ಚೆನ್ನೈ, ಆ. 03 : ತಮಿಳು ಚಿತ್ರರಂಗದ ಹಿರಿಯ ಹಾಸ್ಯ ನಟ ಮದನ್ ಬಾಬ್ (71) ಅವರು ಶನಿವಾರ ಅನಾರೋಗ್ಯದಿಂದ ನಿಧನರಾದರು ಎಂದು ವರದಿಯಾಗಿದೆ.
ತಮಿಳು ಚಿತ್ರರಂಗದಲ್ಲಿ ಖ್ಯಾತರಾಗಿದ್ದ ಮದನ್ ಬಾಬ್ ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ.
ಮದನ್ ಬಾಬ್ ಅವರ ಮೂಲ ಹೆಸರು ಎಸ್. ಕೃಷ್ಣಮೂರ್ತಿ. ಚಿತ್ರರಂಗದಲ್ಲಿ ಅವರು ಮದನ್ ಬಾಬ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್, ಸೂರ್ಯ, ವಿಜಯ್ ಮುಂತಾದ ಸ್ಟಾರ್ ಕಲಾವಿದರ ಸಿಮಾಗಳಲ್ಲಿ ಮದನ್ ಬಾಬ್ ನಟಿಸಿದ್ದರು.