ಮಂಗಳೂರು, ಮೇ. 04 : ಪುತ್ತೂರು ಬ್ರದರ್ಸ್ ಎಂಟರ್ಟೇನ್ಮೆಂಟ್ ರವರ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಚಲನಚಿತ್ರ ‘ಮಂಗಮಾಯ’ ಇದೇ ಮೇ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಪ್ರಸಾದ್ ಕೆ.ಎಸ್.ಅವರು ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾವಿದರಿಗೆ ಯಾವುದೇ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ ಒಂದೇ ಲೊಕೇಶನ್ ನಲ್ಲಿ 43 ದಿನಗಳ ಕಾಲ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಿಸಲಾದ ಸಿನೆಮಾವಾಗಿದೆ ಎಂದರು.
ಈ ಚಿತ್ರದಲ್ಲಿ ರಾಧೇಶ್ ಶೆಣೈ, ರಂಜನ್ ಶೆಟ್ಟಿ, ಪ್ರಕಾಶ್ ಶೆಣೈ, ಪ್ರಸನ್ನ ಪುತ್ತೂರು, ಮಹಮ್ಮದ್ ಹನೀಫ್, ಅಕ್ಷತ್ ಅಮಿನ್ ,ಚಂದನ್ ಕುಮಾರ್, ಬಿ.ಅರುಣ್ ಶೆಣೈ, ಚೇತನ್ ಪುತ್ತೂರು, ವಿಜಯಲಕ್ಷ್ಮಿ ಎಮ್, ಮಂಜುನಾಥ್ ಎಂ.ಎನ್, ಸಿದ್ದು ಮತ್ತಿತರರು ನಟಿಸಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಸನ್ನ ಪುತ್ತೂರು, ರಾಧೇಶ್ ಶೆಣೈ ಉಡುಪಿ,ಅಕ್ಷತ್ ಅಮೀನ್ ಉಪಸ್ಥಿತರಿದ್ದರು.











