ಚೆನ್ನೈ, ಡಿ. 27 : ರಸಗೊಬ್ಬರ ತಯಾರಿಕಾ ಘಟಕದ ಪೈಪ್ ನಲ್ಲಿ ಅಮೋನಿಯಾ ಸೋರಿಕೆಯಾದ ಪರಿಣಾಮ 6 ಜನರು ಅಸ್ವಸ್ಥಗೊಂಡ ಘಟನೆ ತಮಿಳುನಾಡು ಸಮೀಪದ ಎನ್ನೋ ರ್ ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ನ ಸಮುದ್ರ ಸಮೀಪ ಹಾದು ಹೋಗಿದ್ದ ಪೈಪ್ ನಿಂದ ಅಮೋನಿಯಾ ಗ್ಯಾಸ್ ಸೋರಿಕೆಯಾದ ಪರಿಣಾಮ 6 ಮಂದಿ ಅಸ್ವಸ್ಥಗೊಂ ಡಿದ್ದಾರೆ ಎಂದು ಹೇಳಲಾಗಿದೆ.ಅಸ್ವಸ್ಥಗೊಂಡ ಆರು ಮಂದಿ ಚಿಕಿತ್ಸೆ ಪಡೆದು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯರು ನೀಡಿದ ದೂರನ್ನು ಆಲಿಸಿದ ಬಳಿಕ ಅಮೋನಿಯಾ ಗ್ಯಾಸ್ ಪೈಪ್ ಲೈನ್ ನಲ್ಲಿ ಸೋರಿಕೆಯಾಗುತ್ತಿರುವುದನ್ನು ಪತ್ತೆ ಹಚ್ಚಿ, ಅದನ್ನು ಸರಿಪಡಿಸಲಾಗಿದೆ ಎಂದು ತಮಿಳುನಾಡು ಪರಿಸರ ನಿಯಂತ್ರಣ ಮಂಡಳಿ ಹೇಳಿದೆ.
ತುರ್ತು ಸೇವೆಗಾಗಿ ಸ್ಥಳದಲ್ಲಿ ಮೆಡಿಕಲ್ ಮತ್ತು ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಆವಡಿ ಪೊಲೀಸ್ ಕಮಿಷನರ್ ವಿಜಯ್ ಕುಮಾರ್ ಅವರು ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.