ಮಂಗಳೂರು, ಮಾ. 30 : ಟ್ಯಾಂಕರ್ಗೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಅರ್ಕುಳ ಬ್ರಿಡ್ಜ್ ಬಳಿ ರವಿವಾರ ನಡೆದಿದೆ.
ಮೃತರನ್ನು ಪರಂಗಿಪೇಟೆಯ ನಿವಾಸಿ ಮುಹಮ್ಮದ್ ಆಶ್ಫಕ್ (22) ಎಂದು ಗುರುತಿಸಲಾಗಿದೆ.
ವರದಿ ಪ್ರಕಾರ ರವಿವಾರ ಬೆಳಗ್ಗೆ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ಗೆ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಅರ್ಕುಳ ಸೇತುವೆ ಬಳಿ ಇರುವ ಫರ್ನಿಚರ್ ಅಂಗಡಿಯೊಂದರ ಬಳಿ ಢಿಕ್ಕಿ ಹೊಡೆದಿದ್ದು, ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿದ್ದು,ತಕ್ಷಣ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆ ದಾಖಲಿಸುವ ಹೊತ್ತಿಗೆ ಗಾಯಾಳು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.











