ಮಹಾರಾಷ್ಟ್ರ: ಹಕ್ಕಿ ಜ್ವರದ ಭಯದ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮಹಾರಾಷ್ಟ್ರದ ಥಾಣೆಯ ಸುಮಾರು 25,000 ಕೋಳಿಗಳನ್ನು ಕೊಲ್ಲಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಥಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನ ವೆಹ್ಲೋಲಿ ಗ್ರಾಮದ ಜಮೀನಿನಲ್ಲಿ ಸುಮಾರು 100 ಕೋಳಿಗಳು ಹಠಾತ್ತನೆ ಸಾವನ್ನಪ್ಪಿದ ಕೆಲವು ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಥಾಣೆ ಜಿಲ್ಲಾ ಪರಿಷತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಭೌಸಾಹೇಬ್ ದಂಗ್ಡೆ, ಪರೀಕ್ಷೆಗಳ ಫಲಿತಾಂಶಗಳು ಎಚ್5ಎನ್1 ಹಕ್ಕಿಜ್ವರದಿಂದಾಗಿ ಕೋಳಿಗಳು ಸತ್ತಿರುವುದನ್ನು ದೃಢಪಡಿಸಿದೆ ಎಂದು ಹೇಳಿದ್ದಾರೆ.