ನವದೆಹಲಿ: ಹುಬ್ಬಳ್ಳಿಯಿಂದ ಮಂಗಳೂರು ಮತ್ತು ಮೈಸೂರಿಗೆ ಸಂಪರ್ಕ ಒದಗಿಸುವ ವಿಮಾನ ಹಾರಾಟ ಮೇ 1ರಿಂದ ಆರಂಭಗೊಳ್ಳಲಿದೆ.
ಮೇ 1ರಿಂದ ವಾರದಲ್ಲಿ 4 ದಿನ ಮಂಗಳೂರು ನಗರಕ್ಕೆ ಮತ್ತು ಮೇ 3 ರಿಂದ ವಾರದ ಮೂರು ದಿನ ಮೈಸೂರಿಗೆ ವಿಮಾನಯಾನ ಆರಂಭಗೊಳ್ಳಲಿದೆ.
ಹುಬ್ಬಳ್ಳಿಯಿಂದ ಮಂಗಳೂರು- ಮೈಸೂರಿಗೆ ವಿಮಾನ ಹಾರಾಟ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವ್ರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.