಟ್ಟು ಕರಕಲಾದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಕುಂದಾಪುರದ ಸಿದ್ದಾಪುರದಲ್ಲಿ ಸೋಮವಾರ ನಡೆದಿದೆ.
ಅಗ್ನಿ ಅವಘಡದಿಂದ ಸ್ಪೇರ್ ಪಾರ್ಟ್ಸ್ ಅಂಗಡಿ ಮತ್ತು ಮಿಲ್ಕ್ ಪಾರ್ಲರ್ ಸುಟ್ಟು ಕರಕಲಾಗಿದೆ. ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿದ್ದ ಬಿಡಿಭಾಗಗಳು, ಆಯಿಲ್ ಡಬ್ಬಗಳು ಸೇರಿ ಹಲವು ವಸ್ತುಗಳ ಸುಟ್ಟುಹೋಗಿವೆ. ಮಿಲ್ಕ್ ಪಾರ್ಲರ್ ನಲ್ಲಿದ್ದ ಉತ್ಪನ್ನಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಗಿದೆ.