ಮಂಗಳೂರು, ಸೆ. 14 : ಎಂಸಿಸಿ ಬ್ಯಾಂಕ್ ತನ್ನ 12 ನೇ ಎಟಿಎಂ ಅನ್ನು ಕಿನ್ನಿಗೋಳಿ ಶಾಖೆಯಲ್ಲಿ ಸೆ.13, ರ ಶನಿವಾರ ಉದ್ಘಾಟನೆಗೊಂಡಿತು. ಎಂ ಆರ್ ಪಿ ಎಲ್ ನ ಕಾರ್ಪೊರೇಟ್ ಬ್ರ್ಯಾಂಕಡಿಂಗ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ ಇದರ ಚೀಫ್ ಜನರಲ್ ಮ್ಯಾನೇಜರ್ ಡಾ| ರುಡಾಲ್ಫ್ ಜೋಯರ್ ನೊರೊನ್ಹಾ ಅವರು ಉದ್ಘಾಟಿಸಿದರು. ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್ ನ ಧರ್ಮಗುರು ರೆವರೆಂಡ್ ಫಾದರ್ ಜೋಕಿಮ್ ಫೆರ್ನಾಂಡಿಸ್ ಅವರು ಎಟಿಎಂ ಅನ್ನು ಆಶೀರ್ವದಿಸಿದರು. ಹೊಸದಾಗಿ ಉದ್ಘಾಟನೆಗೊಂಡ ಎಟಿಎಂ ನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ಬಳ್ಕುಂಜೆಯ ಸೇಂಟ್ ಪೌಲ್ಸ್ ಚರ್ಚ್ ನ ಧರ್ಮಗುರು ರೆವರೆಂಡ್ ಫಾದರ್ ಪೌಲ್ ಸಿಕ್ವೇರಾ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕಿನ್ನಿಗೋಳಿ ಶಾಖೆಯ ಗ್ರಾಹಕರು ಕಳೆದ 28 ವರ್ಷಗಳಲ್ಲಿ ಶಾಖೆಯ ಬೆಳವಣಿಗೆಗೆ ಬೆಂಬಲ ನೀಡಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಬ್ಯಾಂಕಿನ ಗಮನಾರ್ಹ ಪ್ರಗತಿಯಾಗಿದ್ದು, ಈ ಅವಧಿಯಲ್ಲಿ ಬ್ಯಾಂಕಿನ ವಹಿವಾಟು ₹ 500 ಕೋಟಿಯಿಂದ ₹ 1300 ಕೋಟಿಗೆ ಏರಿದೆ. ಶಿಕ್ಷಣ, ಕ್ರೀಡೆ ಮತ್ತು ಕಲೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಗೌರವಿಸುವ ಸಂಪ್ರದಾಯವನ್ನು ಎಂಸಿಸಿ ಬ್ಯಾಂಕ್ ಆರಂಭಿಸಿದೆ. ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿ, ಗ್ರಾಹಕರು ಮತ್ತು ಸಮುದಾಯದ ಸದಸ್ಯರ ಅಚಲ ಬೆಂಬಲ ಬ್ಯಾಂಕ್ ಬೆಳವಣಿಗೆಗೆ ಮುಖ್ಯ ಪಾತ್ರವಾಗಿದೆ ಎಂದರು.
ರೆವರೆಂಡ್ ಫಾದರ್ ಜೋಕಿಮ್ ಫೆರ್ನಾಂಡಿಸ್ ಮತನಾಡಿ, 1996ರಿಂದ ಎಂಸಿಸಿ ಬ್ಯಾಂಕಿನ ಗ್ರಾಹಕರಾಗಿರುವ ಅವರು, ಶಾಖೆಯ ಅತ್ಯುತ್ತಮ ಗ್ರಾಹಕ ಸೇವೆಯನ್ನು ಶ್ಲಾಘಿಸಿದರು. ಎಂಸಿಸಿ ಬ್ಯಾಂಕ್ ಕರ್ನಾಟಕದಾದ್ಯಂತ ಮತ್ತು ಅಂತಿಮವಾಗಿ ದೇಶಾದ್ಯಂತ ವಿಸ್ತರಿಸುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಡಾ| ರುಡಾಲ್ಫ್ ಜೋಯರ್ ನೊರೊನ್ಹಾ, ಅವರು, ಇಂದಿನ ಅತ್ಯಂತ ಸ್ಪರ್ಧಾತ್ಮಕ ವಾತಾವರಣದಲ್ಲಿ, ಬೆಳವಣಿಗೆ ಸವಾಲಿನದ್ದಾಗಿದ್ದರೂ ಎಂಸಿಸಿ ಬ್ಯಾಂಕಿನ ಬಲವಾದ ಹಣಕಾಸು ನಿರ್ವಹಣೆಯ ದೃಷ್ಟಿಕೋನ ಮತ್ತು ಆ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಅದರ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಸಮರ್ಪಣೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಿಎ ಪೂರ್ಣಗೊಳಿಸಿದ ನಿಕಿತಾ ರಿಯೋನಾ ಡಿ’ಸೋಜಾ, ಡಾ| ಮೆಲಿಶಾ ರೊಡ್ರಿಗಸ್ (ನೀಟ್ ಪಿಜಿ 163ನೇ ರ್ಯಾಂಕ್) ಮತ್ತು ಶ್ರೀ ಶೋನ್ ಸಿಕ್ವೇರಾ (ಕರಾಟೆ ಚಾಂಪಿಯನ್) ಅವರನ್ನು ಅವರ ಅತ್ಯುತ್ತಮ ಸಾಧನೆಗಳಿಗಾಗಿ ಸನ್ಮಾನಿಸಲಾಯಿತು.
ಆಚರಣೆಯ ಭಾಗವಾಗಿ, ಸೆಪ್ಟೆಂಬರ್ 13 ರಂದು ಹುಟ್ಟುಹಬ್ಬ ಆಚರಿಸಿಕೊಂಡ ಗ್ರಾಹಕರನ್ನು ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಸನ್ಮಾನಿಸಲಾಯಿತು ಮತ್ತು ಸೆಪ್ಟೆಂಬರ್ 19ರಂದು ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಡೇನಿಯಲ್ ಡಿಸೋಜಾ ಅವರನ್ನು ಸಹ ಸನ್ಮಾನಿಸಲಾಯಿತು.
ಸಮಾರಂಭವನ್ನು ಮಾಜಿ ಎನ್ಅರ್ಐ, ಕಥೋಲಿಕ್ ಸಭಾ ಕಿನ್ನಿಗೋಳಿಯ ಕಾರ್ಯದರ್ಶಿ ಹಾಗೂ ವಿನ್ಸೆಂಟ್ ಡಿ ಪಾಲ್ ಲೆಕ್ಕಪರಿಶೋಧಕ ಶ್ರೀ ಜೆರೋಮ್ ಡಿ’ಅಲ್ಮೇಡಾ ಮತ್ತು ಕಿನ್ನಿಗೋಳಿಯ ಮೆಸ್ಸರ್ಸ್ ಚೈತನ್ಯ ಮೆಡಿಕಲ್ಸ್ ಮತ್ತು ಸಾಗರಿಕಾ ಅರೇಂಜರ್ಸ್ನ ಮಾಲೀಕ ಶ್ರೀ ಧನಂಜಯ ಪಿ. ಶೆಟ್ಟಿಗಾರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೇಜಸ್ ಮತ್ತು ಶಾಖಾ ವ್ಯವಸ್ಥಾಪಕ ಶ್ರೀ ಅನಿಲ್ ಆರ್. ಡಿ’ಸೋಜಾ, ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಮೆಲ್ವಿನ್ ವಾಸ್, ಡೆವಿಡ್ ಡಿಸೋಜ, ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಮೆನೆಜಸ್, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಸದಸ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿದ್ದರು.
ನಿರ್ದೇಶಕಿ ಡಾ| ಫ್ರೀಡಾ ಫ್ಲಾವಿಯಾ ಡಿ’ಸೋಜಾ ಸ್ವಾಗತಿಸಿದರು. ಲವಿಟಾ ಡಿಸೋಜ, ಮುಲ್ಕಿ ನಿರೂಪಿಸಿ ವಂದಿಸಿದರು.