ಉಳ್ಳಾಲ, ಫೆ.07: ಕಾಪಿಕಾಡು ಉಮಾಪುರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಶ್ರೀ ಉಮಾಮಹೇಶ್ವರಿ ದೇವಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಪರಮೇಶ್ವರ ಜೋಷಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ನವ ನಿರ್ಮಾಣಗೊಂಡ ಶ್ರೀ ಭದ್ರಕಾಳಿ ಪೀಠದ ಪ್ರತಿಷ್ಟೆ ನೆರವೇರಿತು. ಅಷ್ಟಬಂಧ ಬ್ರಹ್ಮಕಲಶಾ ಭಿಷೇಕ ಮತ್ತು ಶ್ರೀ ಭದ್ರಕಾಳಿ ಪೀಠದ ಪ್ರತಿಷ್ಠೆ ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾ ಮಂತ್ರಾಕತೆ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಆಡಳಿತ ಮೊತ್ತೇಸರ ಎ.ಜೆ. ಶೇಖರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾಪಿಕಾಡು, ಕಾರ್ಯಾಧ್ಯ ಕ್ಷ ಸುರೇಶ್ ಭಟ್ನಗರ, ಕ್ಷೇತ್ರದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಅತ್ತಾವರ, ಕೋಶಾಧಿಕಾರಿ ಟಿ. ರಘುರಾಮ್ ಶೆಟ್ಟಿ ಮೊತ್ತೇಸರರಾದ ಈಶ್ವರ ಉಳ್ಳಾಲ, ಡಾ| ಆರ್.ಕೆ. ಶೆಟ್ಟಿ ಮಹಾಲಿಂಗ, ಕೂಸಪ್ಪಗಟ್ಟಿ ನಿರ್ಮಲಾ ಕುಂಞಂಬು, ಶರತ್ ಕುಮಾರ್, ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ, ಪ್ರಧಾನ ಕಾವ್ಯದರ್ಶಿ ಗಣೇಶ್ ಕಾಪಿಕಾಡು, ಗೌರಾವಾಧ್ಯಕ್ಷ ಸುರೇಂದ್ರ ನಾಯ್ಕ, ಮಾಧ್ಯಮ ಸಂಚಾಲಕ ಜಗದೀಶ್ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿ ಕಾರಿಗಳು, ಸದಸ್ಯರು,ಸೇವಾಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.











