ಬಾಯಾರು,ಫೆ.24: ಬೀಟಾ ಪ್ರೊಡಕ್ಷನ್ ಬ್ಯಾನರಿನಲ್ಲಿ ತಯಾರಾಗುವ “ಸಿಲಿಕಾನ್ ಸಿಟಿ” ಕನ್ನಡ ಕಿರುಚಿತ್ರದ ಮುಹೂರ್ತ ಕಾರ್ಯಕ್ರಮವು ಫೆ.17, ಶುಕ್ರವಾರ ಬಾಯಾರು ಪೆರುವೊಡಿ ಸರವು ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಶ್ರೀ ನಾರಾಯಣ ಬಾಯಾರು ಇವರ ಉಪಸ್ಥಿತಿಯಲ್ಲಿ ನೆರವೇರಿತು.
ಮುಹೂರ್ತ ಕಾರ್ಯಕ್ರಮದಲ್ಲಿ ಕಿರುಚಿತ್ರದ ನಿರ್ದೇಶಕರಾದ ತುಕಾರಾಮ ಬಾಯಾರು , ನಾಯಕ ನಟರಾದ ಶರತ್ ಚಂದ್ರ ಬಾಯಾರು, ನಾಯಕಿ ಗೌತಮಿ ,ಗಿರೀಶ್ ಸಾಲ್ಯಾನ್ ಮುಳಿಯ, ಪ್ರವೀಣ್ ಆಚಾರ್ಯ ಪುತ್ತೂರು, ಬಾಲಪ್ರತಿಭೆ ಚುಕ್ಕಿ ವಿಟ್ಲ , ಮಂಗಳಗೌರಿ ಭಟ್ ಸರವು, ಆಶಾಚಂದ್ರ ಸರವು, ಸಂಧ್ಯಾ ಮಂಗಿಲಪದವು, ಪ್ರವೀಣ್ ಜಯ ವಿಟ್ಲ, ಕೃಷ್ಣ ಆಚಾರ್ಯ ಬಳ್ಳೂರು, ಧರ್ಮೇಂದ್ರ ಆಚಾರ್ಯ ಬಳ್ಳೂರು, ಶೈಲೇಶ್ ಆಚಾರ್ಯ ಪುತ್ತಿಗೆ, ಕಿರಣ್ ಆಚಾರ್ಯ ಪುತ್ತಿಗೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗಿರೀಶ್ ಸಾಲ್ಯಾನ್ ಮುಳಿಯ ಸಂಯೋಜಿಸಿದರು. ಕಿರಣ್ ಆಚಾರ್ಯ ಪುತ್ತಿಗೆ ನಿರೂಪಿಸಿದರು.