ಮಂಗಳೂರು, ಅ. 19 : ಕೇರಳ ಮತ್ತು ಕರ್ನಾಟಕದಲ್ಲಿ ಕಾರ್ಯಚರಿಸುತ್ತಿರುವ “ಬಿಂದು” ಜ್ಯುವೆಲ್ಲರಿಯ ಮಂಗಳೂರು ಶೋರೂಂ ಬೆಂದೂರ್ ನ ಎಸ್ ಸಿಎಸ್ ಆಸ್ಪತ್ರೆ ಸಮೀಪ ಭಾನುವಾರ ಶುಭಾರಂಭಗೊಂಡಿತು. ಚಲಚಿತ್ರ ನಟಿ ಸ್ನೇಹ ಪ್ರಸನ್ನ ಅವರು ಬಿಂದು ಜ್ಯುವೆಲ್ಲರಿಯ ಮಳಿಗೆಯನ್ನು ಉದ್ಘಾಟಿಸಿದರು.
ಬಳಿಕ ಸ್ನೇಹ ಪ್ರಸನ್ನ ಅವರು ಮಾತನಾಡಿ, ತಾನು ಮಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು ಖುಷಿಯಾಗಿದೆ.”ಬಿಂದು” ಜುವೆಲರಿ ತನ್ನಉತ್ತಮ ಗುಣಮಟ್ಟ ಮತ್ತು ಬದ್ಧತೆಯ ಸೇವೆಯಿಂದ ಅಭಿವೃದ್ಧಿಯಾಗಿದೆ ಎಂದರು..
ಈ ಸಂದರ್ಭದಲ್ಲಿ ಅವರು ಸಂಸ್ಥೆಯ ಸಿಎಸ್ ಆರ್ ಚಟುವಟಿಕೆಯ ಭಾಗವಾದ ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ‘ಸ್ವರ್ಣ ಬಿಂದು‘ ಯೋಜನೆಗೆ ಚಾಲನೆ ನೀಡಿದರು. ‘ಮೈ ಬ್ಲೂ ಡೈಮಂಡ್‘ ವಜ್ರಾಭರಣವನ್ನು ಸ್ನೇಹ ಪ್ರಸನ್ನ ಬಿಡುಗಡೆಗೊಳಿಸಿದರು.
ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಯೋಗೇಶಾನಂದಜೀ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ ವೈ., ನಟರಾದ ಶೋಧನ್ ಶೆಟ್ಟಿ, ಅಮೀಶ್, ಕರ್ನಾಟಕ ರಾಜ್ಯ ಅಲೈಡ್ ಮತ್ತು ಹಲ್ತ್ ಕೇರ್ ಕೌನ್ಸಿಲ್ ಚೇರ್ಮನ್ ಡಾ| ಯು.ಟಿ. ಇಫ್ತಿಕರ್ ಅಲಿ ಫರೀದ್, ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಅಧ್ಯಕ್ಷ ಪಿ.ಬಿ. ಅಹಮ್ಮದ್ ಮುದಸ್ಸರ್, ಬಿಂದು ಜುವೆಲರಿ ಮಾಲಕರಾದ ಅಭಿಲಾಷ್ ಕೆ.ವಿ. ಮತ್ತು ಡಾ| ಅಜಿತೇಶ್ ಕೆ.ವಿ., ಮಾಲಕರ ತಾಯಿ ಶೋಭನಾ ಉಪಸ್ಥಿತರಿದ್ದರು. ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.