ಮಂಗಳೂರು,ಮೇ.07: ದೇರೆಬೈಲ್ ದಕ್ಷಿಣ ವಾರ್ಡಿನ ವ್ಯಾಪ್ತಿಗೆ ಬರುವ ಬಿಜೈ ಕಾಪಿಕಾಡ್ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊರವರು ಮೇ.3, ಬುಧವಾರದಂದು ಮನೆ ಮನೆಗೆ ಭೇಟಿ ನೀಡಿ ಮತ ಯಾಚನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಉಪ ಮೇಯರ್ ರಜನೀಶ್,ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಒಬಿಸಿ ಅಧ್ಯಕ್ಷ ವಿಶ್ವಾಸ್ ದಾಸ್, ವಾರ್ಡ್ ಅಧ್ಯಕ್ಷ ರಾಜೇಂದ್ರ ಚಿಲಿಂಬಿ,ಶೇ ಲಿಯಾಕತ್ ಶಾಹ, ಜಗದೀಶ್, ಪ್ರದೀಪ್ ಕಾಪಿಕಾಡ್, ಮೆಲ್ವಿನ್ ಲೋಬೊ ಮೊದಲಾದವರು ಉಪಸ್ಥಿತರಿದ್ದರು.