ಹೆನಾನ್, ಜ .13 : ಚೀನಾದ ಹೆನಾನ್ ಪ್ರಾಂತ್ಯದ ಪಿಂಗ್ಡಿಂಗ್ಶಾನ್ ನಗರದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟಗೊಂಡು ಕನಿಷ್ಠ 8 ಜನರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ಪಿಂ ಗ್ಡಿಂ ಗ್ಶಾನ್ ಟಿಯಾನನ್ ಕಲ್ಲಿದ್ದಲು ಗಣಿ ಕಂಪನಿಯಲ್ಲಿ ಶುಕ್ರವಾರ ಮಧ್ಯಾಹ್ನ 2:55ಕ್ಕೆ ಘಟನೆ ನಡೆದಿದೆ. ಈ ವೇಳೆ ಒಟ್ಟು 425 ಮಂದಿ ಇದ್ದರು. ಅವರಲ್ಲಿ 380 ಜನರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಉಳಿದ 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ತುರ್ತು ನಿರ್ವಹಣಾ ಏಜೆನ್ಸಿಯನ್ನು ಉಲ್ಲೇಖಿಸಿ ಕ್ಸಿನ್ಹುವಾ ವರದಿ ಮಾಡಿದೆ.