ಕೋಟ, ಮಾ.31 : ಕೃಷಿಕರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಕ್ಕುಂಜೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕಕ್ಕುಂಜೆ ಗ್ರಾಮದ ಕೃಷಿಕ ಸಂಜೀವ(75) ಎಂದು ಗುರುತಿಸಲಾಗಿದೆ
ಬೆನ್ನು ನೋವಿನಿಂದ ಬಳಲುತಿದ್ದ ಕೃಷಿಕ ಸಂಜೀವ ಜೀವನದಲ್ಲಿ ಜಿಗುಪ್ಸೆಗೊಂಡು ಮಾ.28 ಗುರುವಾರ ರಾತ್ರಿ ವೇಳೆ ಮನೆಯ ಟೆರೆಸಿನ ಕಬ್ಬಿಣದ ಶೀಟ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.