ಮಂಗಳೂರು,ಡಿ.04 : ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್‌ರಿಗೆ ಸಹಕಾರಿ ರಂಗದ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಡಿ.6 ರಂದು ಅಪರಾಹ್ನ 3 ಗಂಟೆಯಿಂದ ಪ್ರಶಸ್ತಿ ಪುರಸ್ಕೃತಗೊಂಡ ಅವರಿಗೆ ನಾಗರಿಕ ಪೌರ ಸನ್ಮಾನದ ಭಾಸ್ಕರಾಭಿನಂದನೆ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಸಮಿತಿಯ ಸಂಚಾಲಕಾದ ಚಿತ್ತರಂಜನ್ ಬೋಳಾರ್ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 3 ಗಂಟೆಯಿಂದ ಚಲನಚಿತ್ರ ನಟ ಮಂಜು ರೈ ಮುಳೂರು ಅವರ ನಿರೂಪಣೆಯೊಂದಿಗೆ ಜಿಲ್ಲೆಯ ಕಲಾವಿರದರಿಂದ ಸಂಗೀತ, ಹಾಸ್ಯ, ಲಹರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಜೆ 3.45ಕ್ಕೆ ಸನ್ಮಾನ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿಸೊಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮಾಜಿ ಸಚಿವರು ಹಾಗೂ ಶಾಸಕರಾದ ಸುನಿಲ್ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ ಸಂಸದ ಕ್ಯಾ,ಬ್ರಿಜೇಶ್ ಚೌಟ ದ್ವೀಪ ಪ್ರಜ್ವಲನೆ ಮಾಡಲಿರುವರು.ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಭಾಸ್ಕರಾಭಿನಂದನ ಸನ್ಮಾನ ನೆರವೇರಿಸುವರು. ಗೌರವ ಅತಿಥಿಗಳಾಗಿ ಶಾಸಕರಾದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕಿಶೋರ್ ಕುಮಾರ್ ಪುತ್ತೂರು ಸಹಿತ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಸಂಚಾಲಕರಾದ ಸದಾನಂದ ಪೂಜಾರಿ , ಸಂಚಾಲಕರಾದ ಕೆ. ಟಿ ಸುವರ್ಣ , ಅವಿನಾಶ್ ಸುವರ್ಣ,ನಿಶಾನ್ ಪೂಜಾರಿ, ಸುಧಾಕರ ಕರ್ಕೆರ ಮುಂತಾದವರು ಉಪಸ್ಥಿತರಿದ್ದರು.











