ಮಂಗಳೂರು, ಎ.27: ನಗರದ ಎಸ್ಸಿಎಸ್ ಹಾಸ್ಪಿಟಲ್ ಪಕ್ಕದಲ್ಲಿ ಎ ಯುನಿಟ್ ಆಫ್ ಡಾಕ್ಟರ್ಸ್ ಎಂ ಆರ್ ಐ ಪ್ರೈವೇಟ್ ಲಿಮಿಟೆಡ್ ನ ಸುಸಜ್ಜಿತ,ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಎಕ್ಸೆಲ್ ಎಂ ಆರ್ ಐ ಡಯಾಗ್ನೋಸ್ಟಿಕ್ಸ್ ಕೇಂದ್ರವು ಭಾನುವಾರ ಉದ್ಘಾಟನೆಗೊಂಡಿತು.
ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ನೂತನ ಡಯಾಗ್ನೋಸ್ಟಿಕ್ಸ್ ಕೇಂದ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ.ವೇದವ್ಯಾಸ ಕಾಮತ್, ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮುಖ್ಯ ಅತಿಥಿಯಾಗಿದ್ದರು.
ಸಮಾರಂಭದಲ್ಲಿ ಕೇಂದ್ರದ ಸ್ಥಾಪಕ ನಿರ್ದೇಶಕರಾದ ಡಾ.ಆಲಮ್ ನವಾಝ್ ಮತ್ತು ಡಾ.ವರ್ಗೀಸ್ ಜೋ, ಡಾ.ಹೆರಾಲ್ಡ್ ಮಸ್ಕರೇನಸ್, ತಜ್ಞ ವೈದ್ಯರಾದ ಡಾ.ಜಯಕೃಷ್ಣನ್, ಡಾ.ಕೆ.ಆರ್.ಕಾಮತ್, ಡಾ.ಶೋಭಿತಾ, ಡಾ.ಮುನೀರ್ ಅಹ್ಮದ್, ಡಾ.ರಿಝ್ವಾನ್ ಅಹ್ಮದ್, ಡಾ.ಹಸೀಬ್ ಅಮನ್, ಡಾ.ಮುರಳೀಧರ್ ಎಡಿಯಾಲ್, ಡಾ.ಆರ್.ಎಲ್.ಕಾಮತ್, ಡಾ.ಭಾಸ್ಕರ ಶೆಟ್ಟಿ, ಡಾ.ದಿವಾಕರ, ಡಾ.ಜೀವರಾಜ ಸೊರಕೆ, ಡಾ.ತಾಜುದ್ದೀನ್, ಡಾ.ಥಾಮಸ್, ಡಾ.ಸಲೀಮ್ ಉಪಸ್ಥಿತರಿದ್ದರು.