ಮಂಗಳೂರು, ಮೇ. 05 : ಭಾರ್ಗವಿ ಬಿಲ್ಡರ್ ವತಿಯಿಂದ ಕೊಟ್ಟಾರದ ಮಾಲೆಮಾರ್ ಬಳಿ ನಿರ್ಮಾಣಗೊಂಡಿರುವ ವಸತಿ ಸಮುಚ್ಚಯ ‘ಕೈಲಾಶ್’ ಎ.30, ಬುಧವಾರ ಉದ್ಘಾಟನೆಗೊಂಡಿತು.
ಮಾರೂರು ಅಲ್ಯುಮಿನಿಯಂ ಸಂಸ್ಥೆಯ ಶಶಿಧರ ಪೈ ಮಾರೂರು ಅವರು ವಸತಿ ಸಮುಚ್ಚಯದ ಲಾಬಿ ಉದ್ಘಾಟಿಸಿದರು. ಸಿಎ ಸುಂದರ ಹೆಗ್ಡೆ ಅವರು ಜಿಮ್ಮೇಶಿಯಂಗೆ ಚಾಲನೆ ನೀಡಿದರು. ನಾಯಕ್ ಆ್ಯಂಡ್ ಪೈ ಅಸೋಸಿಯೇಟ್ನ ಆರ್ಕಿಟೆಕ್ಟ್ ಸುರೇಶ್ ಪೈ ಅವರು ಒಳಾಂಗಣಕ್ರೀಡಾ ಕೇಂದ್ರವನ್ನು ಹಾಗೂ ಕೈಲಾಶ್ ವಸತಿ ಸಮುಚ್ಚಯದ ರಾಯಭಾರಿ ಅರವಿಂದ ಬೋಳಾರ್ ಅವರು ಕೈಲಾಶ್ ಮಕ್ಕಳ ಆಟದ ಪ್ರದೇಶವನ್ನು ಉದ್ಘಾಟಿಸಿದರು.
‘ಕೈಲಾಶ್’ನ ಫ್ಲ್ಯಾಟ್ ಮಾಲಕರಾದ ಗುರುರಾಜ್ ಉಡುಪ ಹಾಗೂ ವನಿತಾ ಉಡುಪ ದೀಪಪ್ರಜ್ವಲನೆ ಮಾಡಿದರು. ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ಶುಭಹಾರೈಸಿದರು. ಪ್ರಕಾಶ್ ಬೀಡಿ ಮಾಲಕರಾದ ಆನಂದ್ ಪ್ರಭು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೆಜರ್ ಸಚ್ಚಿದಾನಂದ ಸ್ವರೂಪ್, ರಮಾ ಕಾಮತ್ ಆ್ಯಂಡ್ ಕೋ. ದ ಮಾಲಕ ಶೋಮಿತ್ ಕಾಮತ್, ದೇವಿದಯಾಲ್ ಕನ್‌ಸ್ಟ್ರಕ್ಷನ್ ಮಾಲಕ ಜಗದೀಶ್ ಶೆಟ್ಟಿ, ಸಿಎ ಎ.ಆರ್.ಹೆಗ್ಡೆ ಸುಬ್ರಹ್ಮಣ್ಯ ಭಟ್ ಭಾರ್ಗವಿ ಬಿಲ್ಡರ್ನ ಮಾಲಕರಾದ ಭಾಸ್ಕರ್ ಗಡಿಯಾರ್, ಭಾರ್ಗವಿ ಗಡಿಯಾರ್, ಸಹ ಪ್ರವರ್ತಕರಾದ ಶ್ರೀವತ್ಸ ಕೊಜಪಾಡಿ, ಪ್ರಾಜೆಕ್ಟ್ ಮುಖ್ಯಸ್ಥ ರಾದಮಂಗಳ ದೀಪ್ ಎ.ಆರ್.ಹಾಗೂ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಜೆಕ್ಟ್ ಮುಖ್ಯಸ್ಥ ಗುರುದತ್ತ ಶೆಣೈ ಪ್ರಸ್ತಾವಿಸಿದರು. ಡಾ।ಪ್ರಿಯಾ ಹರೀಶ್ ನಿರೂಪಿಸಿದರು. ಈ ಸಮುಚ್ಚಯದಲ್ಲಿ 2 ಬಿಎಚ್ ಕೆ ಫ್ಯಾಟ್ ಗೆ 77 ಲ.ರೂ., 3 ಬಿಎಚ್ ಕೆ ಫ್ಯಾಟ್ ಗೆ 1. 30 ಕೋ.ರೂ., 4 ಬಿಎಚ್ ಕೆ ಡ್ಯುಪ್ಲೆಕ್ಸ್ ಫ್ಯಾಟ್ ಗೆ 1.80 ಕೋ.ರೂ. ದರವಿದೆ, ಈ ದರ ಕೆಲವು ಫ್ಯಾಟ್ ಗಳಿಗೆ ಕೆಲವೇ ದಿನಗಳಿಗೆ ಸೀಮಿತ. ಭಾರ್ಗವಿ ಬಿಲ್ಡರ್ಸ್ ಈಗಾಗಲೇ 5 ವಸತಿ ಸಮುಚ್ಚಯ ಹಾಗೂ 2 ವಾಣಿಜ್ಯ ಸಮುಚ್ಚಯವನ್ನು ಪೂರ್ಣಗೊಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು www.bhargavibuilders.com ಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.