ಬೆಳ್ತಂಗಡಿ, ಸೆ. 23 : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ವತಿಯಿಂದ ಸೆ. 14ರಿಂದ ಮೊದಲ್ಗೊಂಡು ಸೆ 21ರಂದು ಸಮಾಪನಗೊಂಡ 27ನೇ ವರ್ಷದ ಭಜನ ಕಮಟದ ಪ್ರಯುಕ್ತ ಅಮೃತ ವರ್ಷಿಣಿ ಸಭಾಭವನದಲ್ಲಿ ನಡೆದ ಸಮಾರೋಪ ಸಮಾರಂಭ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಓಂಕಾರದಿಂದ ಸೃಷ್ಟಿತ ಭಜನೆಯು ಬದುಕಿನ ಸಾಮರಸ್ಯಕ್ಕೆ ಪ್ರೇರಣೆಯಾಗಿದೆ.ಭಗವಂತನ ಅನುಸಂಧಾನಕ್ಕೆ ಭಜನೆ ಪ್ರೇರಣೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ವೀರೇಂದ್ರ ಹೆಗ್ಗಡೆ
ಮಾತನಾಡಿ, ಕಳೆದ 85 ವರ್ಷದಿಂದ ಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುತ್ತಿದೆ. ಕ್ಷೇತ್ರದಲ್ಲಿ ಯಾವ ಜಾತಿ, ಮತ ಕಟ್ಟುಪಾಡಿನ ನಿರ್ಬಂಧವಿಲ್ಲ ಭಜನೆಯೆಂಬ ಭಕ್ತಿಯ ಶಕ್ತಿಯಲ್ಲಿ ಸಾಮರಸ್ಯ ಅಡಗಿದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಮಾಣಿಲ – ಮೋಹನದಾಸ ಶ್ರೀಧಾಮದ ಶ್ರೀ ಪರಮಹಂಸ ಸ್ವಾಮೀಜಿ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ಉಪಾಧ್ಯಕ್ಷೆ ಡಾ| ಹೇಮಾವತಿ ವೀ. ಹೆಗ್ಗಡೆ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಡಿ. ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಉಪಾಧ್ಯಕ್ಷ ರಾಜೇಂದ್ರರು ಉಪಸ್ಥಿತರಿದ್ದರು.
ಎ.ವಿ. ಶೆಟ್ಟಿವರದಿ ವಾಚಿಸಿ, ಸುಬ್ರಹ್ಮಣ್ಯ ಪ್ರಸಾದ್ ಪ್ರಸ್ತಾವಿಸಿದರು. ಭಜನ ಪರಿಷತ್ ಅಧ್ಯಕ್ಷಚಂದ್ರಶೇಖರ ಸಾಲ್ಯಾನ್ ವಂದಿಸಿದರು. ಶ್ರೀನಿವಾಸ್ ರಾವ್ ನಿರೂಪಿಸಿದರು.











