ಮಂಗಳೂರು, ಫೆ.16 : ಮಂಗಳೂರಿನ ಶಕ್ತಿನಗರದ ಮುತ್ತಪ್ಪ ಕ್ಷೇತ್ರದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ವು ಫೆ.18 ರಿಂದ 24 ರವರೆಗೆ ನಡೆಯಲಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯರು ಹಾಗು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ. ಮೋನಪ್ಪ ಭಂಡಾರಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.22 ರಂದು ಶಕ್ತಿನಗರದ ಮುತ್ತಪ್ಪ ಕ್ಷೇತ್ರದಲ್ಲಿ ತಂತ್ರಿ ಬ್ರಹ್ಮಶ್ರೀ ಪೂಂತೋಟತ್ತಿಲ್ ಪುಡವರ್ ಪರಮೇಶ್ವರನ್ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.
ಫೆ.18 ರಂದು ಬೆಳಿಗ್ಗೆ 9 ಗಂಟೆಗೆ ಉಗ್ರಾಣದಲ್ಲಿ ಗಣಹೋಮ, ಸಾಯಂಕಾಲ 4 ಗಂಟೆಗೆ ಹಸಿರು ಹೊರೆಕಾಣಿಕೆ, ಸಾಯಂಕಾಲ 6.15 ಕ್ಕೆ ಉಗ್ರಾಣ ಉದ್ಘಾಟನೆ, 6.30 ಕ್ಕೆ ಕುಣಿತ ಭಜನೆ,6.45 ಕ್ಕೆ ದ್ವಾರ ಉದ್ಘಾಟನೆ ಮತ್ತು 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಒಡಿಯೂರ್ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಬಿ ಸತೀಶ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 9 ಗಂಟೆಗೆ ಮಹಿಮೆದ ಮಂತ್ರದೇವತೆ ಯಕ್ಷಗಾನ ನಡೆಯಲಿದೆ ಎಂದು ಅವರು ತಿಳಿಸಿದರು.
ಫೆ. 19 ರಂದು ಸಾಯಂಕಾಲ ಸಂಜೆ 5 ಗಂಟೆಗೆ ತಂತ್ರಿಗಳು ಮತ್ತು ವೈದಿಕ ಶ್ರೇಷ್ಠರ ಆಗಮನ ಆಚಾರ್ಯವರಣ ದೇವತಾ ಪ್ರಾರ್ಥನೆ, ಹೊಸ ದೇಗುಲ ಮತ್ತು ಮೂರ್ತಿಯನ್ನು ಸ್ವೀಕರಿಸುವುದು, ದೇಗುಲದ ಶುದ್ದೀಕರಣ ನಡೆಯಲಿದೆ . ಫೆ.20 ರಂದು ಸಾಯಂಕಾಲ ನೂತನ ಮೂರ್ತಿ ಜಲಧಿವಾಸ ನಡೆಯಲಿದೆ. ಫೆ. 22 ರಂದು ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಶಕೀಲಾ ಕಾವ, ಸುಮನಾ ಶರಣ್ , ಹರೀಶ್ ರೈ, ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.











