ಲಂಡನ್: ದುಬೈಯ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಹೆಂಡತಿ ಹಯಾ ಬಿಂಟ್ ಅಲ್ ಹುಸೇನ್(47) ಅವರಿಗೆ ವಿಚ್ಛೇದನ ನೀಡಿದ್ದು, ಬ್ರಿಟನ್ ಹೈಕೋರ್ಟ್ ಅವರ ಅರ್ಜಿಯನ್ನು ಇತ್ಯರ್ಥಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ. ದುಬೈ ದೊರೆ ತಮ್ಮ ವಿಚ್ಛೇದಿತ ಪತ್ನಿಗೆ 5,527 ಕೋಟಿ ರೂ.ಗಳಷ್ಟು ಜೀವನಾಂಶ ಕೊಡಬೇಕು ಎಂದು ಬ್ರಿಟನ್ ಹೈಕೋರ್ಟ್ ತೀರ್ಪು ನೀಡಿದೆ.
ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾ ಬಿಂಟ್ ಅಲ್ ಹುಸೇನ್ ಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ ಮತ್ತು ಹಯಾ ಬಿಂಟ್ ಅಲ್ ಹುಸೇನ್ ಅವರಿಗೆ ದಂಪತಿಗೆ ಅಲ್ ಜಲಿಲಿಯಾ(14) ಜಯದ್ (9) ಎಂಬ ಇಬ್ಬರು ಮಕ್ಕಳಿದ್ದಾರೆ.
ಇನ್ನು ಈ ಎರಡು ಮಕ್ಕಳ ಶಿಕ್ಷಣಕ್ಕಾಗಿ 96 ಕೋಟಿ ರೂ., ಹಾಗೂ ಜವಾಬ್ದಾರಿ ನಿಭಾಯಿಸಲು 112 ಕೋಟಿ ರೂ. ವಾರ್ಷಿಕವಾಗಿ ನೀಡಬೇಕಿದ್ದು, ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ಬ್ಯಾಂಕ್ ಗ್ಯಾರಂಟಿಯಾಗಿ ನೀಡಬೇಕಾಗುತ್ತದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
7 Comments
sea cafe ambience
winter jazz
Pingback: führerschein kaufen original
coffee shop ambience
Pingback: xo666
Pingback: รักษารากฟันอุบล
Pingback: ดูหนังเต็มเรื่อง