ಕಾಸರಗೋಡು : ಕಾರು ಮತ್ತು ಮಿನಿ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಆ. 27, ಶನಿವಾರದಂದು ಚೆರ್ವತ್ತೂರು ಸಮೀಪ ನಡೆದಿದೆ.
ಮೃತ ವ್ಯಕ್ತಿಯನ್ನು ತುರುತ್ತಿ ಓರ್ಕಲಂನ ಕೆ.ಪಿ. ರಜಿತ್ (31) ಎಂದು ಗುರುತಿಸಲಾಗಿದೆ. ಅಖಿಲ್ (30) ಸಿನೋಜ್ (33) ಮತ್ತು ಜಿತ್ತು (25) ಗಾಯಗೊಂಡವರು. ಗಾಯಾಳುಗಳನ್ನು ಕಣ್ಣೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಸಂಜೆಯ ಹೊತ್ತಿಗೆ ರಜಿತ್ ಮತ್ತು ಸ್ನೇಹಿತರು ಪರಶ್ಯಿನಿಕಡವಿಗೆ ತೆರಳಿ ಮರಳುತ್ತಿದ್ದಾಗ ಇವರು ಸಂಚರಿಸುತ್ತಿದ್ದ ಕಾರು ಮತ್ತು ಮೀನು ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಢಿಕ್ಕಿಯ ಹೊಡೆತಕ್ಕೆ ಕಾರು ಪೂರ್ತಿ ನಜ್ಜುಗುಜ್ಜಾಗಿ ದೆ, ಈ ವೇಳೆ ರಜಿತ್ ಮೃತಪಟ್ಟರು. ಕಾರಲ್ಲಿ ಸಿಲುಕಿದ ಉಳಿದವರನ್ನು ಸ್ಥಳೀಯರು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.