ಪುತ್ತೂರು, ಡಿ 14 : ಹೈದರಾಬಾದ್ ನಲ್ಲಿ ಕೆಲಸಕ್ಕಿದ್ದ ಯುವಕ ಊರಿಗೆ ಬಂದಿದ್ದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪ್ಯ ಬಳಿ ನಡೆದಿದೆ.
ಮೃತರನ್ನು ಕಲ್ಲರ್ಪೆ ನಿವಾಸಿ ಶ್ರೀಧರ್ ಆಚಾರ್ಯ ಸಂಪ್ಯ ಇವರ ಪುತ್ರ ಭರತ್ ಕಲ್ಲರ್ಪೆ(24) ಎಂದು ಗುರುತಿಸಲಾಗಿದೆ.
ಭರತ್ ಕಲ್ಲರ್ಪೆ ಅವರು ಮನೆಯ ಸಮೀಪದ ತಮ್ಮ ತೋಟದ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಭರತ್ ಕಲ್ಲರ್ಪೆ ಅವರು ಹೈದರಾಬಾದ್ ನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು ಎನ್ನಲಾಗಿದೆ.