ಗಣೇಶಪುರ, ಎ, 21 : ಶ್ರೀ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಕಲಶ, ರಥ ಸಮರ್ಪಣೆ, ನಾಗಮಂಡಲ ಸೇವೆ ಪ್ರಯುಕ್ತ ಹೊರೆಕಾಣಿಕೆ ಶೋಭಾಯಾತ್ರೆಗೆ ಎ, 18, ಶುಕ್ರವಾರ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತಿಸರ ಐ. ರಮಾನಂದ ಭಟ್ ಪ್ರಾರ್ಥಿಸಿ ಚಾಲನೆ ನೀಡಿದರು.
ಶೋಭಾಯಾತ್ರೆಯನ್ನು ಒಡಿಯೂರು ಶ್ರೀ ಗುರುದೇವಾ ನಂದ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಶಾಸಕ ಡಾ। ಭರತ್ ಶೆಟ್ಟಿ ವೈ. ಅವರು ಮಾತನಾಡಿ, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಬ್ರಹ್ಮಕಲಶ ಆಗುತ್ತಿದ್ದು, ಈ ಬ್ರಹ್ಮಕಲಶ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಾಂಧವರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಮಾತ್ರ ನಾಡಿ, ಹೊರೆಕಾಣಿಕೆಯನ್ನು ಭಕ್ತಿಯಿಂದ ಕಾಲ್ನಡಿಗೆ ಮೂಲಕ ಕೊಂಡೊಯ್ದು ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇವೆ.ಪ್ರವೀಣ್ ಶೆಟ್ಟಿ ಸುಧಾಮ ಶೆಟ್ಟಿ ನೇತೃತ್ವದಲ್ಲಿ ಸಮಿತಿ ಸದಸ್ಯರು ಹೊರೆಕಾಣಿಕೆ ಹೊಣೆ ನಿರ್ವಹಿಸಿದ್ದಾರೆ ಎಂದರು.
ಹಿರಿಯರಾದ ಮಂಜುಕಾವ ಕಾವರ ಮನೆ ಪಣಂಬೂರು, ನವೀನ್ ಕುಮಾ ರೈ, ಅನಿಲ್ ಶೆಟ್ಟಿ, ತಿಲಕ್‌ರಾಜ್ ಕೃಷ್ಣಾಪುರ, ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ, ಉದ್ಯಮಿ ಜೆ.ಡಿ. ವೀರಪ್ಪ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯಾದವ ಕೋಟ್ಯಾನ್, ಕಾರ್ಯಾಧ್ಯಕ್ಷ ಪ್ರಶಾಂತ್ ಮೂಡಾಯಿಕೋಡಿ, ಪ್ರ.ಕಾ. ಸದಾಶಿವ ಐತಾಳ್, ಪುಂಡಲೀಕ ಹೊಸಬೆಟ್ಟು ಕಾರ್ಯ ನಿರ್ವಹಣಾಧಿಕಾರಿ ನವೀನ್, ಕುಮಾರ್, ವ್ಯವಸ್ಥಾಪನ ಸಮಿತಿ, ಬ್ರಹ್ಮಕಲಶ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.
ಹೊರೆಕಾಣಿಕೆ ಶೋಭಾಯಾತ್ರೆಯು ಭಜನೆ, ಸ್ತಬ್ಧಚಿತ್ರ, ವಿವಿಧ ಗೊಂಬೆ, ವಾದ್ಯಗಳೊಂದಿಗೆ ಕಾಟಿಪಳ್ಳ ಮಾರ್ಗವಾಗಿ ಶ್ರೀ ಕ್ಷೇತ್ರ ಗಣೇಶಪುರ ತಲುಪಿತು. ತೋರಣ ಮುಹೂರ್ತವನ್ನು ಶರವು ರಾಘವೇಂದ್ರ ಶಾಸ್ತ್ರಿ, ವಿಶ್ವೇಶ್ವರ ಬದವಿದೆ ನೆರವೇರಿಸಿದರು.ಉಗ್ರಾಣ ಮುಹೂರ್ತವನ್ನು ಕೆ.ಸಿ. ನಾಗೇಂದ್ರ ಭಾರ ದ್ವಾಜ್, ವೇ। ಮೂ। ರಾಘವೇಂದ್ರ ಉಪಾ ಧ್ಯಾಯ, ಮಾಧವ ಭಟ್ ನೆರವೇರಿಸಿದರು.