ಪುತ್ತೂರು, ಏ. 19 : ಡಿವೈಡರ್ಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪುತ್ತೂರು ಹೊರವಲಯದ ಪಡೀಲ್ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಬೆಳ್ಳಿಪ್ಪಾಡಿ ಗ್ರಾಮದ ಕೊಡಿನೀರು ಬಳಿ ನಿವಾಸಿ ಧನರಾಜ್ ಎಂದು ಗುರುತಿಸಲಾಗಿದೆ
ಪುತ್ತೂರು ಕಡೆಯಿಂದ ಬೆಳ್ಳಿಪ್ಪಾಡಿಯ ತನ್ನ ಮನೆಯ ಕಡೆಗೆ ಧನರಾಜ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಪಡೀಲು ಎಂಬಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಡಿವೈಡರ್ಗೆ ಅಪ್ಪಳಿಸಿ ಅಲ್ಲೇ ಇದ್ದ ಲೈಟ್ ಕಂಬಕ್ಕೆ ಬಡಿದು ಇನ್ನೊಂದು ಬದಿಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕಿನ ಸವಾರ ಮತ್ತು ಸಹಸವಾರನಿಗೆ ಗಾಯಗಳಾಗಿದ್ದು ಇಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










