ಮೊಂಟೆಪದವ್,ಏ.06 : ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ, ಪಿ ಎ ಪ್ರಥಮ ದರ್ಜೆ ಕಾಲೇಜು ನಡುಪದವು ಇವರ ವತಿಯಿಂದ ಮೊಂಟೆಪದವ್ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ 2025-26ಕ್ಕೆ ಎಪ್ರಿಲ್ 4, ಶನಿವಾರ ಚಾಲನೆ ನೀಡಲಾಯಿತು.
ಮಂಗಳೂರು ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾನಿಲಯದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ. ಅಮೀನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಪಿ ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಿ. ಎ. ಕಾಲೇಜ್ ಆಫ್ ಇಂಜಿನಿಯರಿಂಗ್ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು ಡಾ. ಇಕ್ಬಾಲ್,ಮೊಂಟೆಪದವು ಪ್ರಗತಿಪರ ಕೃಷಿಕರು ಸತ್ಯನಾರಾಯಣ ಭಟ್ ಎಡಂಬಳೆ, ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯರು ಪ್ರಮೀಳಾ ಕೆ. ಬಿ., ಮೊಂಟೆಪದವು ಕೆ.ಪಿ.ಎಸ್. ಪ್ರಾಥಮಿಕ ವಿಭಾಗ ಶಾಲಾ ಅಭಿವೃದ್ಧಿ ಸಮಿತಿ ಇದರ ಅಧ್ಯಕ್ಷರು ಜ। ಮಹಮ್ಮದ್ ಹನೀಫ್ ಚಂದಹಿತ್ಲು, ನರಿಂಗಾನ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರು ಶೈಲಜಾ ಶೆಟ್ಟಿ,ನರಿಂಗಾನ ಗ್ರಾಮ ಪಂಚಾಯತ್ ಕಾರ್ಯದರ್ಶಿ ನಳಿನಿ,ನರಿಂಗಾನಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರು ಜ। ಅಬ್ದುಲ್ ರಹಿಮಾನ್, ನರಿಂಗಾನ ಯುವಕ ಮಂಡಲದ ಅಧ್ಯಕ್ಷರು ಮುರಳೀಧರ ಶೆಟ್ಟಿ ಮೋರ್ಲ,ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಕುಮಾರಿ ಚೈತ್ರ ಎನ್ ವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಮುಹಮ್ಮದ್ ಆಶಿಕ್ ಮತ್ತು ತಂಡದವರು ಎನ್ ಎಸ್ ಎಸ್ ಗೀತೆಯನ್ನು ನಡೆಸಿಕೊಟ್ಟರು. ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಗುರುರಾಜ್ ಪಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಕುಮಾರಿ ಖೈರುನ್ನೀಸ ವಂದಿಸಿದರು. ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಮುನೀರ ಎ ಕಾರ್ಯಕ್ರಮ ನಿರೂಪಿಸಿದರು.











