ಮಂಗಳೂರು,ಜು.28 : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿಆಟಿಡೊಂಜಿ ದಿನ ಕಾರ್ಯಕ್ರಮ ಕದ್ರಿ ಶ್ರೀ ಗೋರಕ್ಷಣಾಥ ಮಿನಿ ಹಾಲ್ ನಲ್ಲಿ ಜರಗಿತು.
ಈ ಕಾರ್ಯಕ್ರಮವನ್ನು ಶ್ರೀ ನವೀನ್ ಶೆಟ್ಟಿಅವರು ಇತರ ಗಣ್ಯರೊಂದಿಗೆ ಸೇರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ನಂತರ ಮಾತಾಡಿ ಹಿಂದಿನ ದಿನಗಳಲ್ಲಿ ಆಟಿ ದಿನಗಳು ಕಷ್ಟಕರವಾಗಿದ್ದವು. ಅಂದಿನ ದಿನಗಳನ್ನು ನೆನಪಿಸುವ ಸಲುವಾಗಿ ಈ ಆಟಿಡೊಂಜಿ ಕಾರ್ಯಕ್ರಮಗಳನ್ನು ಅಲ್ಲಲ್ಲಿಆಚರಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸನ್ಮಾನ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.ಸ್ವಾಗತ ಮತ್ತು ಪ್ರಸ್ತಾವಿಕ ಭಾಷಣವನ್ನು ಪ್ರಕಾಶ್ ಮೂಲತ್ವ ನೆರವೇರಿಸಿದರು. ಅತಿಥಿ ಗಳಿಗೆ ಶ್ರೀ ಲಕ್ಷ್ಮೀಶ ಕೋಟ್ಯಾನ್- ಶಾಲ್, ಶ್ರೀಮತಿ ಕಲ್ಲನಾ ಕೋಟ್ಯಾನ್- ಹೂವು, ಮಹೇಶ್ ಅಮೀನ್- ವೀಳ್ಯದೇಲೆ ಅಡಿಕೆ, ಶ್ರೀ ಪ್ರಶಾಂತ್ ರೈ- ಮುಟ್ಟಲೆ, ಶ್ರೀಮತಿ ಶೈನಿಕೈಲ್ – ಶ್ರೀಮತಿ ಜಯಶ್ರೀ -ಕುಡುಪು ಹಾಗೂ ಶ್ರೀ ರಾಮ್ ಪ್ರಸಾದ್- ಅಕ್ಕಿ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಮೂಲತ್ವ, ಶ್ರೀ ಲಕ್ಷ್ಮೀಶ ಕೋಟ್ಯಾನ್, ಶ್ರೀಮತಿ ಕಲ್ಲನಾ ಕೋಟ್ಯಾನ್, ಮಹೇಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.