ಸೆನೆಗಲ್: ಪಶ್ಚಿಮ ಸೆನೆಗಲ್‌ನ ಟಿವೌವಾನ್ ನಗರದ ಪ್ರಾದೇಶಿಕ ಆಸ್ಪತ್ರೆಯೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 11 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಅಧ್ಯಕ್ಷ ಮ್ಯಾಕಿ ಸಾಲ್ ತಿಳಿಸಿದ್ದಾರೆ.
ಟಿವೌವಾನ್ ನಗರದಲ್ಲಿರುವ ಮೇಮ್ ಅಬ್ದೌ ಅಜೀಜ್ ಸೈ ದಬಖ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಈ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 11 ನವಜಾತ ಶಿಶುಗಳು ಮೃತಪಟ್ಟಿವೆ. ಘಟನೆಯಲ್ಲಿ 3 ಶಿಶುಗಳನ್ನು ರಕ್ಷಿಸಲಾಗಿದೆ ಎಂದು ನಗರದ ಮೇಯರ್ ಡೆಂಬಾ ಡಿಯೋಪ್ ಹೇಳಿದ್ದಾರೆ