ಮಂಗಳೂರು, ಅ.09 : ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಅ. 11 ರಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 72 ನೇ ಅವತರಣೋತ್ಸವ ಅಮೃತೋತ್ಸವ 2025ನ್ನು ಶದ್ಧಾ ಭಕ್ತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್ ಅವರು ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8.45ಕ್ಕೆ ಸ್ವಾಮಿನಿ ಮಂಗಳಾಮೃತ ಪ್ರಾಣ
ಅವರು ಅಮೃತ ಜ್ಯೋತಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಶ್ರೀ ಗುರು ಪಾದುಕಾ ಪೂಜೆ, ಸತ್ಸಂಗ, ಭಜನೆ, ಧ್ಯಾನ, 11ರಿಂದ 12ರ ವರೆಗೆ ಸಭಾ ಕಾರ್ಯಕ್ರಮ ಇರುತ್ತದೆ. ವಿಧಾನ ಸಭಾಧ್ಯಕ್ಷರಾದ ಯು.ಟಿ, ಖಾದರ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂ
ರಾವ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ, ಅಮೃತ ವಿಶ್ವವಿದ್ಯಾ ಪೀಠಂ ಕೊಚ್ಚಿ ಕ್ಯಾಂಪಸ್ ನ ಡೀನ್, ನಿರ್ದೇಶಕ ಡಾ| ಯು. ಕೃಷ್ಣ ಕುಮಾರ್ ಭಾಗವಹಿಸಲಿದ್ದಾರೆ .ಶಾಸಕರಾದ, ವೇದವ್ಯಾಸ ಕಾಮತ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು.
ಮಧಾಹ್ನ 12 ಗಂಟೆಗೆ ರವಿ ಅಲೆವೂರಾಯ ಮತ್ತು ತಂಡದವರಿಂದ ಯಕ್ಷಗಾನ ಬಯಲಾಟ ಅಮೃತಮಯಿ ಮಹಾತ್ಮೆ 1.30ಕ್ಕೆ ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ, ಸಂಜೆ 4.30ಕ್ಕೆ ಬಾಲಕೃಷ್ಣ ಭಟ್ ಮತ್ತು ಅವರ ತಂಡದಿಂದ ಶ್ರೀ ಚಕ್ರಪೂಜೆ ತಂತ್ರ ರತ್ನ ಬ್ರಹ್ಮಶ್ರೀ ಕಾರ್ಯಕ್ರಮ ಜರಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಡಾ| ವಸಂತಕುಮಾರ್ ಪೆರ್ಲ, ಖಜಾಂಚಿ ಯು. ರಾಮನಾಥ್ ನಾಯಕ, ಸದಸ್ಯರಾದ ಡಾ|ದೇವದಾಸಪುತ್ರನ್ ಮತ್ತಿತ್ತರರು ಉಪಸ್ಥಿತರಿದ್ದರು.