ಕಾರ್ಕಳ: ವಿಪರೀತ ಮದ್ಯವ್ಯಸನಿಯಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತರನ್ನು ಕಾರ್ಕಳ ತಾಲೂಕಿನ ರೆಂಜಾಳ ಪೆರಲ್ದಬೆಟ್ಟು ನಿವಾಸಿ ಮಥಾಯಸ್ ಸಾಂಕ್ತಿಸ್(55) ಎಂದು ಗುರುತಿಸಲಾಗಿದೆ.
ಅವರು ಮಾನಸಿಕವಾಗಿ ಜೀವನದಲ್ಲಿ ನೊಂದು ಸೆ .16 ಶುಕ್ರವಾರ ತಮ್ಮ ತಂದೆಯವರ ಜಾಗದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.