ಮಂಗಳೂರು, ಎ. 26: ನಗರದ 32 ಮಂದಿ ತಜ್ಞ ವೈದ್ಯರ ತಂಡವು ಸುಸಜ್ಜಿತ,ಅತ್ಯಾಧುನಿಕ ಎಂಆರ್ಐ ಸೌಲಭ್ಯದಿಂದ ಕೂಡಿದ ಎಕ್ಸೆಲ್ ಎಂ ಆರ್ ಐ ಡಯಾಗ್ನೊಸ್ಟಿಕ್ ಕೇಂದ್ರವನ್ನು ನಗರದಲ್ಲಿ ಆರಂಭಿಸು ತ್ತಿದ್ದು, ಎ. 27ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ನಡೆಯಲಿದೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾ. ಜೋ ವರ್ಗೀಸ್ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ| ಜೋ ವರ್ಗೀಸ್ ಅವರು, ಎಂ ಆರ್ ಐ ಸ್ಕ್ಯಾನ್ ಮೂಲಕ ದೇಹದ ಯಾವ ಮೂಲೆಯಲ್ಲೂ ಇರುವಂತಹ ಅತೀಸೂಕ್ಷ್ಮ ತೊಂದರೆಗಳನ್ನೂ ವೀಕ್ಷಿಸಿ, ಪರಿಹರ ಕಂಡುಕೊಳ್ಳಲು ಸಾಧ್ಯ. ಅಂತಹ ಅತ್ಯಾಧುನಿಕ ಎಂ ಆರ್ ಐ ಮೆಷಿನ್ ಗಳನ್ನು ಈ ಎಕ್ಸೆಲ್ ಎಂ ಆರ್ ಐ ಕೇಂದ್ರ ದಲ್ಲಿ ಅಳವಡಿಸಲಾಗಿದೆ ಎಂದವರು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಸ್ಪೀಕರ್ ಯು.ಟಿ. ಖಾದರ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್. ಆರ್. ತಿಮ್ಮಯ್ಯ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ| ಆಲಂ ನವಾಝ್, ಡಾ| ಹೆರಾಲ್ಡ್ ಮಸ್ಕರೇನಸ್, ಡಾ| ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.