ಉಳ್ಳಾಲ, ಜೂ. 04: ಟೊಯಿಂಗ್ ವಾಹನ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿ ವೃದ್ದರೋರ್ವರು ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ರಾ.ಹೆ.66 ರಲ್ಲಿ ಜೂ . 2, ಶುಕ್ರವಾರ ನಡೆದಿದೆ.
ಟೋಯಿಂಗ್ ವಾಹನ ಉಳ್ಳಾಲ ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಾಪು ಎಂಬಲ್ಲಿ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಅಪಘಾತ ಸಂಭವಿಸಿ ಮೃತಪಟ್ಟ ವ್ಯಕ್ತಿ ಅಂದಾಜು 70ರ ಹರೆಯದವರಾಗಿದ್ದು, ಅವರ ಬಳಿ ಯಾವುದೇ ಗುರುತಿನ ಚೀಟಿಗಳು ಲಭ್ಯವಾಗಿಲ್ಲ. ವಾರೀಸುದಾರರಿದ್ದಲ್ಲಿ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.