ಮಂಗಳೂರು ಮಾ.8: ನಗರದ ಪುರಭವನದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಇದರ 24ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಮಾ.7 ಮಂಗಳವಾರದಂದು ಜರಗಿತು.ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ಇತರ ಗಣ್ಯರೊಂದಿಗೆ ಸೇರಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತಾಡಿ ಸರಕಾರಿ ಸೌಳಭ್ಯಗಳ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲು ಜಿಲ್ಲೆಯಲ್ಲಿರುವ ಎಲ್ಲಾ ಟೈಲರ್ಗಳು ತಪ್ಪದೇ ಇ-ಶ್ರಮ್ ಕಾರ್ಡ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.ಆಧುನಿಕ ಜಗತ್ತಿನ ಸ್ಪರ್ಧತ್ಮಕ ರೆಡಿಮೆಡ್ ಪ್ಯಾಶನ್ ಯುಗದ ನಡುವೆಯೂ ಟೈಲರ್ಸ್ ಗಳು ತಮ್ಮ ವೃತ್ತಿಯನ್ನು ನಡೆಸುತ್ತಾ ಬಂದಿದೆ.ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಮುಖಾಂತರ ಉತ್ತಮ ಸೇವೆಗಳು ಆಗಲಿ ಎಂದು ಶುಭಹಾರೈಸಿದರು.
ಬಳಿಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುರತ್ಕಲ್ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ ಮಾತಾಡಿ ಟೈಲರ್ ಗಳ ಬೇಡಿಕೆ ಹಾಗೂ ಅವರಿಗೆ ಸರ್ಕಾರದಿಂದ ನೆರವು ಒದಗಿಸುವ ಬಗ್ಗೆ ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಇದರ ನಿಕಟಪೂರ್ವ ಅಧ್ಯಕ್ಷರಾದ ಕೆ.ಎಸ್. ಆನಂದ್ ಅವರು ಮಾತಾಡಿ ಕೇಂದ್ರ ಸರ್ಕಾರ ಮುಂದಿನ 5 ವರ್ಷ ಜವಳಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದೆ. ಹಾಗೆನೇ ಜವಳಿ ನಿಗಮದ ಮೂಲಕ ಟೈಲರ್ಗಳ ಅಭಿವೃದ್ಧಿಗೂ ಸರ್ಕಾರ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಇದರ ರಾಜ್ಯ ಸಮಿತಿ ಅಧ್ಯಕ್ಷರು ನಾರಾಯಣ ಬಿ.ಎ.,ಅಸೋಸಿಯೇಶನ್ ನ ಜಿಲ್ಲಾ ಅಧ್ಯಕ್ಷರು ಜಯಂತ ಉರ್ಲಾಂಡಿ,ರಾಜ್ಯ ಉಪಾಧ್ಯಕ್ಷರಾದ ಸುರೇಶ್ ಸಾಲ್ಯಾನ್, ಜಿಲ್ಲಾ ಉಪಾಧ್ಯಕ್ಷರು ಕೇಶವ ಕೆ.,ಚಕ್ರೇಶ್ ಅಮೀನ್,ಸುಜಾತ ಭಂಡಾರಿ, ಜಿಲ್ಲಾ ಕೋಶಾಧಿಕಾರಿ ಈಶ್ವರ್ ಕುಲಾಲ್, ಜಿಲ್ಲಾ ಕಾರ್ಯದರ್ಶಿ ಲಿಗೋಧರ,ಮಂಗಳೂರು ಸಾಮರಸ್ಯದ ಅಧ್ಯಕ್ಷೆ ಮಂಜುಳಾ ನಾಯಕ್,ಮಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷೆ ವಿದ್ಯಾ ಶೆಟ್ಟಿ,ಮಂಗಳೂರು ಉಪಮೇಯರ್ ಪೂರ್ಣಿಮಾ, ಕಾರ್ಮಿಕ ಅಧಿಕಾರಿ (ವಿಭಾಗ-1) ಕಾವೇರಿ ಟಿ., ಕಾರ್ಮಿಕ ಅಧಿಕಾರಿ (ವಿಭಾಗ-2)ವಿಲ್ಮಾ ತಾವ್ರೋ,ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ,ಜಿಲ್ಲಾ ಮಹಿಳಾ ಬಿಜೆಪಿ ಪ್ರಧಾನ ಕಾ ಕಾರ್ಯದರ್ಶಿ ರೂಪ ಡಿ.ಬಂಗೇರ ಹಾಗೂ ಜಿಲ್ಲಾ ಮಹಿಳಾ ಬಿಜೆಪಿ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್,ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.