ಮಂಗಳೂರು, ಮೇ 14: ರಾಘವೇಂದ್ರ ಸ್ಟುಡಿಯೋ ಪ್ರೆಸೆಂಟ್ಸ್ ಹಾಗೂ ಕೋಸ್ಟಲ್ ಫಿಲಂಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಕನ್ನಡ ಟೆಲಿಚಿತ್ರ ‘ಮೊನಾಲಿಸಾ- ಇಸ್ ಇನ್ ಟ್ರಬಲ್ ಪ್ರೀಮಿಯರ್ ಪ್ರದರ್ಶನ ಮೇ 15ರಿಂದ 17ರ ವರೆಗೆ ಮಂಗಳೂರಿನ ಭಾರತ್ ಸಿನೆಮಾಸ್ನಲ್ಲಿ ನಡೆಯಲಿದೆ. ಎಂದು ಚಿತ್ರದ ನಿರ್ದೇಶಕ ಬೃಂದಾವನ್ ಎನ್. ಶೆಟ್ಟಿ ಅವರು ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರವು ಡ್ರಿಲ್ಲರ್, ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿದೆ. ಚಿತ್ರದ ಕಥೆಯನ್ನು ಶ್ರೇಯಸ್ ಕುಮಾರ್ ಫರಂಗಿಪೇಟೆ ಬರೆದಿದ್ದು ಮಂಗಳೂರಿನ ಸುತ್ತಮುತ್ತಲಲ್ಲಿ ಚಿತ್ರೀಕರಣಗೊಂಡಿದೆ. ರಂಗಿತರಂಗ ಖ್ಯಾತಿಯ ಕಾರ್ತಿಕ್ ವಿ.ಆರ್., ಯಜೇಶ್ ಬರ್ಕೆ ಈ ಟೆಲಿಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ನ್ಯಾಯವಾದಿ ನವೀನ್ ಕುಮಾರ್ ಶೆಟ್ಟಿ, ಶ್ರೇಯಸ್ ಕುಮಾರ್ ಫರಂಗಿಪೇಟೆ, ನಟಿ ವಿನುತಾ ಸಿ. ನಾಯಕ್, ನ್ಯಾಯವಾದಿ ಪ್ರಸಾದ್ ಪಾಲನ್, ದೇವಿ ಪ್ರಸಾದ್ ಕೊಂಚಾಡಿ, ದಿನೇಶ್ ಕೋಟ್ಯಾನ್, ಅಭಿನವ್ ಉಪಸ್ಥಿತರಿದ್ದರು.











