ಮಂಗಳೂರು, ಮಾ.5 : : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 58ನೇ ಬೋಳಾರ ವಾರ್ಡಿನಲ್ಲಿ ಸುಮಾರು ಒಂದು ಕೋಟಿ ರೂ. ವಿಶೇಷ ಅನುದಾನದಲ್ಲಿ ಟಿವಿಎಸ್ ಫ್ಯಾಕ್ಟರಿ ರಸ್ತೆಯು ಸಮಗ್ರ ಅಭಿವೃದ್ಧಿಗೊಳ್ಳಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಭಾನುಮತಿ ಪಿ.ಎಸ್, ಶೈಲೇಶ್ ಶೆಟ್ಟಿ, ಮಂಡಲದ ಉಪಾಧ್ಯಕ್ಷರಾದ ದೀಪಕ್ ಪೈ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರಸಾದ್ ಬೋಳಾರ್, ಪ್ರಮುಖರಾದ ಅಮಿತ್ ಶೆಟ್ಟಿ, ದಿನೇಶ್ ಕರ್ಕೇರ, ಪ್ರವೀಣ್ ನಿಡ್ಡೆಲ್, ನಾಗರಾಜ್ ಆಚಾರ್ಯ, ಸಾತ್ವಿಕ್ ಭುವನ್, ಸುಜಾತ ಆಳ್ವ, ರೂಪ, ಜಯಶ್ರೀ, ಕೇಶವ್ ಶೆಟ್ಟಿ, ದಿನೇಶ್ ಶೆಟ್ಟಿ, ಸುರೇಶ, ಪುಂಡಲೀಕ ಸುವರ್ಣ, ದೇವದಾಸ್ ಶೆಟ್ಟಿ, ರವಿ ಆಚಾರಿ, ಪುಟ್ಟ, ಗಿರೀಶ್,ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.











