ಮಂಗಳೂರು, ಅ. 5: ಎಕ್ಕೂರಿನ ಇಂಡಿಯಾನಾ ಕನ್ವೆನ್ಯನ್ ಸೆಂಟರ್ ನ ಸಭಾಂಗಣದಲ್ಲಿ ಅಂತಾ ರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಡಿ ಇದರ 2024-25 ಲಯನ್ಸ್ ಜಿಲ್ಲಾ ಪದಗ್ರಹಣ ಸಮಾರಂಭ ‘ಕಾವೇರಿ’ ಕಾರ್ಯಕ್ರಮ ಶನಿವಾರ ಜರಗಿತು.
ಕಾರ್ಯಕ್ರಮವನ್ನು ಲಯನ್ಸ್ ಜಿ. ಮಂಗಳೂರು 317 ಡಿ ಇದರ ಗವರ್ನರ್ ಬಿ.ಎಂ. ಭಾರತಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿ ಸೇವೆಯಲ್ಲಿ ತೊಡಗಿಸುವುದು ಶ್ರೇಷ್ಠತೆಯಾಗಿದ್ದು, ಇದರಿಂದ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಂತರ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಫೌಂಡೇಶನ್ ಇದರ ಮಾಜಿ ಟ್ರಸ್ಟಿ ಹಾಗೂ ಅಂತಾರಾಷ್ಟ್ರೀಯ ಲಯನ್ಸ್ ಇದರ ಮಾಜಿ ನಿರ್ದೇಶಕಿ ಅರುಣಾ ಅಬೆಲ್ ಒಸ್ವಾಲ್ ಮಾತನಾಡಿ ನೂತನ ಗವರ್ನರ್ ಬಿ.ಎಂ. ಭಾರತಿ ಅವರು ಓರ್ವ ಮಹಿಳೆಯಾಗಿ ಮಹತ್ವದ ಜವಾಬ್ದಾರಿ ನಿಭಾಯಿವುದು ಸುಲಭದ ಕೆಲಸವಲ್ಲ. ಆದರೆ ಎಲ್ಲರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಅಂತಾರಾಷ್ಟ್ರೀಯ ಲಯನ್ಸ್ ಇದರ ಮಾಜಿ ನಿರ್ದೇಶಕ ಮತ್ತು ಪ್ರಸ್ತುತ ಎಲ್ಸಿಐಎಫ್ನ ಕ್ಷೇತ್ರ ನಾಯಕ ವಂಶಿಧರ್ ಬಾಬು, ಮಲ್ಟಿಪಲ್ 317 ಇದರ ಅಧ್ಯಕ್ಷ ಡಾ| ಕೃಷ್ಣಗೌಡ ಶುಭ ಹಾರೈಸಿದರು.
ಜಿ.317-ಡಿಯ ನಿಕಟಪೂರ್ವ ಗವರ್ನರ್ ಡಾ| ಮೆಲ್ವಿನ್ ಡಿ’ಸೋಜಾ ತಂಡವನ್ನು ಪರಿಚಯಿಸಿದರು. ದ್ವಿತೀಯ ಉಪಗವರ್ನರ್ ಎಚ್. ಎಂ. ತಾರಾನಾಥ್ ಶುಭಾಶಂಸನೆಗೈದರು.
ಎಲ್ಸಿಐಎಫ್ಗೆ ಸದಸ್ಯರ ಎಂಜೆಎಫ್ ಮೂಲಕ ಸಂಗ್ರಹಿಸಿದ 50 ಲಕ್ಷ ರೂ. ಮೊತ್ತದ ದೇಣಿಗೆಯನ್ನು ಸಂಯೋಜಕ ಚಂದ್ರಹಾಸ ರೈ, ಮಲ್ಟಿಪಲ್ ಎಲ್ಸಿಐಎಫ್ ಸಂಯೋಜಕ ಸಂಜಿತ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್, ಖಜಾಂಚಿ ಶಶಿಧರ್ ಮಾರ್ಲ, ಸಂಪುಟ ಸಂಯೋಜಕ ಒಸ್ವಾಲ್ಡ್ ಡಿ’ಸೋಜಾ, ಗವರ್ನರ್ ಸಂಯೋಜಕಿ ಉಮಾ ಹೆಗ್ಡೆ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಕೈಪಿಡಿ ಕಾವೇರಿ ಇದರ ಸಂಪಾದಕಿ ಆಶಾ ಚಂದ್ರಮೋಹನ್ ಉಪಸ್ಥಿತರಿದ್ದರು.
ಪದಗ್ರಹಣ ಸಮಿತಿ ಅಧ್ಯಕ್ಷರಾದ ಮನೋರಂಜನ್ ಕರಾಯ್ ಸ್ವಾಗತಿಸಿದರು. ಪದಗ್ರಹಣ ಸಮಿತಿ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ವಂದಿಸಿದರು. ಪ್ರಶಾಂತ್ ಶೆಟ್ಟಿ , ಅಹಿಮ ಶೆಟ್ಟಿ ನಿರೂಪಿಸಿದರು.